Eshani : ಬಿಗ್ ಬಾಸ್ (Big Boss Kannada 10) ಮನೆಯಲ್ಲಿ ಬಹುತೇಕ ಎಲ್ಲಾ ವಿಚಾರಗಳಲ್ಲೂ ಸಹಾ ಕಣ್ಣೀರನ್ನು ಹಾಕಿದ ಸ್ಪರ್ಧಿ ಎಂದರೆ ಅದು ಇಶಾನಿ (Eshani). ಆರನೇ ವೀಕೆಂಡ್ ನಲ್ಲಿ ಇಶಾನಿ ಮನೆಯಿಂದ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಇಶಾನಿ. ಆದರೆ ಹೊರಗೆ ಬಂದ ಇಶಾನಿ ವೇದಿಕೆ ಮೇಲೆ ನಿಂತು ತನಗೆ ಮತ್ತೊಂದು ಅವಕಾಶ ನೀಡಿ ಎಂದು ಸುದೀಪ್ ಮುಂದೆ ಗೋಗರೆದಿದ್ದಾರೆ.
ಬಿಗ್ ಬಾಸ್ (Big Boss) ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿಗಳ ಜೊತೆಗೆ ಸುದೀಪ್ ಅವರು ವೇದಿಕೆ ಮೇಲೆ ಒಂದಷ್ಟು ಮಾತನಾಡುತ್ತಾರೆ. ಸ್ಪರ್ಧಿಯ ಜರ್ನಿಯ ವಿಟಿ ಯನ್ನು ತೋರಿಸಲಾಗುತ್ತೆ. ಇಶಾನಿ ಗೂ ಸಹಾ ಅವರ ಜರ್ನಿಯನ್ನು ತೋರಿಸಿದ ಮೇಲೆ ಇಶಾನಿ ಸಿಕ್ಕಾಪಟ್ಟೆ ಅತ್ತು, ಗೋಳಾಡಿದ್ದು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ.

ಗಳಗಳನೆ ಅತ್ತ ಇಶಾನಿ
ನನಗೋಸ್ಕರ ನಾನು ಆಟ ಆಡೋಕೆ ಬಂದಿದ್ದೀನಿ. ನಾನು ಈ ಅವಕಾಶವನ್ನು ಬಿಡೋಕೆ ರೆಡಿ ಇಲ್ಲ, ನಾನು ನನ್ನ ಗಮನವನ್ನು ಬೇರೆ ಕಡೆಗೆ ಕೊಟ್ಟೆ. ಬಿಗ್ ಬಾಸ್ ನನಗೆ ಬೇಕೇ ಬೇಕು, ಏನಾದ್ರು ಮಾಡ್ತೀನಿ, ಸ್ಟ್ಯಾಂಡ್ ಮಾಡ್ತೀನಿ, ಆದ್ರೆ ನಾನು ಬಿಡೋಕೆ ರೆಡಿ ಇಲ್ಲ ಎಂದು ಎರಡನೇ ಅವಕಾಶಕ್ಕಾಗಿ ಕಣ್ಣೀರನ್ನು ಹಾಕಿದ್ದಾರೆ ಇಶಾನಿ.
ಸುದೀಪ್ ಅವರಿಂದ ಕಿವಿ ಮಾತು
ಸುದೀಪ್ (Sudeep) ಅವರು ಇಶಾನಿಗೆ ಬಿಗ್ ಬಾಸ್ ಮನೆಯಲ್ಲಿ ಒಂದು ಸಲ ಮಾತ್ರ ಅವಕಾಶ ಸಿಗುತ್ತೆ. ಪದೇ ಪದೇ ಸಿಗೋದಿಲ್ಲ. ಆದರೆ ನಿಮ್ಮ ಈ ಹಠವನ್ನು ನಿಮ್ಮ ಮುಂದಿನ ಜೀವನದಲ್ಲಿ ಮುಂದುವರೆಸಿ ಎನ್ನುವ ಸಾಂತ್ವನದ ಮಾತನ್ನು ಹೇಳಿದ್ದಾರೆ.