Big Boss: ಮತ್ತೆ ದುಶ್ಮನ್ ಗಳಾದ ಸಂಗೀತಾ ವಿನಯ್; ಕಿಚ್ಚನ ಮುಂದೆಯೇ ನಡೀತು ಮಾತಿನ ಕಾಳಗ

Written by Soma Shekar

Published on:

---Join Our Channel---

Big Boss Kannada 10: ಬಿಗ್ ಬಾಸ್ ನ ಎಂಟನೇ ವಾರದ (Big Boss Kannada 10) ಸೂಪರ್ ಸಂಡೇಯಲ್ಲಿ ಸಂಗೀತಾ ಮತ್ತು ವಿನಯ್ ನಡುವೆ ಹೊತ್ತಿಕೊಂಡ ಕಿಚ್ಚು. ಕಳೆದ ವಾರವಷ್ಟೇ ಕಿಚ್ಚನ ಮುಂದೆ ವಿನಯ್ ನ ಹಾಡಿ ಹೊಗಳಿ ಕೊಂಡಾಡಿದ್ದ ಸಂಗೀತಾ ಈಗ ಈ ವೀಕೆಂಡ್ ನಲ್ಲಿ ವಿನಯ್ ಬಗ್ಗೆ ಕಿಡಿ ಕಾರಿರೋ ಹಾಗೆ ಕಾಣ್ತಿದೆ. ವಾಹಿನಿ ಹೊಸ ಪ್ರೊಮೋ ರಿಲೀಸ್ ಮಾಡಿದೆ.

ಈ ವೀಡಿಯೋ ನೋಡಿ ಪ್ರೇಕ್ಷಕರು ಈಗ ಶಾ ಕ್ ಆಗಿದ್ದು, ಮನಸ್ಸಿನಲ್ಲೇ ಇದರ ಬಗ್ಗೆ ಆಲೋಚನೆಗಳನ್ನ ಮಾಡೋದಕ್ಕೆ ಶುರುವಿಟ್ಟಿದ್ದಾರೆ. ಸೂಪರ್ ಸಂಡೇನಲ್ಲಿ ಒಂದು ಟ್ರೀಟ್ಮೆಂಟ್ ಸೆಶನ್ ನಡೆದಿದೆ. ಯಾರು ಯಾರಿಗೆ ಯಾವ ಟಾನಿಕ್ ಕೊಡೋಕೆ ಇಷ್ಟ ಪಡ್ತಾರೋ ಅದನ್ನ ಅವರಿಗೆ ಕೊಡೋ ಆಯ್ಕೆಯನ್ನ ಕಿಚ್ಚ ನೀಡಿದ್ದು ಈ ವೇಳೆ ಸಂಗೀತಾ (Sangeetha Sringeri) ಮತ್ತು ವಿನಯ್ ನಡುವೆ ಒಂದು ಮಾತಿನ ಸಮರ ನಡೆದ ಹಾಗೆ ಕಂಡಿದೆ.

ಕಳೆದ ವಾರ ಸ್ನೇಹಿತರಾಗಿದ್ದ ಇವರು ಈ ವಾರ ಮತ್ತೆ ದುಶ್ಮನ್ ಗಳಾಗಿಬಿಟ್ರಾ ಅಂತ ಅನಿಸಿದೆ. ಸಂಗೀತಾ ಮಾತಾಡ್ತಾ, ಅವರು ಯಾರ ಜೊತೆ ಕೆಟ್ಟದಾಗಿ ಮಾತಾಡ್ತಿರ್ತಾರೋ ಅವರ ಜೊತೇನೇ ಕೂತ್ಕೊಂಡು ನಕ್ಕೊಂಡು, ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ಅಂತ ಹೇಳಿದ್ದಾರೆ. ಇನ್ನು ವಿನಯ್ (Vinay Gowda) ಅವರು ಇವ್ರಿಗೆ ಫ್ರೆಂಡ್ ಆಗಿದ್ರೆ ಶರಣಾಗಿ ಬಿಡಬೇಕು, ನೀವು ಏನೇ ತಪ್ಪು ಮಾಡಿದ್ರು ನೀವೇ ರೈಟ್ ಅನ್ಬೇಕು.

ನಾನು ನಿನ್ನ ಫ್ರೆಂಡ್ ಆಗಿದ್ದಾಗ ನೀನು ನನಗೆ ಸರ್ವ್ ಮಾಡಬೇಕು ಅನ್ನೋದನ್ನ ಫ್ರೆಂಡ್ ಶಿಪ್ ಅಲ್ಲ ಅಹಂಕಾರ ಅಂತಾರೆ ಅನ್ನೋ ಮಾತನ್ನ ಹೇಳಿದ್ದಾರೆ. ಮೊದಲ ಆರು ವಾರದಲ್ಲಿ ಸಂಗೀತಾ ಮತ್ತು ವಿನಯ್ ನಡುವೆ ಏನೆಲ್ಲಾ ಆಯ್ತು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಏಳನೇ ವಾರ ಎಲ್ಲಾ ಸರಿ ಹೋಯ್ತು ಅನ್ಕೊಂಡವರಿಗೆ ಈಗ ಸಂಗೀತಾ ಮತ್ತೊಮ್ಮೆ ಶಾಕ್ ಕೊಟ್ರಾ, ಮತ್ತೆ ಈ ಇಬ್ಬರ ನಡುವೆ ಶುರುವಾಗಲಿದ್ಯಾ ವಾರ್? ಕಾದು ನೋಡಬೇಕಾಗಿದೆ.

Leave a Comment