Bhagyashree : ಬಿಗ್ ಬಾಸ್ (Big Boss Kannada 10) ಮನೆಯಿಂದ ಆರನೇ ವೀಕೆಂಡ್ ನಲ್ಲಿ ಭಾಗ್ಯಶ್ರೀ (Bhagyashree) ಅವರು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಹೊರ ಬಂದ ನಂತರ ಅವರು ಮಾದ್ಯಮಗಳ ಮುಂದೆ ತಮ್ಮ ಜರ್ನಿಯ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಅನುಭವಗಳನ್ನು ಅವರು ಬಿಚ್ಚಿಟ್ಟಿದ್ದಾರೆ.
ಭಾಗ್ಯಶ್ರೀ ಅವರು ಸಂದರ್ಶನವೊಂದರಲ್ಲಿ ತಮ್ಮ ಪ್ರಕಾರ ಬಿಗ್ ಬಾಸ್ (Big Boss) ಮನೆಯಲ್ಲಿ ಫೇಕ್ ಯಾರು, ಬಿಗ್ ಬಾಸ್ ನ ಟಾಪ್ ಐದರಲ್ಲಿ ಯಾರೆಲ್ಲಾ ಇರಬಹುದು ಅನ್ನೋ ವಿಚಾರವನ್ನು ಮಾತನಾಡಿದ್ದಾರೆ. ಭಾಗ್ಯಶ್ರೀ ಅವರು ಬಿಗ್ ಬಾಸ್ ಮನೆಯಲ್ಲಿ ಫೇಕ್ ಅಂತ ಒಬ್ರಿದ್ದಾರೆ ಅನ್ನಿಸೋದಿಲ್ಲ ಎಂದಿದ್ದಾರೆ.

ಕೆಲವು ಸಲ ಕಾರ್ತಿಕ್ (Karthik) ಫೇಕ್ ಅನಿಸುತ್ತೆ, ಇನ್ನೂ ಕೆಲವು ಸಲ ವಿನಯ್ (Vinay) ಫೇಕ್ ಅನಿಸುತ್ತೆ. ಒಮ್ಮೆ ಏನಾದ್ರು ಹೆಲ್ಪ್ ಕೇಳಿ, ನಾನೀರ್ತೀನಿ ಅಂತಿದ್ರು. ಆದರೆ ನಿಜವಾಗಲೂ ಹೆಲ್ಪ್ ಬೇಕಾದಾಗ ನನಗೆ ಹೆಲ್ಪ್ ಮಾಡಲೇ ಇಲ್ಲ ಅನ್ನೋ ಮಾತನ್ನು ಭಾಗ್ಯಶ್ರೀ ಅವರು ಹೇಳಿದ್ದಾರೆ.
ಇನ್ನು ಟಾಪ್ ಫೈವ್ ನಲ್ಲಿ ಕಾರ್ತಿಕ್, ವಿನಯ್, ಪ್ರತಾಪ್, ತುಕಾಲಿ ಸಂತೋಷ್ ಮತ್ತು ಮೈಕಲ್ ಇರಬಹುದು ಅನ್ನೋ ಮಾತನ್ನ ಹೇಳಿರೋ ಭಾಗ್ಯಶ್ರೀ ಅವರು ಕಾರ್ತಿಕ್ ಓವರ್ ಸ್ಮಾರ್ಟ್ ನೆಸ್ ಕಡಿಮೆ ಮಾಡಿದ್ರೆ ವಿನ್ ಆಗೋ ಅರ್ಹತೆ ಇದೆ ಅಂತ ಹೇಳಿದ್ದಾರೆ.