ಕರಣ್ ಜೋಹರ್ ಗೆ ಕೊಕ್ ಕೊಟ್ಟು ಸಲ್ಮಾನ್ ಖಾನ್ ಗೆ ಮಣೆ ಹಾಕಿದ ಮೇಕರ್ಸ್: ಫ್ಯಾನ್ಸ್ ಥ್ರಿಲ್

0 1

Big Boss OTT: ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಕಾರ್ಯಕ್ರಮ ಎಂದರೆ ಅದು ಬಿಗ್ ಬಾಸ್ (Big Boss). ಈ ಕಾರ್ಯಕ್ರಮ ವಿವಿಧ ಭಾಷೆಗಳಲ್ಲಿ ಪ್ರಸಾರ ಕಂಡು ಅತಿ ಹೆಚ್ಚು ಜನರ ಮೆಚ್ಚುಗೆಯನ್ನು ಪಡೆದಿದೆ. ಸೀಸನ್ ನಿಂದ ಸೀಸನ್ ಗೆ ಬಿಗ್ ಬಾಸ್ ನ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಟಿವಿ ಯಲ್ಲಿ ಬಿಗ್ ಬಾಸ್ ಪಡೆದ ದೊಡ್ಡ ಯಶಸ್ಸಿನ ನಂತರ ಈಗ ಅದು ಓಟಿಟಿ ಕೂಡಾ ಪ್ರವೇಶ ಮಾಡಿ, ಈಗಾಗಲೇ ಹಿಂದಿ, ಕನ್ನಡ, ತೆಲುಗು ಭಾಷೆಗಳಲ್ಲಿ ಓಟಿಟಿ ಬಿಗ್ ಬಾಸ್ ಯಶಸ್ಸು ಪಡೆದುಕೊಂಡಿದೆ.

ಓಟಿಟಿ ಬಿಗ್ ಬಾಸ್ ಅನ್ನು ಮೊದಲು ಹಿಂದಿ ಭಾಷೆಯಲ್ಲಿ ಆರಂಭಿಸಲಾಗಿತ್ತು. ಆಗ ಬಾಲಿವುಡ್ (Bollywood) ಸಿನಿಮಾಗಳ ನಿರ್ಮಾಪಕ, ಟಿವಿ ಶೋ ಗಳ ನಿರೂಪಕ ಕೂಡಾ ಆಗಿರುವ ಕರಣ್ ಜೋಹರ್ (Karan Johar) ಹಿಂದಿ ಬಿಗ್ ಬಾಸ್ ಸೀಸನ್ ಒಂದರ ನಿರೂಪಣೆಯನ್ನು ಮಾಡಿದ್ದರು. ಕಳೆದ ವರ್ಷ ಕನ್ನಡದಲ್ಲಿಯೂ ಸಹಾ ಓಟಿಟಿ ಬಿಗ್ ಬಾಸ್ ಸೀಸನ್ ಒಂದು ಭರ್ಜರಿ ಯಶಸ್ಸು ಪಡೆದ ವಿಚಾರ ನಮಗೆಲ್ಲಾ ತಿಳಿದೇ ಇದೆ. ಕನ್ನಡದಲ್ಲಿ ಇದನ್ನು ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದರು. ಇದನ್ನೂ ಓದಿ : ಡಿಕೆ ಶಿವಕುಮಾರ್, ಸಿಹಿ ಕಹಿ ಚಂದ್ರು ಆತ್ಮೀಯತೆ: ಅಚ್ಚರಿ ಮೂಡಿಸಿದ ಇವರ ಸ್ನೇಹ ಮೂಡಿದ್ದು ಹೇಗೆ?

ಹಿಂದಿಯಲ್ಲಿ ಓಟಿಟಿ ಬಿಗ್ ಬಾಸ್ ಪ್ರಸಾರ ಕಂಡು ಸಾಕಷ್ಟು ಸಮಯ ಕಳೆದರೂ ಸಹಾ ಸೀಸನ್ ಎರಡು ಪ್ರಾರಂಭವಾಗಿರಲಿಲ್ಲ. ಆದರೆ ಈಗ ಓಟಿಟಿ ಬಿಗ್ ಬಾಸ್ ಸೀಸನ್ ಎರಡರ ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋ ನೋಡಿ ಕಾರ್ಯಕ್ರಮದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಈ ಬಾರಿ ಓಟಿಟಿ ಬಿಗ್ ಬಾಸ್ ನ ಕೂಡಾ ನಟ ಸಲ್ಮಾನ್ ಖಾನ್ ನಿರೂಪಣೆ ಮಾಡ್ತಿರೋದಕ್ಕೆ.

ಹೌದು, ಜೂನ್ 17 ರಿಂದ ಜಿಯೋ ಸಿನಿಮಾ (Jio Cinema) ಓಟಿಟಿ ವೇದಿಕೆಯಲ್ಲಿ ಶುರು ಆಗ್ತಿರೋ ಹಿಂದಿ ಬಿಗ್ ಬಾಸ್ ಓಟಿಟಿ ಶೋ ನ ಫಸ್ಟ್ ಪ್ರೋಮೋ ಹೊರಗೆ ಬಂದಿದೆ. ಅದರಲ್ಲಿ ಸಲ್ಮಾನ್ ಖಾನ್ ಶೋ ನಿರೂಪಣೆ ಮಾಡೋದು ಖಚಿತವಾಗಿದೆ. ಈ ಬಾರಿ ಮೇಕರ್ಸ್ ಕರಣ್ ಜೋಹರ್ ಬದಲಿಗೆ ಸಲ್ಮಾನ್ ಖಾನ್ ಅವರನ್ನೇ ನಿರೂಪಕರನ್ನಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಲ್ಮಾನ್ ಖಾನ್ ಇದ್ದರೆ ಶೋ ಗೆ ಉತ್ತಮ ಪ್ರತಿಕ್ರಿಯೆ ಖಂಡಿತ ಸಿಗುತ್ತೆ ಎನ್ನುವುದು ನಿರ್ಮಾಪಕರ ಆಲೋಚನೆ ಎನ್ನಲಾಗಿದೆ.‌

Leave A Reply

Your email address will not be published.