Arbaaz Khan: ಗರ್ಲ್ ಫ್ರೆಂಡ್ ಗೆ ಗುಡ್ ಬೈ ಹೇಳಿದ ಸಲ್ಮಾನ್ ಖಾನ್ ಸಹೋದರ; ಪ್ರತಿಕ್ರಿಯೆ ಕೊಟ್ಟ ಜಾರ್ಜಿಯಾ

Written by Soma Shekar

Published on:

---Join Our Channel---

Arbaaz Khan: ಬಾಲಿವುಡ್‌ ನ ಸ್ಟಾರ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaaz Khan) ಬಾಲಿವುಡ್ ಹಾಗೂ ಕೆಲವೊಂದು ದಕ್ಷಿಣದ ಸಿನಿಮಾಗಳಲ್ಲೂ ನಟಿಸುವ ಮೂಲಕ ಸಿನಿಮಾರಂಗದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೂ ಅವರನ್ನು ಸಲ್ಮಾನ್ ಖಾನ್ ಅವರ ಸಹೋದರ ಎಂದೇ ಗುರುತಿಸಲಾಗುತ್ತದೆ. ಅರ್ಬಾಜ್ ಖಾನ್ ನಟಿ, ನಿರೂಪಕಿ ಹಾಗೂ ಡ್ಯಾನ್ಸರ್ ಆಗಿರುವ ಮಲೈಕಾ (Malaika Arora) ಜೊತೆಗೆ ಪ್ರೇಮ ವಿವಾಹವಾಗಿದ್ರು.

ಈ ಜೋಡಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಕೆಲವೊಂದು ಕಾರಣಗಳಿಂದಾಗಿ ಕೆಲವು ವರ್ಷಗಳ ಹಿಂದೆಯೇ ಅರ್ಬಾಜ್ ಖಾನ್ ಮತ್ತು ಮಲೈಕಾ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಪತ್ನಿ ದೂರವಾದ ಮೇಲೆ ಅರ್ಬಾಜ್ ಖಾನ್ ಮಾಡೆಲ್ ಜಾರ್ಜಿಯಾ ಆ್ಯಂಡ್ರಿಯಾನಿ (Giorgia Andriani) ಜೊತೆಗೆ ತಮ್ಮ ರಿಲೇಶನ್ ಶಿಪ್ ನಲ್ಲಿದ್ದರು. ಆದರೆ ಈಗ ಗರ್ಲ್ ಫ್ರೆಂಡ್ ಜೊತೆ ಕೂಡಾ ಬ್ರೇಕಪ್ ಮಾಡಿಕೊಂಡಿದ್ದಾರೆನ್ನಲಾಗಿದೆ.

ಈ ವಿಷಯವನ್ನು ಸ್ವತಃ ಜಾರ್ಜಿಯಾ ಹೇಳಿದ್ದಾರೆ. ಜಾರ್ಜಿಯಾ ನನಗೂ ಮತ್ತು ಅರ್ಬಾಜ್ ಖಾನ್ ಗೂ ನಡುವೆ ಬ್ರೇಕ್ ಅಪ್ ಆಗಿದೆ. ಆದರೆ ಆತನ ಮೇಲಿರುವ ರೋಮ್ಯಾಂಟಿಕ್ ಫೀಲಿಂಗ್ಸ್ ಸದಾ ಹಾಗೆ ಇರುತ್ತೆ. ಈ ಬ್ರೇಕಪ್ ನಿಂದ ನಮ್ಮ ಮಧ್ಯೆ ಇರುವ ಸ್ನೇಹದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಜಾರ್ಜಿಯಾ ಆಂಡ್ರಿಯಾನಿ ಹೇಳಿಕೊಂಡಿದ್ದಾರೆ.

ಬ್ರೇಕಪ್ ನಂತರ ಕೂಡಾ ತನ್ನನ್ನು ಅರ್ಭಾಜ್ ಗರ್ಲ್ ಫ್ರೆಂಡ್ ಎಂದು ಹೇಳುವುದು ಅಷ್ಟೊಂದು ಸರಿಯಲ್ಲ ಎಂದಿದ್ದಾರೆ. ಅರ್ಬಾಜ್ ಮತ್ತು ಜಾರ್ಜಿಯಾ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ರಿಲೇಷನ್ಶಿಪ್ ನಲ್ಲಿ ಇದ್ದರು. ಖಂಡಿತ ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಇಬ್ಬರ ನಡುವೆ ಬ್ರೇಕ್ ಅಪ್ ಆಗಿರುವುದು ತಿಳಿದು ಬಂದಿದೆ.

Leave a Comment