Drone Prathap : ಡ್ರೋನ್ ಪ್ರತಾಪ್ (Drone Prathap) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೇಲೆ ಅವರ ಮೇಲಿನ ನೆಗೆಟಿವ್ ಅಭಿಪ್ರಾಯಗಳು ಕಡಿಮೆಯಾಗಿದೆ. ಜನರಿಂದ ಪಾಸಿಟಿವ್ ಮಾತುಗಳು ಕೇಳಿ ಬರುವ ಜೊತೆಗೆ ಪ್ರತಾಪ್ ಬಗ್ಗೆ ಜನರಿಂದ ಸಾಕಷ್ಟು ಮೆಚ್ಚುಗೆಯ ಮಾತುಗಳು ಬಂದಿದ್ದು, ಜನರಿಗೆ ಅವರು ಬಹಳ ಇಷ್ಟವಾಗುತ್ತಿದೆ.

ದಿನ ಕಳೆದ ಹಾಗೆ ಪ್ರತಾಪ್ ಅವರ ಅಭಿಮಾನಿಗಳ ಬಳಗ ಏರಿಕೆಯಾಗುತ್ತಿದೆ. ಇನ್ನು ಈ ವಾರ ಪ್ರತಾಪ್ ಗೆ ಅಗ್ನಿ ಪರೀಕ್ಷೆ ಎದುರಾಗಿದೆ ಎಂದರೆ ಅದು ಖಂಡಿತ ತಪ್ಪಲ್ಲ.. ಏಕೆಂದರೆ ಪ್ರತಾಪ್ ಈ ವಾರ ನಾಮಿನೇಟ್ (Prathap Nominated) ಆಗಿದ್ದು, ಈ ವಾರ ಅವರು ಸೇಫ್ ಆಗೋದಕ್ಕೆ ಜನರ ಬೆಂಬಲ ಬೇಕಾಗಿದೆ.

ಒಂದು ವೇಳೆ ಈ ವಾರ ಪ್ರತಾಪ್ ಎಲ್ಲರಿಗಿಂತ ಮೊದಲು ಸೇವ್ ಆದಲ್ಲಿ ಅವರಿಗೆ ಎಲ್ಲರಿಗಿಂತ ಹೆಚ್ಚಿನ ಓಟು ಬಂದಿದೆ ಎನ್ನುವುದು ಸಾಬೀತಾಗುತ್ತೆ. ಡ್ರೋನ್ ಪ್ರತಾಪ್ ಬಿಗ್ ಬಾಸ್ (Big Boss Kannada 10) ಮನೆಯಲ್ಲಿ ಟಾಸ್ಕ್ ಗಳನ್ನ ಉತ್ತಮವಾಗಿ ಆಡೋ ಮೂಲಕ ಎಲ್ಲರ ಗಮನವನ್ನ ಸೆಳೆಯುತ್ತಿದ್ದಾರೆ.

ಈ ವಾರ ಪ್ರತಾಪ್ ಅವರಿಗೆ ಅವರ ತಂದೆ ಕರೆ ಮಾಡಿದ್ರು. ಮೂರು ವರ್ಷಗಳ ನಂತರ ಅಪ್ಪನ ಜೊತೆ ಮಾತನಾಡಿದ ಪ್ರತಾಪ್ ಈಗ ಹೊಸ ಹುಮ್ಮಸ್ಸಿನಲ್ಲಿ ಇದ್ದಾರೆ, ಈ ವಾರ ಅವರ ಆಟದ ವಿಧಾನ ಸಹಾ ಬದಲಾದಂತೆ ಕಾಣ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಾಪ್ ಫೈನಲ್ ಗೆ ಹೋಗೋದು ಖಚಿತ ಅಂತ ಅನೇಕರು ಹೇಳ್ತಾ ಇದ್ದಾರೆ.

ಪ್ರತಾಪ್ ಬಿಗ್ ಬಾಸ್ ಗೆ ಎಂಟ್ರಿ ನೀಡಿದ ಮೇಲೆ ಅವರನ್ನು ಇನ್ಸ್ಟಾಗ್ರಾಂ ನಲ್ಲಿ ಫಾಲೋ ಮಾಡುವವರ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಅವರ ಹಿಂಬಾಲಕರ ಸಂಖ್ಯೆ ನಾಲ್ಕು ಲಕ್ಷಕ್ಕೆ ತಲುಪಿದೆ ಎನ್ನುವುದು ಸಹಾ ಅಚ್ಚರಿಯನ್ನು ಮೂಡಿಸಿದೆ.