Big Boss: ಒಂದೇ ವಾರದಲ್ಲಿ ಇಷ್ಟೆಲ್ಲಾ? ಬಿಗ್ ಬಾಸ್ ಮನೆಯಲ್ಲಿ ನಮ್ರತಾ ನಿಜಕ್ಕೂ ಅಷ್ಟೆಲ್ಲಾ ಮಾಡಿಬಿಟ್ರ

Written by Soma Shekar

Published on:

---Join Our Channel---

Big Boss Kannada 10: ಒಂದೇ ವಾರದಲ್ಲಿ ಎಲ್ಲಾ ಬದಲಾಗಿ ಹೋಯ್ತಾ, ವಾರದ ಉತ್ತಮ, ಕಿಚ್ಚ‌ನ ಚಪ್ಪಾಳೆ ಮಾತ್ರವೇ ಅಲ್ಲದೇ ಎಲಿಮಿನೇಷನ್ ನಿಂದ ಓಟಿಗಳ ಆಧಾರದಲ್ಲಿ ಸೇವ್ ಆದ ಎರಡನೇ ಸ್ಪರ್ಧಿ ಎಲ್ಲವೂ ಸಹಾ ನಮ್ರತಾ ಗೌಡ ಅನ್ನೋದು ನಿನ್ನೆಯ ಎಪಿಸೋಡ್ (Big Boss Kannada 10) ನಲ್ಲಿ ಎಲ್ಲರೂ ನೋಡಿದ್ದಾರೆ. ಏಳು ವಾರಗಳಲ್ಲಿ ನಡೆಯದ ಒಂದು ಅದ್ಭುತ ಎಂಟನೇ ವಾರದಲ್ಲಿ ನಡೆದಿದ್ದು ಹೇಗೆ ಅನ್ನೋದೇ ಅನೇಕರ ಪ್ರಶ್ನೆಯಾಗಿದೆ.

ನಮ್ರತಾ (Namratha Gowda) ಈ ವಾರ ತಮ್ಮ ಟೀಮ್ ಬದಲಿಸಿದ್ರು, ವಿನಯ್ ಮತ್ತು ಸ್ನೇಹಿತ್ ಗ್ರೂಪ್ ಇಂದ ಹೊರ ಬಂದು ಆಟವನ್ನು ಆಡಿದ್ರು. ಮೊದಲ ಟಾಸ್ಕ್ ನಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ ಅಂತ ಪ್ರತಾಪ್ ಅವರನ್ನು ಕ್ಯಾಪ್ಟನ್ಸಿ ರೇಸ್ ನಿಂದ ಹೊರಗೆ ಇಟ್ಟರು. ಅದಾದ ನಂತರ ಅತ್ತು ಗೋಳಾಡಿದ ನಮ್ರತಾ ನಂತರ ಸಾಮಾನ್ಯ ಸ್ಥಿತಿಗೆ ಬಂದರು.

ತನೀಷಾಗಾಗಿ (Tanisha) ಕ್ಯಾಪ್ಟನ್ಸಿ ಟಾಸ್ಕ್ ಅನ್ನ ತಾನೇ ಆಡುವುದಾಗಿ ಹೇಳಿದರು. ಅಲ್ಲೂ ಉತ್ತಮ ಪ್ರದರ್ಶನ ನೀಡಿದರು ಅನ್ನೋ ಎಲ್ಲಾ‌ ಕಾರಣಗಳಿಗೆ ಕಿಚ್ಚನಿಂದ ಚಪ್ಪಾಳೆ ಸಿಕ್ಕಿತು. ಒಟ್ಟಾರೆ ನಮ್ರತಾ ಅವರಿಗೆ ಎಂಟನೇ ವಾರ ಅವರ ಆಟದ ದಿಕ್ಕನ್ನ ಬದಲಿಸಿದ ವಾರ ಆಗಿದೆ. ಮುಂದೆ ಹೀಗೆ ನಮ್ರತಾ ಆಟ ಮುಂದುವರೆಯುತ್ತಾ?

ನಮ್ರತಾ ಈ ವಾರ ಕಂಫೋರ್ಟ್ ಜೋನ್ ನಿಂದ ಹೊರಗೆ ಬಂದಿದ್ದು ಅವರ ಪಾಲಿಗೆ ವರವಾಯ್ತು, ಆದ್ರೆ ಮತ್ತೆ ಅವರು ತಮ್ಮ ಗುಂಪಿಗೆ ಸೇರ್ಪಡೆ ಆದ್ರೆ ಅವರ ಈ ವೇಗಕ್ಕೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆಗಳು ಖಂಡಿತ ಇದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Leave a Comment