Himanshi Asim: ಪ್ರೇಮಕ್ಕಿಂತ ಧರ್ಮ ಮುಖ್ಯ, ಬಿಗ್ ಬಾಸ್ ಜೋಡಿಯ ಬ್ರೇಕಪ್; ಆಸಿಮ್ ಗೆ ಗುಡ್ ಬೈ ಹೇಳಿದ ಹಿಮಾನ್ಷಿ

Written by Soma Shekar

Published on:

---Join Our Channel---

Himanshi Asim : ಸುಪ್ರಸಿದ್ಧ ರಿಯಾಲಿಟಿ ಶೋ ಹಿಂದಿ ಬಿಗ್ ಬಾಸ್ (Big Boss Hindi) ಮೂಲಕ ಜೋಡಿಯಾದವರು ಆಸಿಮ್ (Asim Riyaz) ರಿಯಾಜ್ ಮತ್ತು ಹಿಮಾನ್ಷಿ ಖುರಾನಾ (Himanshi Khurana). ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದ ಇವರು ಅನಂತರ ಪ್ರೇಮ ಪಕ್ಷಿಗಳಾಗಿ ಬದಲಾಗಿದ್ದರು. ಇವರಿಬ್ಬರ ಸ್ನೇಹ ಹಾಗೂ ಪ್ರೇಮದ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದವು.

ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಕೂಡಾ ಇವರ ಪ್ರೇಮ ಸಂಬಂಧ ಮುಂದುವರೆದಿತ್ತು. ಆದರೆ ಈಗ ಹಿಮಾನ್ಷಿ ಖುರಾನಾ (Himanshi Asim) ಮತ್ತು ಆಸಿಮ್ ರಿಯಾಜ್ ನಡುವೆ ಬ್ರೇಕ್ ಅಪ್ ಆಗಿರುವ ವಿಚಾರ ಅಧಿಕೃತವಾಗಿದ್ದು, ಹಿಮಾನ್ಷಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಈ ವಿಚಾರವನ್ನ ಘೋಷಣೆ ಮಾಡಿದ್ದಾರೆ.

ತಾನು ಆಸಿಮ್ ಜೊತೆಗಿನ ಸಂಬಂಧಕ್ಕೆ ಪೂರ್ಣವಿರಾಮ ಹಾಕುತ್ತಿರುವುದಾಗಿ ಹಿಮಾನ್ಷಿ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪಂಜಾಬಿ ಗಾಯಕಿ (Punjabi Singer) ಹಾಗೂ ನಟಿಯಾಗಿರುವ ಹಿಮನ್ಷಿ ತಮ್ಮ ಪೋಸ್ಟ್ ನಲ್ಲಿ, ಹೌದು ನಾವಿಬ್ಬರೂ ಇನ್ನು ಒಟ್ಟಿಗೆ ಇರುವುದಿಲ್ಲ. ನಾವು ಒಟ್ಟಿಗೆ ಕಳೆದ ಸಮಯ ಅದ್ಭುತ. ಈ ಸಂಬಂಧ ಈಗ ಕೊನೆಯಾಗಿದೆ. ನಮ್ಮ ಪ್ರತ್ಯೇಕ ಜೀವನದಲ್ಲಿ ನಾವು ಮುಂದೆ ಸಾಗುತ್ತಿದ್ದೇವೆ. ಇದನ್ನೂ ಓದಿ : Venu Swamy: ಅವರಿಬ್ಬರ ದಾಂಪತ್ಯ ಮುರಿದು ಬೀಳುತ್ತೆ; ಸ್ಟಾರ್ ಜೋಡಿಯ ಬಗ್ಗೆ ವೇಣುಸ್ವಾಮಿ ಸ್ಪೋಟಕ ಭವಿಷ್ಯ ವಾಣಿ

ನಮ್ಮ ವಿಭಿನ್ನವಾದ ಧಾರ್ಮಿಕ ನಂಬಿಕೆಗಳಿಗಾಗಿ ನಾವು ನಮ್ಮ ಪ್ರೀತಿಯನ್ನು ಅತ್ಯಾಗ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅವರು, ಪ್ರತಿಯೊಬ್ಬರೂ ತಮ್ಮ ಖಾಸಗಿತನವನ್ನು ಗೌರವಿಸಬೇಕು, ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆಂದು ನೆಟ್ಟಿಗರು ಮತ್ತು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈಗ ಇವರ ಬ್ರೇಕ್ಅಪ್ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಹಿಮಾನ್ಷಿ ಮೂಲತಃ ಪಂಜಾಬಿ ಸಿಖ್ ಕುಟುಂಬಕ್ಕೆ ಸೇರಿದರೆ ಆಸಿಮ್ ರಿಯಾಜ್ ಅವರು ಇಸ್ಲಾಂ ಧರ್ಮದವರಾಗಿದ್ದಾರೆ. ಇವರು ಮೂಲತಃ ಜಮ್ಮು ನವರಾಗಿದ್ದಾರೆ. ಬಿಗ್ ಬಾಸ್ ಹಿಂದಿ ಸೀಸನ್ 13 ರಲ್ಲಿ ಇವರಿಬ್ಬರೂ ಭೇಟಿಯಾದರು. ಅಲ್ಲಿಂದಲೇ ಇವರ ನಡುವೆ ಪ್ರೀತಿ ಶುರುವಾಯಿತು.

ಒಂದಷ್ಟು ಆಲ್ಬಮ್ ಸಾಂಗುಗಳಲ್ಲಿ ಕೂಡಾ ಇವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಮತ್ತೊಂದು ಪೋಸ್ಟ್ ನಲ್ಲಿ ಹಿಮಾನ್ಷಿ, ಪ್ರಯತ್ನ ಮಾಡಿದೆವು ಆದರೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಆದರೆ ಅದೃಷ್ಟ ನಮಗೆ ಸಾಥ್ ನೀಡಲಿಲ್ಲ.

ದ್ವೇಷ ಇಲ್ಲ, ಪ್ರೀತಿ ಮಾತ್ರ ಇದೆ. ಇದೊಂದು ಪ್ರಬುದ್ಧ ನಿರ್ಧಾರ ಎಂದು ಬರೆದುಕೊಂಡಿದ್ದಾರೆ. ಆಸಿಮ್ ಮಾತ್ರ ಸೋಶಿಯಲ್ ಮೀಡಿಯಾಗಳಲ್ಲಿ ಇನ್ನು ತಮಗೂ ಮತ್ತು ಹಿಮಾನ್ಷಿಗೂ ಬ್ರೇಕ್ ಅಪ್ (Himanshi Asim breakup) ಆಗಿರುವ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ. ಮೊದಲು ಹಿಮಾನ್ಷಿಯೇ ಬ್ರೇಕಪ್ ಬಗ್ಗೆ ಹೇಳಿಕೊಂಡಿದ್ದಾರೆ.

Leave a Comment