Big Boss: ತನೀಷಾ ವಿರುದ್ಧ ಕತ್ತಿ ಮಸೆದ ಸಂಗೀತಾ, ನಮ್ರತಾ; ನಮ್ರತಾ ಜೊತೆ ಕೈ ಜೋಡಿಸಿದ ಸಂಗೀತಾ

Written by Soma Shekar

Updated on:

---Join Our Channel---

Big Boss Kannada 10 : ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಸಂಬಂಧಗಳು ಬದಲಾಗೋದಕ್ಕೆ ಹೆಚ್ಚಿನ ಸಮಯ ಹಿಡಿಯೋದಿಲ್ಲ ಅನ್ನೋದಕ್ಕೆ ಏಳನೇ ವಾರದ ನಾಮಿನೇಷನ್ ಸಾಕ್ಷಿಯಾಗಿದೆ. ಹೌದು, ಬಿಗ್ ಬಾಸ್ ನ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಯಾರು, ಯಾರನ್ನ ನಾಮಿನೇಟ್ ಮಾಡಿದ್ದಾರೆ ಅನ್ನೋದರ ಒಂದು ಸಣ್ಣ ವೀಡಿಯೋ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಶಾಕಿಂಗ್ ಎನಿಸಿದೆ.

ತುಕಾಲಿ ಸಂತು (Tukali Santosh) ಅವರು ನಮ್ರತಾ ಅವರನ್ನ ನಾಮಿನೇಟ್ ಮಾಡಿದ್ದಾರೆ. ಅಲ್ಲದೇ ನಮ್ರತಾ (Namratha) ಯಾವುದೇ ವಿಷಯಗಳನ್ನ ಆಗಲೀ ರಬ್ಬರ್ ತರ ಎಳೀತಾರೆ ಅಂತ ಹೇಳಿದ್ದು, ನಮ್ರತಾ ಅದಕ್ಕೆ ನಾನು ಮೆಗಾ ಸೀರಿಯಲ್ ಹೀರೋಯಿನ್ ಅಮ್ಮಾ ಅಂತ ಉತ್ತರವನ್ನು ನೀಡಿದ್ದಾರೆ.

ಇನ್ನು ನಮ್ರತಾ ಮತ್ತು ಸಂಗೀತಾ (Sangeetha) ಇಬ್ಬರೂ ಸಹಾ ತನೀಷಾ ಅವರ ಹೆಸರನ್ನು ನಾಮಿನೇಷನ್ ಗೆ ಸೂಚಿಸಿದ್ದಾರೆ. ಸಂಗೀತಾ ಕಾರಣವನ್ನ ಕೊಡ್ತಾ ತನೀಷಾ ವೀಕೆಂಡ್ ನಲ್ಲಿ ಮಾತಾಡೋ ರೀತಿ ಬೇರೆ ಇರುತ್ತೆ, ಉಳಿದ ದಿನಗಳಲ್ಲಿ ಬೇರೆ ತರ ಇರೋ ರೀತಿ ಬೇರೆ ಇರುತ್ತೆ ಅಂತ ಹೇಳಿದ್ರೆ, ನಮ್ರತಾ ಇವ್ರು ಫೇಕಾಗಿದ್ದು, ನಮ್ಮನ್ನ ಫೇಕ್ ಅಂತಾರೆ ಅನ್ನೋ ಮಾತನ್ನ ಹೇಳಿದ್ದಾರೆ.

ಇನ್ನು ತನೀಷಾ (Tanisha) ಸಂಗೀತಾನ ನಾಮಿನೇಟ್ ಮಾಡ್ತಾ, ನನ್ನ ವಾಯ್ಸ್ ನಿಮಗೆ ಹೇಗೆ ಪ್ರಾಬ್ಲಂ ಅನ್ಸುತ್ತೆ, ನನಗೆ ನೀವು ಎರಡೆರಡು ತರ ನಡ್ಕೊಳ್ಳೋದು ನನಗೆ ಪ್ರಾಬ್ಲಂ ಅಂತ ಅನಿಸುತ್ತೆ ಅನ್ನೊ ಮಾತನ್ನ ಹೇಳಿದ್ದಾರೆ. ತನೀಷಾ ಮಾತಿಗೆ ನಮ್ರತಾ ಮತ್ತು ಸಂಗೀತಾ ವ್ಯಂಗ್ಯದಿಂದ ನಗ್ತಾ, ಒಬ್ಬರಿಗೊಬ್ಬರು ಹೈ ಫೈ ಕೊಟ್ಟಿದ್ದಾರೆ.

ಸಂಗೀತಾ ಈಗ ತನೀಷಾ ಜೊತೆ ಬಿಟ್ಟು, ನಮ್ರತಾ ಜೊತೆಗೆ ಫ್ರೆಂಡ್ ಶಿಪ್ ಮಾಡಿರೋ ಹಾಗೆ ಕಂಡಿದೆ. ಇನ್ನು, ಕಾರ್ತಿಕ್ ವಿನಯ್ ನ, ವಿನಯ್ ವರ್ತೂರು ಸಂತೋಷ್ ನ, ಪ್ರತಾಪ್ ಸ್ನೇಹಿತ್ ನ ನಾಮಿನೇಟ್ ಮಾಡಿರೋದು ಪ್ರೊಮೋದಲ್ಲಿ ಕಂಡಿದೆ. ಉಳಿದವರು ಯಾವ ಯಾವ ಕಾರಣಕ್ಕೆ ಯಾರನ್ನ ನಾಮಿನೇಟ್ ಮಾಡಿದ್ರು ಅಂತ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

Leave a Comment