Big Boss Ott: ರೀಲ್ಸ್ ಬೆಡಗಿ ಸೋನು ಫೋನ್ ನಂಬರ್ ಗೊತ್ತಾ? ತನ್ನ ಫೋನ್ ನಂಬರ್ ಹೇಳಿದ ಸೋನು!!
ಸೋಶಿಯಲ್ ಮೀಡಿಯಾ ಸ್ಟಾರ್, ರೀಲ್ಸ್ ಬೆಡಗಿ ಸೋನು ಶ್ರೀನಿವಾಸ್ ಗೌಡ ತನ್ನ ಈ ಜನಪ್ರಿಯತೆಯ ಹಿನ್ನೆಲೆಯಲ್ಲಿ ಈ ಬಾರಿಯ ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲ ಸೀಸನ್ ಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ದಿನದಿಂದಲೂ ಸಹಾ ಒಂದಲ್ಲಾ ಒಂದು ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಹೊರಗಡೆ ಸಾಮಾಜಿಕ ಜಾಲತಾಣಗಳಲ್ಲಿ ಸೋನು ಗೌಡ ಅವರ ಎಂಟ್ರಿ ಕುರಿತಾಗಿ ಪರ ವಿ ರೋ ಧ ಚರ್ಚೆಗಳು ಜೋರಾಗಿ ನಡೆಯುತ್ತಿದ್ದರೂ , ಅಲ್ಲಿ ಬಿಗ್ ಬಾಸ್ ಮನೆಯೊಳಗೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಇದೀಗ ಸೋನು ಬಿಗ್ ಬಾಸ್ ಮನೆಯಲ್ಲಿ ತಮ್ಮ ಫೋನ್ ನಂಬರ್ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವ ಸೋನು ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಸೋನು ಅವರನ್ನು 7 ಲಕ್ಷ 84 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಇನ್ನು ಇವರನ್ನು ಅಭಿಮಾನಿಸುವವರಿಗೆ ಸೋನು ಫೋನ್ ನಂಬರ್ ಕೊಟ್ರೆ ಬೇಡ ಅಂತಾರಾ? ಆದರೆ ಅಷ್ಟು ಸುಲಭವಾಗಿ ಅವರು ನಂಬರ್ ಕೊಡೋದು ಇಲ್ಲ ಅನ್ನೋದು ಸಹಾ ನಿಜ. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಸೋನು ಅವರು ಬಹಳ ಚಾಣಾಕ್ಷತನವನ್ನು ತೋರಿಸುತ್ತಾ ತಮ್ಮ ಫೋನ್ ನಂಬರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಲೋಕೇಶ್ ತಮಾಷೆ ಮಾಡುತ್ತಾ ಸೋನು ಅವರ ಬಳಿ, ಬೇಗ ಫೋನ್ ನಂಬರ್ ಹೇಳಮ್ಮ, ಡಯಲ್ ಮಾಡ್ತೀನಿ ಎಂದು ಕೇಳುತ್ತಾರೆ. ಆಗ ಸೋನು ಗೌಡ 99876543210 ಎಂದು ಒಂದು ನಂಬರ್ ಹೇಳಿದ್ದಾರೆ. ಈ ನಂಬರ್ ಕೇಳಿಸಿಕೊಂಡ ಸ್ಪೂರ್ತಿ ಗೌಡ ಪ್ರತಿಕ್ರಿಯೆ ನೀಡುತ್ತಾ, ಇದು ಸುಳ್ಳು ನಂಬರ್ ಎಂದಿದ್ದಾರೆ. ಅದನ್ನು ನಾನು ಉಲ್ಟಾ ಪಲ್ಟಾ ಹೇಳಿದ್ದೇನೆ. ಅಂತ ನಂಬರ್ ಇರೋಕೆ ಸಾಧ್ಯ ಇಲ್ಲ. ನಿಮ್ಮಂತಹ ಜಾಣರು ಇರ್ತೀರಾ ಅಂತ ನನಗೆ ಗೊತ್ತು ಎಂದು ಬಹಳ ಬುದ್ಧಿವಂತಿಕೆಯಿಂದ ಮಾತನಾಡಿದ್ದಾರೆ ಸೋನು ಗೌಡ.