Big Boss: ಮಾವುತನಿಗೆ ಇಂತ ಗತಿ ಬರಬಾರದಿತ್ತು; ರಕ್ಕಸರ ಅಬ್ಬರಕ್ಕೆ ಹಿಂಡಿ ಹಿಪ್ಪೆಯಾದ ಅವಿನಾಶ್ ಶೆಟ್ಟಿ

Written by Soma Shekar

Published on:

---Join Our Channel---

Big Boss Kannada 10 : ಮಾವುತನನ್ನ ಮೇಕೆ ಮಾಡಿಕೊಂಡು ಆಟ ಆಡಿಸಿದ ರಕ್ಕಸರ ತಂಡ. ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಒಂಬತ್ತನೇ ವಾರದ ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ಸಾಕಷ್ಟು ವಿಚಾರಗಳಿಂದಾಗಿ ಸುದ್ದಿಯಾಗಿದೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಈ ಟಾಸ್ಕ್ ವಿಚಾರವಂತೂ ಭರ್ಜರಿಯಾಗಿ ಚರ್ಚೆಯಾಗುತ್ತಿದೆ.. ಈ ವಾರದ ಟಾಸ್ಕ್ ನ ವಿಚಾರದಲ್ಲಿ ಪರ ವಿರೋಧ ಮಾತುಗಳು ದೊಡ್ಡ ಮಟ್ಟದಲ್ಲಿ ಹರಿದು ಬರುತ್ತಿದೆ.

ಇವೆಲ್ಲವುಗಳ ನಡುವೆ ವಾಹಿನಿ ಹಂಚಿಕೊಳ್ಳುತ್ತಿರುವ ಹೊಸ ಪ್ರೊಮೊಗಳು ಇನ್ನಷ್ಟು ಕುತೂಹಲವನ್ನು ಮೂಡಿಸುತ್ತಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವಿನಾಶ್ ಶೆಟ್ಟಿ (Avinash Shetty) ಅವರು ಮನೆ ಒಳಗೆ ಕಾಲಿಟ್ಟಾಗ ಆನೆಯನ್ನು ಪಳಗಿಸೋ ಮಾವುತ ಅಂತ ಡೈಲಾಗ್ ಒಂದನ್ನು ಹೇಳಿದ್ರು, ಆದರೆ ಇಷ್ಟು ದಿನಗಳಲ್ಲಿ ಅವರಲ್ಲಿ ಮಾವುತನ ಯಾವುದೇ ಲಕ್ಷಣ ಕಂಡಿಲ್ಲ.

ಅಲ್ಲದೇ ಅವರು ಹೇಳಿಕೊಂಡ ಡೈಲಾಗ್ ನ ಈಗಾಗಲೇ ಸಾಕಷ್ಟು ಸಲ ಮನೆ ಮಂದಿ ಕಾಮಿಡಿ ಮಾಡಿದ್ದಾರೆ. ಇನ್ನು ಈಗಂತೂ ರಕ್ಕಸರು ಮತ್ತು ಗಂಧರ್ವರು ಟಾಸ್ಕ್ ನಲ್ಲಿ ರಕ್ಕಸರಾಗಿರುವ ವಿನಯ್ (Vinay)ಮತ್ತು ತಂಡದವರು ಅವಿನಾಶ್ ಶೆಟ್ಟಿ ಜೊತೆಗೆ ಭರ್ಜರಿಯಾಗಿ ಆಟ ಆಡಿದ್ದಾರೆ. ವರ್ತೂರು ಮತ್ತು ತುಕಾಲಿ ಸಂತೋಷ್ ಅವಿನಾಶ್ ಅವರನ್ನ ನೀನು ಮಾವುತನಾ ಅಥವಾ ಮೇಕೆನಾ ಅಂತ ಕೇಳಿದ್ದಾರೆ.

ಮಾವತನ ಕೆಲಸ ಏನು ಅಂದ್ರೆ ಮೇವು ಹಾಕೋದು ಅಂತ ತುಕಾಲಿ (Tukali Santosh) ಪಂಚ್ ಡೈಲಾಗ್ ಹೊಡೆದಿದ್ದಾರೆ. ಅವಿನಾಶ್ ಕೊರಳಿಗೆ ದಾರವನ್ನು ಕಟ್ಟಿ ಮೇಕೆಯಂತೆ ಮನೆಯಲ್ಲಿ ಓಡಾಡ್ಸಿದ್ದಾರೆ. ವಿನಯ್ ಅವರಂತೂ ಅವಿನಾಶ್ ಕೈಯಲ್ಲಿ ಹೆಣ್ಣಿನಂತೆ ಡ್ಯಾನ್ಸ್ ಮಾಡಿಸಿದ್ದಾರೆ, ವರ್ತೂರ್ ಸಂತೋಷ್ ಮಾತನಾಡ್ತಾ ನೀನು ಯಾಕೋ ಕಾಮಿಡಿ ಫೀಸ್ ತರ ಕಾಣ್ತಾ ಇದ್ದೀಯ ಅಂತ ಅವಿನಾಶ್ ಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: Big Boss: ಎಲ್ಲೆ ಮೀರಿದ ರಾಕ್ಷಸ ಗಂಧರ್ವ ಟಾಸ್ಕ್; ಪ್ರತಾಪ್, ಸಂಗೀತಾ ಆಸ್ಪತ್ರೆಗೆ?

ಈ ರಕ್ಕಸರು ಮತ್ತು ಗಂಧರ್ವ ಟಾಸ್ಕ್ ನಲ್ಲಿ ರಕ್ಕಸರು ಅವಿನಾಶ್ ನ ಆಡಿಸಿ, ಕುಣಿಸಿ ಭರ್ಜರಿ ಎಂಟರ್ಟೈನ್ಮೆಂಟ್ ಪಡೆದುಕೊಳ್ಳುತ್ತಿದ್ದಾರೆ ಅನ್ನೋದಂತೂ ನಿಜ. ಆಟದ ನಡುವೆ ರಾಕ್ಷಸರು ಮನರಂಜನೆಗೂ ಒಂದು ವ್ಯವಸ್ಥೆ ಮಾಡ್ಕೊಂಡಿದ್ದಾರೆ.

Leave a Comment