Big Boss: ಎಲ್ಲೆ ಮೀರಿದ ರಾಕ್ಷಸ ಗಂಧರ್ವ ಟಾಸ್ಕ್; ಪ್ರತಾಪ್, ಸಂಗೀತಾ ಆಸ್ಪತ್ರೆಗೆ?

Written by Soma Shekar

Published on:

---Join Our Channel---

Big Boss Kannada 10: ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಈ ವಾರ ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್ ನಡೆಯುತ್ತಿದ್ದು, ಈಗಾಗಲೇ ಟಾಸ್ಕ್ ನ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಿಂದಿನ ಕೆಲವು ಸೀಸನಗಳಲ್ಲೂ ಕೂಡಾ ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ನಡೆದಿತ್ತು ಆದರೆ ಈ ಬಾರಿ ಟಾಸ್ಕ್ ನ ಅಬ್ಬರ ಬಹಳ ಜೋರಾಗಿದೆ.

ಮಂಗಳವಾರದ ಎಪಿಸೋಡ್ ನಲ್ಲಿ ಹಾಗೂ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ (Sangeetha Sringeri) ಅವರ ತಂಡ ರಾಕ್ಷಸರಾಗಿ ಕಾಣಿಸಿಕೊಂಡಿದ್ದರು. ವರ್ತೂರು ಸಂತೋಷ್ ಅವರ ತಂಡ ಗಂಧರ್ವರಾಗಿದ್ರು. ಟಿವಿಯಲ್ಲಿ ಪ್ರಸಾರವಾದ ಎಪಿಸೋಡ್ ಗಳಲ್ಲಿ ಟಾಸ್ಕ್ ನಲ್ಲಿ ಏನೆಲ್ಲಾ ನಡೆಯಿತು ಅನ್ನೋದನ್ನ ಪ್ರೇಕ್ಷಕರು ನೋಡಿದ್ದಾರೆ. ಇದನ್ನೂ ಓದಿ : Himanshi Asim: ಪ್ರೇಮಕ್ಕಿಂತ ಧರ್ಮ ಮುಖ್ಯ, ಬಿಗ್ ಬಾಸ್ ಜೋಡಿಯ ಬ್ರೇಕಪ್; ಆಸಿಮ್ ಗೆ ಗುಡ್ ಬೈ ಹೇಳಿದ ಹಿಮಾನ್ಷಿ

ಇನ್ನು ನಿನ್ನೆಯ ಎಪಿಸೋಡ್ ಕೊನೆಯ ಹಂತದಲ್ಲಿ ಗಂಧರ್ವರು ರಾಕ್ಷಸರಾಗಿ, ರಾಕ್ಷಸರಾಗಿದ್ದವರು ಗಂಧರ್ವರಾಗಿ ಬದಲಾದರು. ಈ ಮೂಲಕ ಟಾಸ್ಕ್ ನ ಎರಡನೇ ಹಂತ ಶುರುವಾಯಿತು. ಟಾಸ್ಕ್ ನ ಭಾಗವಾಗಿ ವಿನಯ್ (Vinay) ಮತ್ತು ನಮ್ರತಾ (Namratha) ಗಂಧರ್ವರ ತಂಡಕ್ಕೆ ಭರ್ಜರಿ ಆಟ ಆಡಿಸುತ್ತಿರುವಾಗಲೇ ಹೊಸದೊಂದು ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಕುರಿತಾಗಿ ಯೂಟ್ಯೂಬ್ ನಲ್ಲಿ ಒಂದಷ್ಟು ವಿಡಿಯೋಗಳು ಸಹಾ ಹರಿದಾಡುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದೆ. ಈಗ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ನಲ್ಲಿ ಆಟದ ಎಲ್ಲೇ ಮೀರಿದ್ದು ಟಾಸ್ಕ್ ಆಡುವಾಗ ಸಮಸ್ಯೆ ಎದುರಾಗಿ ಸಂಗೀತ ಮತ್ತು ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ..

ಆದರೆ ಈ ವಿಚಾರವಾಗಿ ಸ್ಪಷ್ಟ ಮಾಹಿತಿ ಎಲ್ಲೂ ಲಭ್ಯವಾಗಿಲ್ಲ. ಲೈವ್ ಅಪ್ಡೇಟ್ಸ್ ನೀಡುವ ಯೂಟ್ಯೂಬ್ ಚಾನೆಲ್ ಗಳಲ್ಲಿ ಈಗ ಈ ಸುದ್ದಿ ಹರಿದಾಡಿದೆ. ಲೈವ್ ನಲ್ಲಿ ನೋಡಿದಾಗಲೂ ಬಿಗ್ ಬಾಸ್ ಮನೆಯಲ್ಲಿ ಸಂಗೀತ ಮತ್ತು ಪ್ರತಾಪ್ ಕಾಣಿಸುತ್ತಿಲ್ಲ. ಹಾಗಾದ್ರೆ ಸಂಗೀತ ಹಾಗೂ ಪ್ರತಾಪ್ ಗೆ ಏನಾದ್ರೂ ಆಯ್ತಾ ಅಥವಾ ವಿಷಯ ಬೇರೆ ಏನಾದರೂ ಇದೆಯಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment