Big Boss: ಗೌಡ ಅನ್ನೋದು ಪರ್ಸನಲ್ ಅಟ್ಯಾಕ್! ನಮ್ರತಾ ಗೌಡ ಮಾತಿನ ಅರ್ಥವೇನು?

Written by Soma Shekar

Published on:

---Join Our Channel---

Namratha Gowda : ಬಿಗ್ ಬಾಸ್ ಮನೆಯಲ್ಲಿ ರಾಕ್ಷಸ ಗಂಧರ್ವ ಟಾಸ್ಕ್ ನಡೆಯುವ ವೇಳೆಯಲ್ಲಿ ರಾಕ್ಷಸರ ಪಾತ್ರದಲ್ಲಿದ್ದ ಸಂಗೀತಾ ಅವರು ನಮ್ರತಾ (Namratha Gowda) ಅವರನ್ನು ಪದೇ ಪದೇ ನಮ್ರತಾ ಗೌಡ ಎಂದು ಕರೆದಿದ್ದು ಒಂದು ಸಮಸ್ಯೆಗೆ ಕಾರಣವಾಗಿದೆ. ಸಂಗೀತಾ ನಮ್ರತಾ ಅವರನ್ನು ಹಾಗೆ ಕರೆದಿದ್ದರಿಂದ ನಮ್ರತಾ ಅಸಮಾಧಾನಗೊಂಡಿದ್ದಾರೆ ಮತ್ತು ಅದನ್ನು ಸಂಗೀತಾಗೆ ಹೇಳಿದ್ದಾರೆ.

ಗೌಡ ಅನ್ನೋದು ಪರ್ಸನಲ್ ಅಟ್ಯಾಕ್ ಅಂತ ನಮ್ರತಾ ಮತ್ತು ಸ್ನೇಹಿತ್ (Snehith) ಇಬ್ಬರೂ ಹೇಳಿದ್ದಾರೆ. ಕೋಪ ತರಿಸೋ ಟಾಸ್ಕ್ ನಲ್ಲಿ ನಾನು ನಮ್ರತಾ ಗೌಡ ಅಂತ ಹೇಳಿದ್ದೆ. ಆದರೆ ಇಲ್ಲಿ ನನಗೆ ಗೌಡ ಅಂತ ಬಳಸೋದು ನನಗೆ ಇಷ್ಟ ಇಲ್ಲ, ನಾನೇ ಎಷ್ಟೋ ಕಡೆ ನನಗೆ ಗೌಡ ಅಂತ ಹೇಳಬೇಡಿ ಬರೀ ನಮ್ರತಾ ಅಂತ ಕರೀರಿ ಅಂತ ಹೇಳಿದ್ದೀನಿ ಎನ್ನುವ ಮಾತನ್ನು ನಮ್ರತಾ ಸಂಗೀತಾ ಅವರ ಬಳಿ ಹೇಳಿದ್ದಾರೆ.

ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಮ್ರತಾ ಗೌಡ ಎನ್ನುವ ಹೆಸರನ್ನೇ ಬಳಸಿದ್ದಾರೆ. ಅವರ ಹೆಸರು ಬಂದಾಗ ನಮ್ರತಾ ಗೌಡ ಅಂತಾನೇ ಹೇಳಲಾಗುತ್ತೆ. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಗೌಡ ಅನ್ನೋದು ಪರ್ಸನಲ್ ಅಟ್ಯಾಕ್ ಇದ್ದ ಹಾಗೆ ಅದನ್ನ ಬಳಸಬೇಡಿ ಅಂದಿದ್ಯಾಕೆ ಅನ್ನೋದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ.

Leave a Comment