Big Boss: ತನ್ನವರನ್ನ ಜಾಣತನದಿಂದ ಸೇವ್ ಮಾಡಿದ ಸ್ನೇಹಿತ್? ಹಳೇ ಬುದ್ದಿ ಎಂದ ನೆಟ್ಟಿಗರು, ಬಿಗ್ ಬಾಸ್ ಫೇವರ್ ಮಾಡ್ತಿದ್ದಾರಾ?

Written by Soma Shekar

Published on:

---Join Our Channel---

Big Boss Kannada 10 : ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಈ ವಾರದ ನಾಮಿನೇಷನ್ ಒಂದು ರೀತಿಯಲ್ಲಿ ವಿಭಿನ್ನವಾಗಿತ್ತು. ಇದಕ್ಕೆ ಮುಖ್ಯ ಕಾರಣ ಬಿಗ್ ಬಾಸ್ ನಾಮಿನೇಟ್ ಮಾಡೋ ಅಧಿಕಾರವನ್ನು ಮನೆಯ ಕ್ಯಾಪ್ಟನ್ ಸ್ನೇಹಿತ್ ಗೆ (Snehith) ಮಾತ್ರವೇ ನೀಡಿದ್ರು. ಸ್ಪರ್ಧಿಗಳಲ್ಲಿ ಇಬ್ಬರು ಜೋಡಿಯಾಗಿ ಬಂದು ಕ್ಯಾಪ್ಟನ್ ಎದುರು ನಿಂತು ವಾದ ಮಾಡಿ ತಮ್ಮನ ತಾವು ಸಮರ್ಥನೆ ಮಾಡಿಕೊಂಡು ನಾಮಿನೇಟ್ ಮಾಡದಂತೆ ಕ್ಯಾಪ್ಟನ್ ಹತ್ರ ಮನವಿ ಮಾಡಿಕೊಳ್ಳೋ ಅವಕಾಶ ನೀಡಲಾಗಿತ್ತು.

ಆದರೆ ಈ ವೇಳೆ ಜೋಡಿಗಳಾಗಿ ಕ್ಯಾಪ್ಟನ್ ಮುಂದೆ ಬಂದ ಸ್ಪರ್ಧಿಗಳಲ್ಲಿ ಸ್ನೇಹಿತ್ ಯಾರನ್ನ ಕಾಪಾಡ್ತಾರೆ ಅನ್ನೋದನ್ನ ಬಹುತೇಕ ಎಲ್ಲರೂ ಸಜಾ ಮೊದಲೇ ಊಹೆ ಮಾಡೋ ರೀತಿ ಇತ್ತು. ಕ್ಯಾಪ್ಟನ್ ಮುಂದೆ ಚರ್ಚೆಗೆ ಇಳಿಯಲು ಬಂದಿದ್ದು ತುಕಾಲಿ ಸಂತೋಷ್ ಮತ್ತು ಸಂಗೀತ, ಡ್ರೋನ್ ಪ್ರತಾಪ್ ಮತ್ತು ನಮ್ರತಾ, ವಿನಯ್ ಮತ್ತು ಸಿರಿ, ಕೊನೆಯದಾಗಿ ಕಾರ್ತಿಕ್, ತನಿಷಾ ಮತ್ತು ವರ್ತೂರು ಸಂತೋಷ್.

ಕ್ಯಾಪ್ಟನ್ ಸ್ಪರ್ಧಿಗಳ ಮಾತುಗಳನ್ನು ಕೇಳಿದ ಮೇಲೆ ಐದು ಜನರನ್ನ ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಸ್ನೇಹಿತ್ ನಮ್ರತಾ, ವಿನಯ್, ತುಕಾಲಿ ಸಂತೋಷ್, ವರ್ತೂರ್ ಸಂತೋಷ್ ಅವರನ್ನು ನಾಮಿನೇಷನ್ ಇಂದ ಸೇವ್ ಮಾಡಿ, ಕಾರ್ತಿಕ್, ಡ್ರೋನ್ ಪ್ರತಾಪ್, ಸಂಗೀತಾ, ಸಿರಿ ಮತ್ತು ತನಿಷಾ ಅವರನ್ನು ನಾಮಿನೇಟ್ ಮಾಡಿದ್ರು.

ಈಗ ಈ ವಿಚಾರವಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಚರ್ಚೆಗಳು ನಡೀತಿವೆ. ಯಾರ ಮುಂದೆ ಯಾರನ್ನು ಬಿಟ್ಟು ವಾದ ಮಾಡ್ಸಿದ್ರೆ ಸ್ನೇಹಿತ್ ಯಾರನ್ನು ಉಳಿಸ್ತಾರೆ ಅನ್ನೋದು ವಾದ ಮಾಡೋ ಮೊದಲೇ ಪ್ರತಿಯೊಬ್ಬರಿಗೂ ತಿಳಿಯೋ ಹಾಗಿತ್ತು. ಹಾಗಿದ್ರೂ ಕೂಡಾ ಅದೇ ಜೋಡಿಗಳನ್ನು ಚರ್ಚೆಗೆ ಇಳಿಸಿದ್ದಾದರೂ ಯಾಕೆ ?

ಬಿಗ್ ಬಾಸ್ ಮನೆಯಲ್ಲಿ ಯಾರು ಯಾರಿಗೆ ಫೇವರ್ ಮಾಡೋದಕ್ಕೆ ಪ್ರಯತ್ನವನ್ನ ಮಾಡ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಮತ್ತು ಪ್ರೇಕ್ಷಕರು ಪ್ರಶ್ನೆಯನ್ನು ಮಾಡ್ತಿದ್ದಾರೆ.‌ ಸ್ನೇಹಿತ್ ನಾಮಿನೇಟ್ ಮಾಡಿರೋ ಐದು ಜನರು ಕೂಡಾ ಒಂದರ್ಥದಲ್ಲಿ ಅವರೊಂದಿಗೆ ಸಾಕಷ್ಟು ಆತ್ಮೀಯವಾಗಿ ಇಲ್ಲದೇ ಇರುವವರು ಮತ್ತು ಅವರ ಎದುರಾಳಿ ತಂಡದವರೇ ಆಗಿದ್ದಾರೆ.

ಸ್ನೇಹಿತ್ ಗೆ ಸಂಗೀತಾ (Sangeetha), ಕಾರ್ತಿಕ್, ತನೀಷಾ(Tanisha), ಸಿರಿ ಇಷ್ಟ ರಲ್ಲಿ ಯಾರ ವಾದ ಕೂಡಾ ಇಷ್ಟ ಆಗಲಿಲ್ವಾ? ಪ್ರತಾಪ್ ಅಂತೂ ಮೊದಲೇ ಸ್ನೇಹಿತ್ ಯಾರನ್ನ ಕಾಪಾಡ್ತಾರೆ ಅಂತ ಗೊತ್ತಿರೋ ಹಾಗೆ ವಾದಕ್ಕೆ ಇಳಿಯಲೇ ಇಲ್ಲ ಅನ್ನೋ ಹಾಗಿತ್ತು. ಇದೆಲ್ಲಾ ನೋಡಿ ಜನರು ಅಕ್ಷರಶಃ ನಾಮಿನೇಷನ್ ನಲ್ಲಿ ಪಕ್ಷಪಾತ ಸ್ಪಷ್ಟವಾಗಿ ಕಾಣ್ತಿದೆ ಅಂತ ಅಸಮಾಧಾನ ಹೊರ ಹಾಕಿದ್ದಾರೆ.

Leave a Comment