Big Boss: ಬಿಗ್ ಬಾಸ್ ಜರ್ನಿಗೆ ಭಾಗ್ಯಶ್ರೀ, ಇಶಾನಿ ಪಡೆದ ಭಾರೀ ಸಂಭಾವನೆ ಎಷ್ಟು? ಯಾರಿಗೆ ಹೆಚ್ಚು

Written by Soma Shekar

Published on:

---Join Our Channel---

Big Boss Kannada 10 : ಬಿಗ್ ಬಾಸ್ ಮನೆಯ (Big Boss Kannada 10) ಆಟ ಅನ್ನೋದು ಕೇವಲ ಒಂದು ಆಟ ಮಾತ್ರವೇ ಅಲ್ಲ, ಈ ಆಟದಲ್ಲಿ ಸ್ಪರ್ಧಿಗಳಾಗಿ ಇರೋರಿಗೆ ಅವರ ಆಟಕ್ಕೆ ತಕ್ಕ ಹಾಗೆ ಸಂಭಾವನೆ ಕೂಡಾ ನಿರ್ಧಾರಿತವಾಗಿರುತ್ತೆ. ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡೋ ಸ್ಪರ್ಧಿಗಳಿಗೆ ವಾರಕ್ಕೆ ಇಷ್ಟು ಅಂತ ಸಂಭಾವನೆ ನಿಗಧಿ ಆಗಿರುತ್ತೆ.‌ ಹಾಗಾದ್ರೆ ಈ ವಾರ ಮನೆಯಿಂದ ಹೊರ ಬಂದ ಸ್ಪರ್ಧಿಗಳು ಪಡೆದ ಸಂಭಾವನೆ ಎಷ್ಟು ಅನ್ನೋದಕ್ಕೆ ಉತ್ತರ ಇಲ್ಲಿದೆ.

ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ ಆಗಿದೆ. ಮನೆಯಿಂದ ಶನಿವಾರ ಇಶಾನಿ (Eshani), ಭಾನುವಾರ ಭಾಗ್ಯಶ್ರೀ (Bhagyashree) ಅವರು ಹೊರ ಬಂದಿದ್ದಾರೆ. ಇವರಿಗೆ ಬಿಗ್ ಬಾಸ್ ಮನೆಯ ತಮ್ಮ ಜರ್ನಿಯ ಅವಧಿಗೆ ಸಿಕ್ಕ ಸಂಭಾವನೆ ಎಷ್ಟಿರಬಹುದು ಅನ್ನೋದನ್ನು ತಿಳಿಯೋ ಆಸಕ್ತಿ ಸಹಜವಾಗಿಯೇ ಅನೇಕರಲ್ಲಿ ಇದೆ.

ಭಾಗ್ಯಶ್ರೀ ಅವರಿಗೆ ವಾರವೊಂದಕ್ಕೆ 75 ಸಾವಿರ ರೂ.ಗಳ ಸಂಭಾವನೆ ನಿಗಧಿ ಮಾಡಲಾಗಿತ್ತು ಎನ್ನಲಾಗಿದ್ದು, ಈ ಲೆಕ್ಕಾಚಾರದಲ್ಲಿ ಅವರಿಗೆ ಆರು ವಾರಗಳ ಅವರ ಜರ್ನಿಗೆ ಒಟ್ಟು ಮೂರೂವರೆ ಲಕ್ಷ ರೂ.ಗಳ ಸಂಭಾವನೆ ದೊರತಿದೆ ಎನ್ನುವ ವಿಚಾರಗಳು ಸುದ್ದಿಯಾಗಿದೆ.

ಇದನ್ನೂ ಓದಿ : Trisha: ಇನ್ನೆಂದೂ ಆ ನಟನ ಜೊತೆ ನಟಿಸೋದಿಲ್ಲ; ತ್ರಿಶಾ ಸಂಚಲನ ನಿರ್ಧಾರ, ಬೆಚ್ಚಿದ ತಮಿಳು ಸಿನಿ ಇಂಡಸ್ಟ್ರಿ

ರ್ಯಾಪರ್ ಇಶಾನಿಗೆ (Rapper Eshani) ವಾರವೊಂದಕ್ಕೆ ಒಂದು ಲಕ್ಷ ರೂ.ಗಳ ಸಂಭಾವನೆ ನಿಗಧಿಯಾಗಿತ್ತು ಎನ್ನಲಾಗಿದ್ದು, ಇವರಿಗೆ ಆರು ವಾರಗಳ ತಮ್ಮ ಜರ್ನಿಗೆ ಬರೋಬ್ಬರಿ ಆರು ಲಕ್ಷ ರೂ.ಗಳ ಸಂಭಾವನೆ ಸಿಗಲಿದೆ ಎಂದು ಹೇಳಲಾಗಿದೆ. ಇಶಾನಿ ಸುದೀಪ್ ಅವರ ಮುಂದೆ ಕಣ್ಣೀರು ಹಾಕಿ ಮತ್ತೊಂದು ಅವಕಾಶ ಕೇಳಿದ್ದು ಅಚ್ಚರಿ ಮೂಡಿಸಿದೆ.

Leave a Comment