Big Boss Kannada 10 : ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಟಾಸ್ಕ್ ಬಿಸಿ ಹೆಚ್ಚುತ್ತಲೇ ಇದೆ. ಎದುರಾಳಿ ತಂಡ ನೀಡಿದ ಸವಾಲನ್ನು ಪೂರ್ತಿ ಮಾಡಲು ಈಗಾಗಲೇ ಕಾರ್ತಿಕ್ ಅವರ ಸಂಪತ್ತಿಗೆ ಸವಾಲ್ ತಂಡದಲ್ಲಿ ಕಾರ್ತಿಕ್ ಮತ್ತು ತುಕಾಲಿ ಸಂತು ತಮ್ಮ ತಲೆಗೂದಲನ್ನು ಬೋಳಿಸಿಕೊಂಡಿದ್ದಾರೆ. ಈಗ ಅದರ ಬೆನ್ನಲ್ಲೇ ಮತ್ತೊಂದು ಸವಾಲು ಅವರ ತಂಡಕ್ಕೆ ಎದುರಾಗಿದೆ.

ವಿನಯ್ (Vinay) ಅವರ ಗಜಕೇಸರಿ ತಂಡವು ಈಗ ಸಂಪತ್ತಿಗೆ ಸವಾಲ್ ತಂಡಕ್ಕೆ ಮತ್ತೊಂದು ಸವಾಲ್ ಹಾಕಿದೆ. ಗಜಕೇಸರಿ ತಂಡದ ಪರವಾಗಿ ಸಂಗೀತಾ ವರ್ತೂರು ಸಂತೋಷ್ (Varthur Santosh) ಮತ್ತು ತನೀಷಾ (Tanisha) ಇಪ್ಪತ್ತು ಹಸಿ ಮೆಣಸಿಕ ಕಾಯಿಯನ್ನು ತಿನ್ನಬೇಕು ಎನ್ನುವ ಟಾಸ್ಕ್ ಒಂದನ್ನು ನೀಡಿದ್ದಾರೆ. ಸಂಪತ್ತಿಗೆ ಸವಾಲ್ ತಂಡ ಅದನ್ನು ಸ್ವೀಕರಿಸಿದೆ.

ತನೀಷಾ ಮತ್ತು ವರ್ತೂರು ಸಂತೋಷ್ ಮೆಣಸಿನ ಕಾಯಿ ತಿನ್ನುತ್ತಿದ್ದು, ಇದನ್ನು ನೋಡಿ ಎದುರಾಳಿ ತಂಡ ಸಹಾ ಶಾಕ್ ಆಗಿದೆ. ತನೀಷಾ ಮತ್ತು ವರ್ತೂರು ಸಂತೋಷ್ ಕಷ್ಟ ಆಗ್ತಿದ್ದು ಟಾಸ್ಕ್ ಅನ್ನ ಹೇಗಾದ್ರು ಸರಿ ಮಾಡಲೇಬೇಕು ಅಂತ ರಿಸ್ಕ್ ತಗೊಂಡು ಮಾಡ್ತಾ ಇದ್ದಾರೆ.

ಈ ವೇಳೆ ಸಿರಿ (Siri) ಅವರು ವರ್ತೂರ್ ಅವರಿಗೆ ಆಗದೇ ಇದ್ರೆ ಬಿಡಿ ಅಂದಿದ್ದಾರೆ. ಎದುರಾಳಿ ತಂಡದ ವಿನಯ್ ಅವರು, ನಾವು ಕೊಡ್ತಾ ಇರೋದು ನೀವು ಮಾಡಬೇಡಿ ಅಂತ, ಮಾಡಿ ಅಂತ ನಾವೇನು ಹೇಳ್ತಿಲ್ಲ, ಅದು ನಮ್ಮ ತಪ್ಪಲ್ಲ ಅವ್ರು ತಿಂದ್ರೆ ಅಂತ ಹೇಳಿದ್ದಾರೆ. ಒಟ್ಟಾರೆ ಸವಾಲನ್ನು ಹಾಕಿದ್ಮೇಲೆ ಪೂರ್ತಿ ಮಾಡಬೇಕಾಗಿರೋದು ಟಾಸ್ಕ್ ಅಂತ ಎದುರಾಳಿ ತಂಡ ಹಸಿ ಮೆಣಸಿನಕಾಯಿ ತಿಂದಿದ್ದಾರೆ.