Big Boss: ನಾನಿನ್ನು ಈ ಮನೇಲಿ ಇರಲ್ಲ; ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಿರ್ಧರಿಸಿದ ವಿನಯ್

Written by Soma Shekar

Published on:

---Join Our Channel---

Big Boss Kannada 10 : ಇದ್ದಕ್ಕಿದ್ದ ಹಾಗೆ ಮನೆಯಿಂದ ಹೋಗೋಕೆ ಸಜ್ಜಾದ ವಿನಯ್ ಗೌಡ (Vinay Gowda). ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ನಡೆದ ಬೆಳವಣಿಗೆ ಕಂಡು ಶಾಕ್ ಆದ್ರು ಪ್ರೇಕ್ಷಕರು ಮತ್ತು ನೆಟ್ಟಿಗರು. ಬಿಗ್ ಬಾಸ್ ಮನೆಯ ಆಟ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಈಗ ವಿನಯ್ ಗೌಡ ಅವರು ನಾನು ಮನೆಗೆ ಹೋಗ್ತೀನಿ ತಮ್ಮ ವಸ್ತುಗಳನ್ನು ಪ್ಯಾಕಿಂಗ್ ಮಾಡಿಕೊಳ್ತಿರೋದು ಹೊಸ ಪ್ರೊಮೋ ದಲ್ಲಿ ಕಂಡಿದೆ.

ವಿನಯ್ ಅವರು ನಾನು ಹೋಗ್ತೀನಿ ಅಂತ ಹೇಳ್ತಿದ್ದು ಈ ವೇಳೆ ತುಕಾಲಿ ಸಂತೋಷ್, ವರ್ತೂರು ಸಂತೋಷ್, ನಮ್ರತಾ, ಸ್ನೇಹಿತ್ ವಿನಯ್ ಅವರಿಗೆ ಧೈರ್ಯ ತುಂಬುವಂತೆ ಹಾಗೂ ಹೊರಗಡೆ ಹೋಗದಂತೆ ಸಮಾಧಾನ ಮಾಡುತ್ತಿದ್ದಾರೆ. ನಮ್ರತಾ ನೀವು ವಿನ್ನಿಂಗ್ ಕಂಟೆಸ್ಟೆಂಟ್ ಅಂತ ವಿನಯ್ ಗೆ ಹೇಳಿದ್ದಾರೆ. ಇದನ್ನೂ ಓದಿ: Prabhas: ಯಾರು ಏನೇ ಹೇಳಿದ್ರು ಪ್ರಭಾಸ್ ಮದುವೆ ನಡೆಯಲ್ಲ; ಪ್ರಖ್ಯಾತ ಜ್ಯೋತಿಷಿಯ ಸಂಚಲನ ಭವಿಷ್ಯ ವಾಣಿ

ತುಕಾಲಿ ಸಂತೋಷ್ ಅವರು ನೀವು ಹೀಗೆ ನಿರ್ಧಾರ ಮಾಡಬಾರದು, ಹೋಗಬೇಕಿರೋದು ಅವರು ನೀವಲ್ಲ ಅಂದ್ರೆ, ಸ್ನೇಹಿತ್ ಅವ್ರಿಗಾಗಿ ನೀವು ಯಾಕೆ ಗಿವ್ ಅಪ್ ಮಾಡ್ತೀರಾ ಅಂತ ಹೇಳಿದ್ದಾರೆ. ವರ್ತೂರು ಸಹಾ ಇಂತ ನಿರ್ಧಾರ ತಗೋಬೇಡಿ ಅಂತ ವಿನಯ್ ಗೆ ಹೇಳಿರೋದು ಕಂಡಿದೆ.

ಇಷ್ಟಕ್ಕೂ ಮನೇಲಿ ಏನಾಯ್ತು, ವಿನಯ್ ಅವರು ಇದ್ದಕ್ಕಿದ್ದ ಹಾಗೆ ಇಂತದೊಂದು ನಿರ್ಧಾರವನ್ನು ಮಾಡಿದ್ದಾದ್ರು ಏಕೆ ಅನ್ನೋದು ಗೊತ್ತಾಗಬೇಕಾಗಿದೆ. ವಿನಯ್ ಅವರು ಕನ್ಫೆಷನ್ ರೂಮ್ ಗೆ ಹೋಗಿ ಬಂದಿದ್ದಾರೆ ಅಂತ ಸಹಾ ಅಲ್ಲಿ ಮಾತುಕತೆಯಲ್ಲಿ ಕೇಳಿ ಬಂದಿದೆ.

Leave a Comment