Big Boss Ott: ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ನಟಿ ಸಾನ್ಯಾ ಬಿಗ್ ಬಾಸ್ ಮನೆಗೆ ಕೊಟ್ರು ಎಂಟ್ರಿ

Entertainment Featured-Articles Movies News

ಬಿಗ್ ಬಾಸ್ ಕನ್ನಡದ ಓಟಿಟಿ ಶೋ ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ಈಗಾಗಲೇ ಬಿಗ್ ಬಾಸ್ ಮನೆಗೆ ಆರ್ಯವರ್ಧನ್ ಗುರೂಜಿ, ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಹಾಗೂ ರೂಪೇಶ್ ಶೆಟ್ಟಿ, ಸ್ಪೂರ್ತಿ ಗೌಡ ಮನೆಯೊಳಕ್ಕೆ ಭರ್ಜರಿ ಎಂಟ್ರಿಯನ್ನು ನೀಡಿದ್ದಾಗಿದೆ‌. ಹಾಗಾದರೆ ನಂತರ ಯಾರು ಎಂದು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದ ಬಿಗ್ ಬಾಸ್ ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಸುದ್ದಿ ಹೊರ ಬಂದಿದೆ. ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡು ಮನೆ ಮನೆ ಮಾತಾಗಿದ್ದ ಪುಟ್ಟ ಗೌರಿ ಮದುವೆ ಸೀರಿಯಲ್ ಖ್ಯಾತಿಯ ನಟಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ.

ಹೌದು, ಜನಪ್ರಿಯ ಸೀರಿಯಲ್ ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮನೆ ಮಾತಾಗಿದ್ದ ಬಾಲ ನಟಿ ಯಾಗಿ ಜನರಿಗೆ ಪರಿಚಿತರಾಗಿದ್ದ ಸಾನ್ಯಾ ಅಯ್ಯರ್ ಅವರು ಬಿಗ್ ಬಾಸ್ ಮನೆಯೊಳಕ್ಕೆ ಪ್ರವೇಶ ನೀಡಿದ್ದಾರೆ. ನಟಿ ಸಾನ್ಯಾ ಅವರು ಬಿಗ್ ಬಾಸ್ ಮನೆಯೊಳಕ್ಕೆ ಐದನೇ ಸ್ಪರ್ಧಿಯಾಗಿ ಪ್ರವೇಶ ನೀಡಿದ್ದಾರೆ. ಬಾಲ ನಟಿಯಾಗಿ ನಾಡಿನ ಜನರ ಮನಗೆದ್ದಿದ್ದ ಸಾನ್ಯಾ ಅವರು, ಅನಂತರ ಶಾರ್ಟ್ ಮೂವೀ, ಮ್ಯೂಸಿಕ್ ಆಲ್ಬಂ, ಡ್ಯಾನ್ಸ್ ರಿಯಾಲಿಟಿ ಶೋ ಗಳ ಮೂಲಕ ಮತ್ತೊಮ್ಮೆ ಜನರನ್ನು ರಂಜಿಸಿ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಮೂಲತಃ ಬೆಂಗಳೂರಿನವರೇ ಆಗಿರುವ ಸಾನ್ಯಾ ಅವರ ತಂದೆ ತಾಯಿ ಮಾತ್ರವೇ ಅಲ್ಲದೇ ಅವರ ಚಿಕ್ಕಮ್ಮಂದಿರು ಸಹಾ ಕಲಾವಿದರೇ ಆಗಿದ್ದಾರೆ. ಸಾನ್ಯಾ ಅವರು ಎಂಟನೇ ತರಗತಿ ವರೆಗೆ ಓದು ಹಾಗೂ ನಟನೆ ಎರಡನ್ನೂ ನಿಭಾಯಿಸಿಕೊಂಡು ಬಂದಿದ್ದರು. ಅನಂತರ ನಟನೆಯಿಂದ ಬ್ರೇಕ್ ಪಡೆದಿದ್ದ ಅವರು ಶಿಕ್ಷಣದ ಕಡೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಸಾನ್ಯಾ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಈಗ ಬಹುದಿನಗಳ ನಂತರ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದು, ಇಲ್ಲಿ ಹೇಗೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *