Bhagya Lakshmi: ಭಾಗ್ಯಲಕ್ಷ್ಮೀ ಸೀರಿಯಲ್ ಮೇಲೆ ರೊಚ್ಚಿಗೆದ್ದ ಪ್ರೇಕ್ಷಕರು, ಹೆಂಡ್ತಿನ ಪ್ರಾಣಿಗೆ ಹೋಲಿಸಿದ ತಾಂಡವ್

Written by Soma Shekar

Published on:

---Join Our Channel---

Bhagya Lakshmi : ಇತ್ತೀಚಿಗೆ ಕಿರುತೆರೆಯ ಪ್ರೇಕ್ಷಕರು ಭಾಗ್ಯಲಕ್ಷ್ಮೀ (Bhagya Lakshmi) ಸೀರಿಯಲ್ ನಲ್ಲಿ ಸದಾ ಅಳುವ, ಗೋಳಾಡುವ, ಪೆದ್ದಳಂತೆ ಆಡುವ, ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ಓದಿ, ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದ್ರು ತನಗೆ ಚೂರು ಪಾರು ಇಂಗ್ಲೀಷ್ ಕೂಡಾ ಬರಲ್ಲ ಅಂತ ಆಡ್ತಿರೋ ಭಾಗ್ಯ ಪಾತ್ರವನ್ನು ನೋಡಿ ನೋಡಿ ರೋಸಿಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಶೇರ್ ಮಾಡೋ ಪ್ರೋಮೊಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಗಳು ಹರಿದು ಬರುತ್ತಿವೆ.

ಭಾಗ್ಯಳ ವಿಪರೀತ ಎನಿಸುವಂತಹ ಪೆದ್ದುತನ ಮತ್ತು ಆಕೆಯ ಗಂಡ ತಾಂಡವ್ ಹೆಂಡತಿ ಬಗ್ಗೆ ಆಡೋ ಮಾತುಗಳನ್ನ ನೋಡಿದ ಮಹಿಳಾ ಪ್ರೇಕ್ಷಕರೇ ಸೀರಿಯಲ್ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈಗ ಇವೆಲ್ಲವುಗಳ ನಡುವೆ ಇತ್ತೀಚಿನ ಎಪಿಸೋಡ್ ಒಂದರಲ್ಲಿ ತಾಂಡವ್ ಪಾತ್ರ ಆಡುವ ಮಾತುಗಳು ಇನ್ನೊಂದು ಹಂತಕ್ಕೆ ತಲುಪಿದೆ. ಹೆಂಡತಿಯನ್ನು ಏ ಎಮ್ಮೆ ಎಂದು ಕರೆದು ನಿಂದಿಸಿದ್ದಾನೆ ತಾಂಡವ್.

ದೇವಸ್ಥಾನಕ್ಕೆ ಹೋಗ್ತೀನಿ ಅಂತ ಹೇಳಿ ಕೆಲಸಕ್ಕೆ ಹೋಗಿದ್ದ ಭಾಗ್ಯ ಮನೆಗೆ ಬರೋ ವೇಳೆಗೆ ಮಗ ಕೈ ಸುಟ್ಟುಕೊಂಡಿದ್ದಾನೆ. ಭಾಗ್ಯಾನ ತಾಂಡವ್ (Tandav) ಹೊಟೇಲ್ ನಲ್ಲಿ ನೋಡಿದ್ದಾನೆ. ಮನೆಯಲ್ಲಿ ಮಗನ ಆರೈಕೆ ಮಾಡೋವಾಗ ಭಾಗ್ಯ ಅವರ ಅಮ್ಮ ಸುನಂದ ಭಾಗ್ಯಳನ್ನ ಎಲ್ಲಿಗೆ ಹೋಗಿದ್ದೆ ಅಂತ ಪ್ರಶ್ನೆ ಮಾಡಿದ್ದಾಳೆ ಮಗಳ ಮೇಲೆ ರೇಗಾಡಿದ್ದಾಳೆ. ಆಗ ತಾಂಡವ್ ಭಾಗ್ಯಾಳನ್ನ, ಏ ಎಮ್ಮೆ ಅಮ್ಮ ಮಾತನಾಡಿಸೋದು ಕೇಳಿಸ್ತಾ ಇಲ್ವಾ? ಅಂತ ಪ್ರಶ್ನೆ ಮಾಡ್ತಾನೆ.

ಅಷ್ಟು ಮಾತ್ರವೇ ಅಲ್ಲದೇ ದೇವಸ್ಥಾನಕ್ಕೆ ಹೋಗಿದ್ಯೋ ಅಥವಾ ಇನ್ನೆಲ್ಲಿಗಾದ್ರು ಹೋಗಿದ್ಯೋ ಅನ್ನೋ ಅರ್ಥದಲ್ಲಿ ಪ್ರಶ್ನೆ ಮಾಡ್ತಾನೆ. ಆದರೆ ಈ ವೇಳೆ ಮಧ್ಯೆ ಬರುವ ಕುಸುಮಾ ಸೊಸೆ ದೇವಸ್ಥಾನಕ್ಕೆ ಹೋಗಿದ್ದ ವಿಷಯ ನನಗೆ ಗೊತ್ತಿತ್ತು, ಭಾಗ್ಯ ಯಾರಿಗೂ ಉತ್ತರ ಕೊಡಬೇಕಾಗಿಲ್ಲ, ಪಕ್ಕದ ಮನೆಯವರು ನಮ್ಮ ತಂಟೆಗೆ ಬರಬೇಡಿ ಅಂದಾಗ ಭಾಗ್ಯ ಬಚಾವ್ ಆಗಿದ್ದಾಳೆ.

ಆದರೆ ಇಂತದ್ದೆಲ್ಲಾ ನೋಡಿದ ಪ್ರೇಕ್ಷಕರು ಸಿಟ್ಟಾಗಿದ್ದಾರೆ. ಭಾಗ್ಯ ಪಾತ್ರವನ್ನು ಯಾವಾಗ್ಲೂ ಅಳುಮುಂಜಿಯ ತರ, ಪೆದ್ದಿ ತರ ತೋರಿಸೋದು, ತಾಂಡವ್ ಹೆಂಡತಿಯನ್ನ ಎಮ್ಮೆ ಅಂತ ಕರೆಯೋದು ಇಂತಹುವುಗಳ ಮೂಲಕ ಈ ಸೀರಿಯಲ್ ನವರು ಸಮಾಜಕ್ಕೆ ಯಾವ ಸಂದೇಶ ಕೊಡೋಕೆ ಹೊರಟಿದ್ದಾರೆ, ಎಂತ ಸಂಸ್ಕಾರ ಕಲಿಸ್ತಿದ್ದಾರೆ ಇಂತಹ ಸೀರಿಯಲ್ ಗಳನ್ನ ಬೈಕಾಟ್ ಮಾಡಿ ಅಂತ ಅಸಮಾಧಾನಗೊಂಡಿದ್ದಾರೆ.

Leave a Comment