Big Boss: ಬಿಗ್ ಬಾಸ್ ಮನೇಲಿ ಮತ್ತೆ ಸದ್ದು ಮಾಡಿದ ಬಳೆ; ವಿನಯ್, ಸಂಗೀತ ಇಬ್ರಿಗೂ ಆಗುತ್ತಾ ಕಿಚ್ಚನಿಂದ ಪೂಜೆ

Written by Soma Shekar

Published on:

---Join Our Channel---

Big Boss Kannada 10: ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ವಿನಯ್ ಮತ್ತು ಸಂಗೀತಾ ನಡುವಿನ ಅಸಹನೆ, ಅಸಮಾಧಾನಕ್ಕೆ ಕೊನೆ ಅನ್ನೋದೇ ಇಲ್ವ ಅನ್ನೋ ಹಾಗಿದೆ ಪರಿಸ್ಥಿತಿ. ಒಬ್ಬರ ಮೇಲೆ ಮತ್ತೊಬ್ಬರು ಆರೋಪಗಳನ್ನು ಮಾಡಿಕೊಂಡು ಈಗ ಇನ್ನಷ್ಟು ವೈಮನಸ್ಸಿಗೆ ಅದು ಕಾರಣ ಆಗಿದೆ. ಕಾರ್ತಿಕ್ ಮತ್ತು ತನೀಷಾನ ಬಿಟ್ಟು ಹೋಗಿ ಒಂದು ವಾರ ವಿನಯ್ ಟೀಮ್ ನಲ್ಲಿದ್ದ ಸಂಗೀತಾ ಆಗ ವಿನಯ್ ನ ಹಾಡಿ ಹೊಗಳಿದ್ದರು.

ಇಬ್ಬರ ನಡುವೆ ಅಪರೂಪದ ಸ್ನೇಹ ಅನ್ನೋ ಹಾಗೆ ಎಲ್ಲರ ಮುಂದೆ ಬಿಂಬಿತವಾಗಿತ್ತು. ಆದರೆ ಅದೆಲ್ಲಾ ಕೇವಲ ಒಂದೇ ಒಂದು ವಾರಕ್ಕೆ ಸೀಮಿತವಾಗಿತ್ತು. ಈಗ ಇಬ್ಬರ ನಡುವೆ ಕೋಪ ಅನ್ನೋ ಬೆಂಕಿ ಹೊತ್ತಿ ಉರಿಯುತ್ತಿದೆ. ಈಗ ಮತ್ತೊಮ್ಮೆ ಪರೋಕ್ಷವಾಗಿ ಬಳೆ ವಿಚಾರ ಮುನ್ನಲೆಗೆ ಬಂದಿದ್ದು, ಪ್ರೊಮೋ ವೈರಲ್ ಆಗ್ತಿದೆ. ಇದನ್ನೂ ಓದಿ: Mahesh Babu: ಮಹೇಶ್ ಬಾಬು ಧರಿಸಿದ ಟೀ ಶರ್ಟ್ ಸಿಂಪಲ್ ಅಂದವ್ರೇ ಅದರ ಬೆಲೆಯನ್ನು ಕೇಳಿ ಬೆಚ್ಚಿ ಬಿದ್ರು

ಮನೆಯಲ್ಲಿ ಅತಿ ಹೆಚ್ಚು ಧನಾತ್ಮಕ ಮತ್ತು ಋಣಾತ್ಮಕ ಸ್ಪರ್ಧಿಗಳು ಅಂತ ಹೇಳೋ ಒಂದು ಚಟುವಟಿಕೆಯನ್ನ ಬಿಗ್ ಬಾಸ್ ನೀಡಿದ್ದಾರೆ. ಈ ವೇಳೆ ಸಂಗೀತಾ (Sangeetha Sringeri) ಮೊದಲಿಂದಾನೂ ನೆಗೆಟಿವಿಟಿಯ ರೂಟ್ (ಬೇರು) ನೀನು ಅಂತ ವಿನಯ್ ಗೆ ಹೇಳಿದ್ದಾರೆ. ಇದಕ್ಕೆ ವಿನಯ್ ಸಹಾ ತನ್ನ ತಿರುಗೇಟನ್ನು ಕೊಟ್ಟಿದ್ದಾರೆ.

ವಿನಯ್ (Vinay Gowda) ಮಾತನಾಡ್ತಾ, ನಾನು ನೆಗೆಟಿವಿಟಿಯ ಬೇರು, ಆದ್ರೆ ಆ ಬೇರು ಬಿಡೋಕೆ ಒಂದು ಬೀಜ ನೆಡಬೇಕಲ್ವಾ ಆ ಬೀಜಾನೇ ಸಂಗೀತಾ ಅಂತ ಹೇಳಿದ್ದಾರೆ. ಅಲ್ಲದೇ ಈ ವೇಳೆ ಅವರು ಇಲ್ದೇ ಇರೋ ಕಾರಣಕ್ಕೆ ಸಂಗೀತಾ ಮೂಗು ತೂರಿಸಿ ಅದನ್ನೊಂದು ಮೂಮೆಂಟ್ ಮಾಡಿದವರು ಅಂತ ಬಳೆ ಮ್ಯಾಟರ್ ನ ಸನ್ನೆ ಮೂಲಕ ತೋರಿಸಿದ್ದಾರೆ.

ಈ ವೇಳೆ ಸಂಗೀತಾ ಇವತ್ತಿಗೂ ನಾನು ಅದರ ಪರವಾಗಿ ನಿಲ್ತೀನಿ ಅಂದಿದ್ದು, ಅದಕ್ಕೆ ವಿನಯ್ ಇಂಗ್ಲೀಷ್‌ ನಲ್ಲಿ ದಯವಿಟ್ಟು ಬಾಯಿ ಮುಚ್ತೀಯಾ ಅಂದಿದ್ದು, ಸಂಗೀತಾ ನಿಮ್ಮ ಮಾತಿನ ಮೇಲೆ ಎಚ್ಚರಿಕೆ ಇರಲಿ ಅಂತ ಹೇಳಿದ್ದಾರೆ. ಒಬ್ಬರಿಗೊಬ್ಬರು ಮಾತಿನ ಏಟಿಗೆ ತಿರುಗೇಟನ್ನ ನೀಡಿದ್ದಾರೆ.

Leave a Comment