Big Boss: ಮುಂಡಾ ಮೋಚ್ತು ಏನ್ರೋ ಮಾಡ್ತಿದ್ದೀರಾ? ಬಿಗ್ ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಶಾಕಿಂಗ್ ಎಂಟ್ರಿ

Written by Soma Shekar

Published on:

---Join Our Channel---

Big Boss Kannada 10 : ವೀಕೆಂಡ್ ಎಪಿಸೋಡ್ ಮುಗಿಸಿಕೊಂಡು ಮಲಗಿ ಬೆಳಿಗ್ಗೆ ಎದ್ದ ಬಿಗ್ ಬಾಸ್ ಮನೆ (Big Boss Kannada 10) ಮಂದಿಗೆ ಬ್ರಹ್ಮಾಂಡ ಗುರೂಜಿಗಳ (Brahmanda Guruji) ದರ್ಶನವಾಗಿದೆ. ಇದ್ದಕ್ಕಿದ್ದ ಹಾಗೆ ಎಂಟ್ರಿ ಕೊಟ್ಟ ಗುರೂಜಿಯನ್ನು ನೋಡಿ ಕೆಲವರು ಶಾಕ್ ಆಗಿದ್ದಾರೆ. ಇನ್ನೂ ಕೆಲವರು ಖುಷಿ ಪಟ್ಟಿದ್ದಾರೆ.

ಬಿಗ್ ಬಾಸ್ (Big Boss) ಮನೆಯೊಳಕ್ಕೆ ಬ್ರಹ್ಮಾಂಡ ಗುರೂಜಿ ಅವರು ಶಾ ಕಿಂ ಗ್ ಎಂಟ್ರಿ ನೀಡಿದ್ದಾರೆ. ಮನೆಯವರ ಜೊತೆ, ಮನೆಯ ಕ್ಯಾಮೆರಾ ಗಳ ಜೊತೆ ಕೂಡಾ ಗುರೂಜಿ ಅವರ ಒಂದಷ್ಟು ಮಾತುಕತೆಗಳು ನಡೆದಿರೋದು ಪ್ರೊಮೊಗಳಲ್ಲಿ ಕಾಣಿಸಿಕೊಂಡಿದೆ.

ತುಕಾಲಿ ಸಂತು (Tukali Santu) ಅವ್ರು ಗುರೂಜಿ ಅವರ ಜನಪ್ರಿಯ ಡೈಲಾಗ್ ಮುಂಡಾ ಮೋಚ್ತು ಅನ್ನೋದನ್ನ ಹೇಳುವ ಮೂಲಕ ಕಾಮಿಡಿಯನ್ನು ಮಾಡಿದ್ದಾರೆ. ಕಲರ್ಸ್ ವಾಹಿನಿಯು ಗುರೂಜಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪ್ರೊಮೋವನ್ನು ಶೇರ್ ಮಾಡಿದೆ.

ಬ್ರಹ್ಮಾಂಡ ಗುರೂಜಿ ಅವರು ಮನೆ ಎಲ್ಲಾ ಓಡಾಡಿದ್ದಾರೆ. ನಂತರ ಎಲ್ಲಾ ಎಲ್ರೋ ಇದ್ದೀರಾ ಅಂತ ಕೇಳಿದ್ದು, ಮನೆಯಲ್ಲಿ ಇರೋ ಎಲ್ಲರನ್ನು ಸ್ಟಾಚ್ಯೂ ಮಾಡಿ, ನನಗೆ ಓಡಾಡೋಕೆ ಆಗಲ್ಲ, ಕಾಲು ನೋವು ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಮನೆ ಮಂದಿಯಲ್ಲಿ ಕೆಲವರು ಗುರೂಜಿ ಅವರು ಮನೆಯೊಳಗೆ ಬಂದಿರೋದು ಏಕೆ ಅನ್ನೋ ಗೊಂದಲದಲ್ಲಿ ಇದ್ದಾರೆ. ಗುರೂಜಿ ಮನೆಯಲ್ಲಿ ಹಣ್ಣು ತಿನ್ನುತ್ತಾ, ಮನೆ ಎಲ್ಲಾ ಓಡಾಡಿಕೊಂಡು ಮಾತನಾಡಿದ್ದಾರೆ.

ಪ್ರೇಕ್ಷಕರು ಮನೆಯಲ್ಲಿ ಹೊಸ ಆಟ ಶುರುವಾಗಿದ ಅಂದ್ರೆ, ಮನೆಯಲ್ಲಿರುವ ತನೀಷಾ (Tanisha) ಕ್ಯಾಮೆರಾ ಒಂದರ ಮುಂದೆ ನಿಂತು, ಬಿಗ್ ಬಾಸ್ ಗುರೂಜಿಯನ್ನು ಮನೆಯೊಳಗೆ ಏಕೆ ಕಳಿಸಿದ್ದೀರಾ? ಅಂತ ಪ್ರಶ್ನೆಯನ್ನು ಕೇಳಿದ್ದಾರೆ. ಗುರೂಜಿ ಎಂಟ್ರಿ ಹಿಂದಿನ ಕಾರಣವೇನು? ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

ಗುರೂಜಿ ಬಿಗ್ ಬಾಸ್ ಮನೆಯಲ್ಲಿಯೇ ಉಳಿದುಕೊಳ್ತಾರಾ? ಅಥವಾ ಅವರು ಕೇವಲ ಗೆಸ್ಟ್ ಆಗಿ ಮನೆಯೊಳಗೆ ಎಂಟ್ರಿ ನೀಡಿದ್ದಾರಾ ? ಅನ್ನೋದು ಈಗ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಉತ್ತರ ಕ್ಕಾಗಿ ಎಪಿಸೋಡ್ ಗಾಗಿ ಕಾಯಬೇಕಾಗಿದೆ.

Leave a Comment