Big Boss Kannada 10 : ಟಾಸ್ಕ್ ನಲ್ಲಿ ನೀಡಿದ ಸವಾಲಿಗಾಗಿ ತಲೆಗೂದಲನ್ನ ಬೋಳಿಸಿಕೊಂಡ ಕಾರ್ತಿಕ್ ಮತ್ತು ತುಕಾಲಿ ಸಂತೋಷ್. ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಏಳನೇ ವಾರದ ಆಟದಲ್ಲಿ ಮೊದಲ ದಿನದಿಂದಲೇ ಟಾಸ್ಕ್ ನ ಬಿಸಿ ಏರಿದೆ. ಈ ವಾರದ ಟಾಸ್ಕ್ ಗಳಿಗಾಗಿ ಮನೆಯಲ್ಲಿ ಎರಡು ತಂಡಗಳ ರಚನೆಯಾಗಿದೆ ಮತ್ತು ತಂಡಗಳಲ್ಲಿ ಮಹತ್ವದ ಬದಲಾವಣೆ ಸಹಾ ಆಗಿದೆ.

ಪ್ರತಾಪ್ ಮತ್ತು ಸಂಗೀತಾ ವಿನಯ್ ಅವರ ಟೀಂ ನಲ್ಲಿ, ಮೈಕಲ್ ಮತ್ತು ತುಕಾಲಿ ಸಂತು ಕಾರ್ತಿಕ್ ಅವರ ಟೀಂ ನಲ್ಲಿ ಇದ್ದಾರೆ. ಟಾಸ್ಕ್ ನ ಭಾಗವಾಗಿ ಎದುರಾಳಿ ತಂಡ ನೀಡುವ ಸವಾಲುಗಳನ್ನು ಸ್ವೀಕರಿಸಿದರೆ ಪೂರ್ತಿ ಮಾಡಿದರೆ ಅಂಕಗಳು ಸಿಗುತ್ತವೆ. ಈ ಟಾಸ್ಕ್ ನಲ್ಲಿ ಸಂಗೀತಾ (Sangeetha) ತಮ್ಮ ಎದುರಾಳಿ ತಂಡದ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ತಮ್ಮ ತಲೆಯನ್ನು ಕ್ಲೀನ್ ಶೇವ್ ಮಾಡಬೇಕೆನ್ನುವ ಸವಾಲು ಹಾಕಿದ್ದಾರೆ.

ಈ ವೇಳೆ ಎದುರಾಳಿ ತಂಡದಲ್ಲಿದ್ದ ತನೀಷಾ (Tanisha) ಈ ವಿಚಾರವಾಗಿ ಮಾತನಾಡಿದಾಗ ನಮ್ರತಾ ಮತ್ತು ಸಂಗೀತಾ ಇಬ್ಬರೂ ತನೀಷಾ ಮೇಲೆ ಅರಚಾಡಿದ್ದಾರೆ, ಕೊನೆಗೆ ಟಾಸ್ಕ್ ಮತ್ತು ಪಾಯಿಂಟ್ ಗಾಗಿ ತಲೆ ಬೋಳಿಸಿಕೊಳ್ಳಲು ಕಾರ್ತಿಕ್ (Karthik) ಮತ್ತು ತುಕಾಲಿ ಸಂತು (Tukali Santu) ದಿಟ್ಟ ನಿರ್ಧಾರವನ್ನು ಮಾಡಿದ್ದು, ಕೂದಲು ಮತ್ತೆ ಬರುತ್ತೆ ಅಂತ ಹೇಳ್ತಾನೇ ತಲೆ ಬೋಳಿಸಿಕೊಂಡಿದ್ದಾರೆ.

ಇದಾದ ನಂತರ ತನೀಷಾ ಸಂಗೀತಾಗೆ ಈಗ ಖುಷಿನಾ ಮೇಡಂ ಅಂತ ಕೇಳಿದ್ದಾರೆ.. ಟಾಸ್ಕ್ ನ ಹೆಸರಿನಲ್ಲಿ ಸಂಗೀತಾ ತಮ್ಮ ಅಸಮಾಧಾನ, ಸಿಟ್ಟು ಎಲ್ಲವನ್ನೂ ಹೀಗೆ ತೀರಿಸಿಕೊಳ್ತಾ ಇದ್ದಾರಾ ಅಂತ ನೆಟ್ಟಿಗರು ಈಗ ಪ್ರಶ್ನೆ ಮಾಡ್ತಿದ್ದಾರೆ. ಸಂಗೀತಾ ಮಾಡಿದ್ದು ಸರಿಯಲ್ಲ ಅಂತ ಕೆಲವರು ಹೇಳಿದರೆ, ಇನ್ನೂ ಕೆಲವರು ಸಂಗೀತಾ ಈಗ ತಮ್ಮ ಆಟ ಶುರು ಮಾಡಿದ್ದಾರೆ ಅಂತ ಮೆಚ್ಚುಗೆಗಳನ್ನು ಸಹಾ ನೀಡುತ್ತಿದ್ದಾರೆ.