BMC ಆಯುಕ್ತರ ಮೇಲೆ ಸಿಟ್ಟು, ಸ್ವತಃ ಸ್ವಚ್ಚತಾ ಪರಿಚಾರಕಿಯಾಗಿ ರಸ್ತೆಯ ಕಸ ತೆಗೆದ ರಾಖಿ ಸಾವಂತ್

Written by Soma Shekar

Published on:

---Join Our Channel---

ಜೋರು ಮಳೆ ಎಡಬಿಡದೆ ಸುರಿದರೆ ನಗರಗಳ ಪಾಡು ಹೇಳತೀರದು, ಇನ್ನು ಮಹಾ ನಗರಗಳಾದರೆ ಅಲ್ಲಿನ ಪರಿಸ್ಥಿತಿಯನ್ನು ಊಹೆ ಸಹಾ ಮಾಡಿಕೊಳ್ಳುವುದು ಕಷ್ಟವಾಗಿ ಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಾನಗರಗಳಲ್ಲಿ ಕಸದ ಸಮಸ್ಯೆ ದುಪ್ಪಟ್ಟಾಗುತ್ತದೆ. ಮಳೆ ಬರುವಾಗ ಕಸ ವಿಲೇವಾರಿ ಮಾಡುವುದು ಸಾಧ್ಯವಾಗುವುದಿಲ್ಲ. ಮುಂಬೈ ಮಹಾನಗರ ಸೇರಿದಂತೆ ದೇಶದ ಕೆಲವು ನಗರಗಳಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಕಸದ ಸಮಸ್ಯೆ ಎದುರಾಗಿದೆ. ಇದೇ ವಿಚಾರವಾಗಿ ಈಗ ನಟಿ ರಾಖಿ ಸಾವಂತ್ ಮಾಡಿದ ಕೆಲಸವೊಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ‌.

ಬಾಲಿವುಡ್ ನಲ್ಲಿ ತನ್ನ ವಿ ವಾ ದಗಳಿಂದಲೇ ಹೆಚ್ಚು ಸದ್ದು ಮಾಡುವ ನಟಿ ರಾಖಿ ಸಾವಂತ್ ಡ್ರಾಮಾ ಕ್ವೀನ್ ಎಂಬುದಾಗಿಯೇ ಜನಪ್ರಿಯ. ಇದೀಗ ರಾಖಿ ಸಾವಂತ್ ಮುಂಬೈ ನಗರದ ಬೀದಿಯೊಂದರ ರಸ್ತೆಯಲ್ಲಿ ತುಂಬಿದ್ದ ಕಸದ ಬಗ್ಗೆ ತೀವ್ರ ಅಸಮಾಧಾನಗೊಂಡು ತಾನೇ ಅದನ್ನು ಸ್ವಚ್ಛ ಮಾಡಲು ಮುಂದಾಗಿದ್ದಾರೆ. ಹೌದು, ನಟಿ ರಾಖಿ ಸಾವಂತ್ ಪ್ರತಿದಿನ ತಾನು ಜಿಮ್ ಗೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ನೋಡಿ ಬೇಸರಗೊಂಡಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ಸಿಬ್ಬಂದಿ ಅದನ್ನು ತೆರವುಗೊಳಿಸುತ್ತಾರೆ ಎಂದು ಎರಡು ಮೂರು ದಿನ ಕಾದಿದ್ದಾರೆ.

ಎರಡು, ಮೂರು ದಿನಗಳು ಕಳೆದರೂ ರಸ್ತೆಯಲ್ಲಿದ್ದ ಕಸ ಸ್ವಚ್ಚವಾಗದ ಕಾರಣ ನಟಿ ರಾಖಿ ಸಾವಂತ್ ತಾವೇ ರಸ್ತೆಗೆ ಇಳಿದಿದ್ದಾರೆ. ಸ್ವಚ್ಛ ಮಾಡಲು ಅಗತ್ಯ ಇರುವ ಪರಿಕರಗಳನ್ನು ಹಿಡಿದು ರಸ್ತೆಯಲ್ಲಿ ಒಂದಷ್ಟು ಕಸವನ್ನು ತೆಗೆದಿದ್ದಾರೆ. ಈ ವೇಳೆ ಮಹಾನಗರ ಪಾಲಿಕೆಯ ಕಮೀಷನರ್ ಮತ್ತು ಸಿಬ್ಬಂದಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ರಾಖಿ ಎಲ್ಲಾ ಅಧಿಕಾರಿಗಳು ಮಳೆಯಲ್ಲಿ ಗಡದ್ದಾಗಿ ನಿದ್ದೆ ಮಾಡುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ರಾಖಿ ರಸ್ತೆ ಸ್ವಚ್ಛ ಮಾಡಿದ ವೀಡಿಯೋ ವೈರಲ್ ಕೂಡಾ ಆಗಿದೆ‌.

ರಾಖಿ ಯ ಇಂತಹುದೊಂದು ಕಾರ್ಯದ ವಿಚಾರವು ಸುದ್ದಿಯಾದ ಮೇಲೆ ಸಾಮಾಜಿಕ ಜಾಲತಾಣಗಳ ಲ್ಲಿ ನೆಟ್ಟಿಗರು ರಾಖಿಗೆ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಮಹಾನಗರ ಪಾಲಿಕೆಯ ಗಮನ ಸೆಳೆದ ರಾಖಿ ಬಗ್ಗೆ ಜನರು ಒಂದು ಒಳ್ಳೆಯ ಕೆಲಸವನ್ನು ನಟಿ ಮಾಡಿದ್ದಾರೆ. ಎಲ್ಲಾ ಸೆಲೆಬ್ರಿಟಿ ಗಳು ಸಹಾ ಇದೇ ರೀತಿ ಸರ್ಕಾರ ಹಾಗೂ ಅಧಿಕಾರಿಗಳಲ್ಲಿ ಜಾಗರೂಕತೆ ಮೂಡಿಸುವಂತಹ ಕೆಲಸವನ್ನು ಮಾಡಿದರೆ ಎಲ್ಲಾ ಕಡೆಗಳಲ್ಲೂ ಸಹಾ ಅನೇಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆ ಎಂದಿದ್ದಾರೆ.

Leave a Comment