Big Boss: ರಕ್ಕಸರ ಆರ್ಭಟಕ್ಕೆ ಬಾಲ ಮುದುರಿದ ಸಂಗೀತಾ ಟೀಂ; ಸೋತು ಸುಣ್ಣವಾಗಿ ಕಣ್ಣೀರಿಟ್ಟ ಸಂಗೀತಾ

Written by Soma Shekar

Published on:

---Join Our Channel---

Big Boss Kannada 10 : ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ನಲ್ಲಿ ಹೊಸ ಟ್ವಿಸ್ಟ್. ಪ್ರಸ್ತುತ ಗಂಧರ್ವರಾಗಿರುವ ಸಂಗೀತಾ:(Sangeetha Sringeri) ಮತ್ತು ತಂಡ ರಾಕ್ಷಸರನ್ನು ಮಟ್ಟ ಹಾಕುವಲ್ಲಿ ಸೋತು ಹೋಯ್ತಾ ಎನಿಸುವಂತಹ ಹೊಸ ಪ್ರೊಮೋ ಒಂದನ್ನು ಈಗ ವಾಹಿನಿ ಶೇರ್ ಮಾಡಿಕೊಂಡಿದೆ. ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ನ ಎರಡನೇ ಹಂತದಲ್ಲಿ ಆಟದಲ್ಲಿ ಅನಿರೀಕ್ಷಿತ ತಿರುವು ಮೂಡಿ ಬಂದಿದೆ.

ಮಂಗಳವಾರದ ಎಪಿಸೋಡ್ ನಲ್ಲಿ ಸಂಗೀತಾ ಮತ್ತು ತಂಡ ರಾಕ್ಷಸರಾಗಿದ್ದರು. ಗಂಧರ್ವರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆದಿದ್ದರು. ಬುಧವಾರದ ಎಪಿಸೋಡ್ ಮುಗಿಯೋ ವೇಳೆಗೆ ವರ್ತೂರು ಸಂತೋಷ್ (Varthur Santosh) ಅವರ ತಂಡ ರಕ್ಕಸರಾಗಿ ಬದಲಾಗಿದ್ದಾರೆ.‌ ಸಂಗೀತಾ ಅವರ ಟೀಂ ರಾಕ್ಷಸರಾಗಿದ್ದ ವೇಳೆಯಲ್ಲಿ ಗಂಧರ್ವರಿಗೆ ಭರ್ಜರಿಯಾಗಿ ಆಟವನ್ನು ಆಡಿಸಿದ್ದರು. ಇದನ್ನೂ ಓದಿ: Big Boss: ಈ ಸಲ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಡೋ ಮೊದಲ ಸ್ಪರ್ಧಿ ಇವರೇ ಅಂತಿದ್ದಾರೆ ನೆಟ್ಟಿಗರು

ಈಗ ರಾಕ್ಷಸರಾಗಿರುವ ವರ್ತೂರು ಮತ್ತು ತಂಡದಲ್ಲಿ ವಿನಯ್ (Vinay) ಮತ್ತು ನಮ್ರತಾ (Namratha Gowda) ನೀಡುತ್ತಿರುವ ಶಾಕ್ ಗಳಿಗೆ ಗಂಧರ್ವರ ತಂಡ ಸೋತು ಸುಣ್ಣವಾಗಿದೆ. ಸಂಗೀತಾ ಒಂದು ಹಂತದಲ್ಲಿ ರಾಕ್ಷಸರು ಹೇಳಿದ್ದನ್ನು ಮಾಡಲು ಆಗುವುದಿಲ್ಲ ಎನ್ನುವ ಮಟ್ಟಕ್ಕೆ ಬಂದು ತಲುಪಿದ್ದಾರೆ ಮತ್ತು ತಮ್ಮ ತಂಡಕ್ಕೂ ಸಹಾ ಶಿಕ್ಷೆ ಸ್ವೀಕರಿಸಬೇಡಿ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ರಾಕ್ಷಸರು ಮತ್ತು ಗಂಧರ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ನಮ್ರತಾ ಇವರು ಗೇಮ್ ಆಡೋಕೆ ಬಂದಿಲ್ಲ, ಇವರು ಹೇಡಿಗಳು ಅಂತ ಸಂಗೀತಾ ಟೀಂ ಬಗ್ಗೆ ತುಕಾಲಿ ಹತ್ರ ಹೇಳಿಕೊಂಡಿದ್ದಾರೆ. ಸಂಗೀತಾ ತಮ್ಮ ತಂಡದ ಮುಂದೆ ಕಣ್ಣೀರು ಹಾಕಿ ಎದುರಾಳಿ ತಂಡ ಕೆಟ್ಟದಾಗಿ ಆಡ್ತಿದೆ ಅಂದ್ರೆ, ಕಾರ್ತಿಕ್ ತನ್ನಿಂದ ಆಡೋಕೆ ಆಗ್ತಾ ಇಲ್ಲ ಮಲಗಿದ್ದಾರೆ.

ಸಂಗೀತಾ ಮತ್ತು ಟೀಂ ಈ ಟಾಸ್ಕ್ ನಲ್ಲಿ ಸೋಲುತ್ತಾ? ತಾವು ರಾಕ್ಷಸರಾಗಿದ್ದಾಗ ಆಡಿದ ಆಟ, ಗಂಧರ್ವರಿಗೆ ಕೊಟ್ಟ ಟಾರ್ಚರ್ ಹಾಗೂ ಆಡಿಕೊಂಡ ಮಾತುಗಳೇ ಈಗ ತಮ್ಮ ತಂಡಕ್ಕೆ ಸಮಸ್ಯೆಯಾಯ್ತಾ? ಟಾಸ್ಕ್ ಇಷ್ಟೊಂದು ಟಫ್ ಆಯ್ತಾ?? ಇದೆಲ್ಲದಕ್ಕೂ ಉತ್ತರ ಇಂದಿನ ಎಪಿಸೋಡ್ ನಲ್ಲಿ ಸಿಗಲಿದೆ.

Leave a Comment