Bigg Boss Kannada 11 ಬಿಗ್ ಬಾಸ್ ಸೀಸನ್ ಕನ್ನಡ (Bigg Boss Kannada 11) ಮೂರನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ಒಂದಷ್ಟು ಮಾತಿನ ಕಾಳಗ ನಡೆದಿದೆ. ಲೇಡಿ ಡಾನ್ ಎನಿಸಿಕೊಂಡಿರೋ ಚೈತ್ರಾ ಹಾಗೇ ಮೇಲ್ ಡಾನ್ ಅಂತ ಹೇಳಿರೋ ಜಗದೀಶ್ ಅವರು ಸಾಕಷ್ಟು ಸದ್ದು ಸುದ್ದಿಯನ್ನು ಮಾಡುತ್ತಿದ್ದಾರೆ. ಬಿಗ್ ಬಾಸ್ ಶೇರ್ ಮಾಡಿದ ಪ್ರೊಮೋದಲ್ಲಿ ಅವರು ಮುಖವಾಡ ಹಾಕಿಕೊಂಡು ಜೀವನ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಅವರು ಯಮುನಾ ಅವರ ಜೊತೆ ಮಾತನಾಡ್ತಾ, ವಿಷ ಹಾಕ್ಬಿಡಿ, ಇವ್ರೆಲ್ಲಾ ಸತ್ತೋಗ್ಲಿ ಎಂದು ಹೇಳಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅವರ ಮಾತುಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಅಲ್ಲದೇ ಅನೇಕರು ಊರಿಗೆಲ್ಲಾ ಉಪದೇಶ ಮಾಡೋ ಇವ್ರು ಹೀಗೆಲ್ಲಾ ಮಾತಾಡೋದು ಸರೀನಾ ಅಂತಿದ್ದಾರೆ ನೆಟ್ಟಿಗರು.
ಲಾಯರ್ ಜಗದೀಶ್ (Lawyer Jagadish) ಅವರುವವಿಷ ಹಾಕಿ ಸಾಯ್ಸಿಸಿ ಬಿಡಿ ಅಂತ ಯಮುನಾಗೆ ತಮಾಷೆಗೆ ಹೇಳಿದ್ದಾರೆ. ಐಶ್ವರ್ಯಾ ಅವರು ನರಕದ ಮನೆಗೆ ಹೋಗಿ ಮಾತಾಡಿಕೊಂಡು ಹೋಗಿದ್ರು. ಅದೇ ಸಮಯದಲ್ಲಿ ಯಮುನಾ (Yamuna) ಜತೆ ಮಾತನಾಡ್ತಿದ್ದ ಜಗದೀಶ್ ಅವರು ಯಮುನಾ ಅವರಿಗೆ ತಮಾಷೆಯಾಗಿ ಇವರಿಗೆಲ್ಲ ವಿಷ ಹಾಕಿ ಮೇಡಮ್. ಇಲ್ಲೊಂದು ಅಲ್ಲೊಂದು ಮಾತಾಡ್ತಾರೆ ಎಂದು ತಮಾಷೆ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಅವರ ಆರ್ಭಟ ಜೋರಾಗಿ ನಡೆದಿದೆ. ಇತ್ತ ಸ್ವರ್ಗದ ಸ್ಪರ್ಧಿಗಳ ಜೊತೆಗೆ ಅತ್ತ ನರಕದ ಸ್ಪರ್ಧಿಗಳ ಜೊತೆಗೆ ಎರಡೂ ಕಡೆ ಕೂಡಾ ಆಟ ಆಡ್ತಿದ್ದಾರೆ. ಗೌತಮಿ (Gautami Jadhav) ಹತ್ರ ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. ನಾನು ಎರಡು ಮನೆಯನ್ನು ಕಂಟ್ರೋಲ್ ಮಾಡ್ತಿದ್ದೀನಿ ಅಂತ ಹೇಳಿದ್ದಾರೆ.
Lakshmi Nivasa ತಾಳಿ ರಹಸ್ಯ ಬಯಲಾಯ್ತು, ಸಿದ್ಧೇ ಗೌಡ್ರ ಖದರ್ ಜೋರಾಯ್ತು; ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಾಯ್ತು