Big Boss Ott: ಎಷ್ಟು ಚಂದ ಇದ್ದಾಳೆ!! ರಾಕೇಶ್ ಹೃದಯದಲ್ಲಿ ಬಾರಿಸಿತಾ ಪ್ರೇಮದ ಘಂಟೆ?? ಸಾನ್ಯಾ ಬಗ್ಗೆ ರಾಕೇಶ್ ಮಾತುಗಳು

Written by Soma Shekar

Published on:

---Join Our Channel---

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಹುಟ್ಟುವುದು ಸಾಮಾನ್ಯ. ಭಾಷೆ ಯಾವುದೇ ಆದರೂ ಬಿಗ್ ಬಾಸ್ ನ ಹಲವು ಸೀಸನ್ ಗಳಲ್ಲಿ, ಬಿಗ್ ಬಾಸ್ ಮನೆಯಿಂದ ಹೊಸ ಹೊಸ ಪ್ರೇಮ ಪುರಾಣಗಳು ಕೇಳಿಬಂದಿದೆ. ಮನೆಯೊಳಕ್ಕೆ ಹೆಜ್ಜೆ ಇಡುವಾಗ ಒಂಟಿಯಾಗಿ ಹೋದವರು ಮನೆಯೊಳಗೆ ಜೋಡಿಯನ್ನು ಹುಡುಕಿಕೊಂಡು ಹೊರಗೆ ಬಂದ ಸಾಕಷ್ಟು ನಿದರ್ಶನಗಳಿವೆ. ಉದಾಹರಣೆಗೆ ಈ ಹಿಂದೆ ಕನ್ನಡ ಬಿಗ್ ಬಾಸ್ ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರೇಮಪಾಶಕ್ಕೆ ಸಿಲುಕಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆಯೂ ಅವರ ಪ್ರೇಮ ಮುಂದುವರೆಯಿತು. ಅಲ್ಲದೇ ಈ ಜೋಡಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ತಮ್ಮ ಪ್ರೇಮಕಥೆಗೆ ಹೊಸದೊಂದು ರೂಪವನ್ನು ನೀಡಿದರು ಎಲ್ಲರಿಗೂ ತಿಳಿದಿದೆ.

ಹೀಗೆ ಪ್ರತಿಯೊಂದು ಸೀಸನ್ ನಲ್ಲಿ ಕೂಡಾ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ಪ್ರೇಮಿಗಳ ಜೋಡಿ ಹುಟ್ಟಿಕೊಳ್ಳುತ್ತದೆ. ಪ್ರಸ್ತುತ ಬಿಗ್ ಬಾಸ್ ಓಟಿಟಿ ಕನ್ನಡೆಲ್ಲಿ ಕೂಡಾ ಅಂತಹದೊಂದು ವಾತಾವರಣ ನಿರ್ಮಾಣವಾಗುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಬಿಗ್ ಬಾಸ್ ಮನೆಗೆ ಪುಟ್ಟಗೌರಿ ಸೀರಿಯಲ್ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ಅವರು ಸ್ಪರ್ಧಿಯಾಗಿ ಎಂಟ್ರಿ ನೀಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಈಗಾಗಲೇ ಅವರು ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಹಂಚಿಕೊಂಡ ವಿಚಾರಗಳಿಂದ ಸಾಕಷ್ಟು ಸುದ್ದಿಯಾಗಿದ್ದಾರೆ. ಅದೂ ಅಲ್ಲದೇ ತಮಾಷೆಯಾಗಿ ಆರ್ಯವರ್ಧನ್ ಗುರೂಜಿ ಅವರಿಗೆ ಲವ್ ಪ್ರಪೋಸ್ ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ನೋಡುವುದಕ್ಕೆ ದಂತದ ಗೊಂಬೆಯಂತೆ, ಬಹಳ ಸುಂದರವಾಗಿರುವ ಸಾನ್ಯಾ ಅಯ್ಯರ್ ಅವರನ್ನು ನೋಡಿ ನಟ ರಾಕೇಶ್ ಅಡಿಗ ಅವರು ಆಕರ್ಷಿತರಾಗಿದ್ದರಂತೆ. ಹಾಗಂತ ಈ ಮಾತನ್ನು ನಾವು ಹೇಳಿದ್ದಲ್ಲ. ಬಿಗ್ ಬಾಸ್ ಮನೆಯಲ್ಲಿ ಸ್ವತಃ ನಟ ರಾಕೇಶ್ ಅಡಿಗ ಅವರೇ ಹೇಳುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದ್ದಾರೆ. ರಾಕೇಶ್ ಅಡಿಗ ತಾವು ಸಾನ್ಯಾ ಅವರನ್ನು ನೋಡಿ ಆಕರ್ಷಿತರಾದ ವಿಚಾರವನ್ನು ಸಾನ್ಯಾ ಬಳಿಯೇ ಹೇಳಿಕೊಂಡಿದ್ದಾರೆ. ಬಹುಶಃ ಈ ಮಾತನ್ನು ಕೇಳಿ ಸಾನ್ಯಾಗೆ ಕೂಡಾ ಆಶ್ಚರ್ಯವಾಗಿರಬಹುದು ಮತ್ತು ಎಲ್ಲೋ ಒಂದು ಕಡೆ ಖುಷಿಯೂ ಆಗಿರಬಹುದು.

ರಾಕೇಶ್ ಅಡಿಗ ಸಾನ್ಯಾ ಅವರ ಜೊತೆ ಮಾತನಾಡುತ್ತಾ, ನಾನು ನಿಮ್ಮನ್ನು ನೋಡಿ ಎಷ್ಟು ಚಂದ ಇದ್ದಾಳೆ ಅಲ್ವಾ, ಎಷ್ಟು ಸ್ಪಿರಿಚುಯಲ್ ಹುಡುಗಿ ಅಂತಹ ಅಟ್ರಾಕ್ಟ್ ಆಗಿದ್ದೆ. ತುಂಬಾ ಚೆನ್ನಾಗಿ ಕವನ ಹೇಳಿದ್ರಿ. ಆ ತರಹ ಬರೆಯುತ್ತೀರಾ, ನಿಮ್ಮನ್ನು ನೋಡಿದರೆ ಹಾಗೆ ಕಾಣುವುದೇ ಇಲ್ಲ. ನಿಮ್ಮ ಡ್ರೆಸ್ಸಿಂಗ್ ನೋಡಿದರೆ ಹೀಗೆ ಅಂತ ಕಲ್ಪನೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ತಮ್ಮ ಮನಸ್ಸಿನ ಮಾತುಗಳನ್ನು ರಾಕೇಶ್ ಅಡಿಗ ಸಾನಿಯಾ ಮುಂದೆ ಹಂಚಿಕೊಂಡಿದ್ದಾರೆ. ರಾಕೇಶ್ ಮಾತುಗಳನ್ನು ಕೇಳಿದ ಪ್ರೇಕ್ಷಕರು ರಾಕೇಶ್ ಮನಸಿನಲ್ಲಿ ಸಾನಿಯಾ ಕಡೆ ಒಲವು ಮೂಡತೊಡಗಿದೆಯಾ? ಎಂದು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

Leave a Comment