BBK 10: ತಮಾಷೆ ಅಮಾಸೆ ಆಗುತ್ತಾ? ಸಂಗೀತಾ ತುಕಾಲಿ ಮಧ್ಯೆ ಮತ್ತೊಂದು ಕದನಕ್ಕೆ ವೇದಿಕೆ ಸಜ್ಜಾಗ್ತಿದ್ಯಾ

Written by Soma Shekar

Published on:

---Join Our Channel---

Big Boss Kannada 10 : ಬಿಗ್ ಬಾಗ್ ಕನ್ನಡ ಸೀಸನ್ ಹತ್ತು (Big Boss Kannada 10) ಯಶಸ್ವಿ ಒಂಬತ್ತನೇ ವಾರಕ್ಕೆ ಅಡಿಯಿಟ್ಟಿದೆ. ಈ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಮೊಟ್ಟ ಮೊದಲ ಬಾರಿಗೆ ತಮ್ಮ ವಿಶೇಷ ಅಧಿಕಾರವನ್ನು ಬಳಸಿದ ಕಾರಣ ಯಾವುದೇ ಎಲಿಮಿನೇಷನ್ ನಡೆದಿಲ್ಲ. ನಾಮಿನೇಷನ್ ನಲ್ಲಿ ಬಾಟಮ್ ಟು ನಲ್ಲಿ ಇದ್ದವರಲ್ಲಿ ಒಬ್ಬರನ್ನು ಕಿಚ್ಚ ಸುದೀಪ್ ಸೇವ್ ಮಾಡಿದ್ದರಿಂದ ಎಲಿಮಿನೇಷನ್ ಪ್ರಕ್ರಿಯೆ ರದ್ದಾಗಿದೆ.

ಈಗ ಈ ಹೊಸ ವಾರದ ಆರಂಭದಲ್ಲೇ ಬಿಗ್ ಬಾಸ್ ಒಂದು ಸಖತ್ ಫನ್ನಿ ಟಾಸ್ಕ್ ಅನ್ನ ನೀಡಿದ್ದಾರೆ. ಬಿಗ್ ಬಾಸ್ (Big Boss) ಯಾವ ಸ್ಪರ್ಧಿಗೆ ಯಾವ ಚಟುವಟಿಕೆಯನ್ನು ಮಾಡುವಂತೆ ಘೋಷಣೆಯನ್ನು ಮಾಡಿದರೆ ಅವರು ಆ ಚಟುವಟಿಕೆ ಮಾಡಬೇಕಾಗಿದೆ. ಈ ವೇಳೆ ಬಿಗ್ ಬಾಸ್ ಸಂಗೀತಾಗೆ ಅಳುವ ನಾಯಿಮರಿಯಂತೆ ವರ್ತಿಸುವಂತೆ ಹೇಳಿದ್ದಾರೆ.

ಬಿಗ್ ಬಾಸ್ ಆದೇಶದ ಪ್ರಕಾರ ಸಂಗೀತಾ (Sangeetha Sringeri) ಅಳುವ ನಾಯಿಮರಿಯ ಹಾಗೆ ಕೂಗುತ್ತಾ ಓಡಾಡಿದರೆ, ತುಕಾಲಿ ಕೂಡಾ ಸಾಥ್ ನೀಡಿದ್ದಾರೆ. ವರ್ತೂರು ಮತ್ತು ತುಕಾಲಿ ಸಂತೋಷ್ ಗೆ ಸಂಗೀತಾ ಮತ್ತು ಕಾರ್ತಿಕ್ ರೀತಿಯಲ್ಲಿ ವರ್ತಿಸಬೇಕು ಎನ್ನುವ ಟಾಸ್ಕ್ ಅನ್ನು ನೀಡಿದ್ದಾರೆ ಬಿಗ್ ಬಾಸ್. ಇದರಲ್ಲಿ ತುಕಾಲಿ ಸಂಗೀತಾ ಆಗಿದ್ದು, ವರ್ತೂರು ಕಾರ್ತಿಕ್ ಆಗಿದ್ದಾರೆ.

ವರ್ತೂರು ಕಾರ್ತಿಕ್ ತರ ನಟಿಸಿ, ನಾನು ವಿನಯ್ ನ ಮನಸ್ಸಿನಲ್ಲಿಟ್ಟುಕೊಂಡೇ ಗೇಮ್ ಆಡಿದ್ದು ಅಂದ್ರೆ, ಸಂಗೀತಾ ತರ ನಟಿಸಿದ ತುಕಾಲಿ ಮನಸ್ಸಲ್ಲಿ ನನ್ನ ಕೂಡಾ ಇಟ್ಕೋ ಚೆನ್ನಾಗಿ ಆಡ್ತೀಯಾ ಅಂದಿದ್ದಾರೆ. ನಂತರ ವರ್ತೂರು ನೀನು ಆಪೋಸಿಟ್ ಟೀಮ್ ಗೆ ಹೋಗಿ ಹೆಂಗಿದ್ದೆ ಅಂದ್ರೆ ತುಕಾಲಿ ಆಗ ಕಾರ್ತಿಕ್ ನಾನು ಎಲ್ಲಿಗೆ ಹೋದ್ರೂ ಗುಂಡಿ ತೋಡಿನೇ ಬರೋದು ಅಂದಿದ್ದಾರೆ. ಇದನ್ನೂ ಓದಿ :Animal Movie: ಅನಿಮಲ್ ಸಿನಿಮಾಕ್ಕಾಗಿ ರಶ್ಮಿಕಾ ಪಡೆದ ಸಂಭಾವನೆ ಇಷ್ಟೊಂದಾ?

ವರ್ತೂರು ಸಂತೋಷ್ (Varthur Santosh) ಮತ್ತು ತುಕಾಲಿಯ (Tukali Santosh) ಈ ಕಾಮಿಡಿ ಟಾಸ್ಕ್ ಮನೆ ಮಂದಿಗೆ ಸಿಕ್ಕಾಪಟ್ಟೆ ಮನರಂಜನೆಯನ್ನ ಖಂಡಿತ ನೀಡಿದೆ. ಆದರೆ ಇದನ್ನ ಸಂಗೀತಾ ಕೂಲ್ ಆಗಿ ತಗೊಳ್ತಾರಾ ಅಥವಾ ತನ್ನ ಮೇಲೆ ಪಂಚ್ ಗಳನ್ನ ಹಾಕಿರೋ ತುಕಾಲಿಗೆ ಗ್ರಹಚಾರ ಬಿಡಿಸ್ತಾರಾ ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

Leave a Comment