Big Boss: ತನೀಷಾಗೆ ಇನ್ನೊಂದು ಚಾನ್ಸ್ ಕೊಡಬೇಡಿ; ತನೀಷಾಗೆ ದೊಡ್ಡ ಹೊಡೆತ ಕೊಟ್ಟ ವರ್ತೂರು, ಸಿಟ್ಟಿನಲ್ಲಿ ತನೀಷಾ

Written by Soma Shekar

Published on:

---Join Our Channel---

Big Boss Kannada 10: ನಾವಿಲ್ಲಿ ತ್ಯಾಗಮೂರ್ತಿಗಳಾಗಿ ಬಂದಿಲ್ಲ ಅಂತ ಹೇಳ್ತಾ ಮನೆ ಮಂದಿ ತಿರುಗಿ ನೋಡೋ ತರ ಶಾಕ್ ಕೊಟ್ಟ ವರ್ತೂರು ಸಂತೋಷ್. ಬಿಗ್ ಬಾಸ್ ಮನೆಯ (Big Boss Kannada 10) ಆಟ 9ನೇ ವಾರಕ್ಕೆ ಕಾಲಿಟ್ಟಿದೆ. ಆಟದಲ್ಲಿನ ಹೊಸ ಟ್ವಿಸ್ಟ್ ಗಳು ಇನ್ನಷ್ಟು ರೋಚಕವಾಗ್ತಿದೆ, ಆಟ ಇನ್ನಷ್ಟು ಟಫ್ ಆಗ್ತಿದೆ. ಈ ವಾರ ಮನೆಯ ಕ್ಯಾಪ್ಟನ್ ಆಗಿರೋ ಸ್ನೇಹಿತ್ ಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರವನ್ನು ಕೊಟ್ಟಿದ್ದಾರೆ.

ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರದ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾರನ್ನ ನಾಮಿನೇಟ್ ಮಾಡಬೇಕು ಅನ್ನೋದು ಸಂಪೂರ್ಣವಾಗಿ ಸ್ನೇಹಿತ್ (Snehith) ಕೈಯಲ್ಲಿದೆ. ಈ ಹಿನ್ನೆಲೆಯಲ್ಲಿ ಮನೆಯ ಇತರೆ ಸ್ಪರ್ಧಿಗಳು ಸ್ನೇಹಿತ್ ಮುಂದೆ ನಿಂತು ಒಂದು ಸೂಕ್ತ ಕಾರಣವನ್ನು ಕೊಟ್ಟು ನಾಮಿನೇಷನ್ ಇಂದ ತಮ್ಮನ ಉಳಿಸುವಂತೆ ಮನವಿಯನ್ನು ಮಾಡಿಕೊಳ್ಳಬಹುದಾಗಿದೆ.

ಈ ವೇಳೆ ಮನೆ ಮಂದಿ ತಮ್ಮನ್ನ ಯಾಕೆ ನಾಮಿನೇಟ್ ಮಾಡಬಾರದು ಅನ್ನೋದಕ್ಕೆ ಕ್ಯಾಪ್ಟನ್ ಸ್ನೇಹಿತ ಮುಂದೆ ತಮ್ಮ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ಹೀಗೆ ಮನವಿ ಮಾಡುವಾಗ ಕಾರ್ತಿಕ್ ಮಾತನಾಡ್ತಾ, ತನಿಷಾಗೆ (Tanisha Kuppanda) ಇನ್ನೂ ಕಾಲು ನೋವಿದೆ ಅವಳನ್ನೇ ಸೇವ್ ಮಾಡಿ ಅಂತ ತನ್ನ ಕಡೆಯಿಂದ ಮನವಿ ಮಾಡಿಕೊಂಡಿದ್ದಾರೆ.

ಆದರೆ ಈ ವೇಳೆ ವರ್ತೂರು ಸಂತೋಷ್ (Varthur Santosh) ಮಾತ್ರ ತನಿಷಾ ಪರ್ವಾಗಿ ಮಾತನಾಡಿಲ್ಲ, ಬದಲಾಗಿ ಅವರು ತನಿಷಾನ ನಾನೇನು ಬೇಕಂತ ನೂಕಿಲ್ಲ, ಅದಕ್ಕೆ ಅವರಿಗೆ ಇನ್ನೊಂದು ಚಾನ್ಸ್ ಸಿಗಬೇಕು ಅಂತ ನಾನೇನು ಕೇಳಲ್ಲ, ನಾವು ಮಾನವೀಯತೆ ಅಂತ ಹೋದ್ರೆ, ಹಿಂದೆ ಮಾತ್ರ ಅಲ್ಲ ಮುಂದೆ ಕೂಡಾ ಹಳ್ಳ ತೋಡಿರ್ತಾರೆ, ನಾವೇನು ತ್ಯಾಗಮೂರ್ತಿಗಳಾಗಿ ಬಂದಿಲ್ಲ ಅಂತ ಮಾತಿನ ಮೂಲಕವೇ ಭರ್ಜರಿ ಹೊಡೆತವನ್ನು ನೀಡಿದ್ದಾರೆ.

ವರ್ತೂರು ಸಂತೋಷ್ ಮಾತನ್ನ ಕೇಳಿ ತನೀಷಾ ಅಸಮಾಧಾನಗೊಂಡಿದ್ದಾರೆ. ಈಗ ಒಂದು ವಾರದಿಂದ ಮಾತಾಡ್ತಿರೋ ವರ್ತೂರು ಸಂತೋಷ್ ಡೇ ಒನ್ ನಿಂದ ಮಾತಾಡಿದಿದ್ದರೆ ಆಗ ನಾನು ಅದನ್ನ ಮೆಚ್ಚಿಕೊಳ್ಳುತಿದ್ದೆ ಅಂತ ಹೇಳಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ತನಿಷಾ ಮತ್ತು ವರ್ತೂರು ಸಂತೋಷ್ ನಡುವಿನ ಸ್ನೇಹಕ್ಕೆ ದೊಡ್ಡ ಮುಳ್ಳಾದಂತೆ ಕಾಣ್ತಿದೆ. ಇವರಿಬ್ಬರ ನಡುವೆ ಇನ್ನೂ ಏನೆಲ್ಲಾ ಮಾತುಕತೆ ನಡೆಯಿತು ಅನ್ನೋದನ್ನ ಇಂದಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

Leave a Comment