BBK9: ನೀವು ಚಪ್ಪರ್ ತರ ಇದ್ದೀರಾ!! ನವಾಜ್ ಮಾತಿಗೆ ಎಲ್ಲರೂ ಶಾಕ್! ಇಷ್ಟಕ್ಕೂ ಅಲ್ಲಿ ನಡೆದಿದ್ದೇನು?

Entertainment Featured-Articles Movies News

ಬಿಗ್ ಬಾಸ್ ಸೀಸನ್ 9 ಭರ್ಜರಿಯಾಗಿ ಆರಂಭವಾಗಿದ್ದು, ಸದ್ದು, ಸುದ್ದಿಯನ್ನು ಮಾಡುತ್ತಾ ಬಿಗ್ ಬಾಸ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಒಟ್ಟು ಹದಿನೆಂಟು ಮಂದಿ ಸ್ಪರ್ಧಿಗಳ ನಡುವೆ ಆಟ ಜೋರಾಗಿ ಸಾಗಿದೆ. ಮನರಂಜನೆಯ ವಿಚಾರದಲ್ಲಿ ಸಹಾ ಸದ್ಯಕ್ಕೆ ಮನೆಯಲ್ಲಿ ಯಾವುದೇ ಕೊರತೆಯಿಲ್ಲ ಎನ್ನುವ ಹಾಗೆ ಸಾಗಿದೆ ವಾತಾವರಣ. ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿರುವ ಸೆಲೆಬ್ರಿಟಿಗಳ ನಡುವೆಯೇ ಸಿನಿಮಾ ರಿವ್ಯೂಗಳ ಮೂಲಕ ಸದ್ದು ಮಾಡಿದ ಸೈಕ್ ನವಾಜ್ ಕೂಡಾ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವುದು ವಿಶೇಷವಾಗಿದೆ.

ಸೈಕ್ ನವಾಜ್ ಮಾತನಾಡುವ ವಿಧಾನ ಸ್ವಲ್ಪ ಮಾಸ್ ಆಗಿದೆ. ನವಾಜ್ ಅಳೆದು, ತೂಗಿ ಮಾತನಾಡುವ ಹುಡುಗನಲ್ಲ. ಮನಸ್ಸಿಗೆ ಬಂದಿದ್ದನ್ನು ಮುಕ್ತವಾಗಿ ಹೇಳುವ ಯುವಕನಾಗಿದ್ದಾನೆ. ಹಾಗೆ ತನಗೆ ಅನಿಸಿದ ಒಂದು ವಿಚಾರವನ್ನು ನವಾಜ್ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಅವರ ಬಳಿ ಹೇಳಿಕೊಂಡಿದ್ದು, ರಾಕೇಶ್ ಅದನ್ನು ಮನೆಯ ಅನ್ಯ ಸದಸ್ಯರೊಂದಿಗೆ ಹಂಚಿಕೊಂಡಿದ್ದು, ರಾಕೇಶ್ ಹೇಳಿದ ವಿಚಾರ ಕೇಳಿ ಮನೆಯ ಸದಸ್ಯರು ಶಾ ಕ್ ಆಗುವ ಜೊತೆಗೆ ಅಲ್ಲಿ ನಗು ಕೂಡಾ ಮೂಡುವಂತಾಗಿದೆ. ಇಷ್ಟಕ್ಕೂ ನವಾಜ್ ರಾಕೇಶ್ ಗೆ ಹೇಳಿದ್ದು ಏನು ಅನ್ನೋದು ಗೊತ್ತಾದ್ರೆ ನೀವು ಸಹಾ ನಗ್ತೀರಾ..

ಹೌದು, ರಾಕೇಶ್ ಅಡಿಗೆ ಬೆಳಿಗ್ಗೆ ಬಾತ್ ರೂಂ ಏರಿಯಾದಲ್ಲಿ ಕುಳಿತಿದ್ದ ಮಹಿಳಾ ಸದಸ್ಯರ ಜೊತೆ ಮಾತನಾಡುತ್ತಾ ನವಾಜ್ ತನ್ನ ಬಳಿ ಹೇಳಿದ ಮಾತನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ. ನವಾಜ್ ರಾಕೇಶ್ ಅವರನ್ನು ನೋಡಿ, ಅಣ್ಣಾ ನೀವು ಟಿವಿಯಲ್ಲಿ ನೋಡೋಕೆ ತುಂಬಾ ಚೆನ್ನಾಗಿ ಕಾಣ್ತಾ ಇದ್ದಿರಿ, ಆದರೆ ಈಗ ಎದುರುಗಡೆ ನೋಡಿದ್ರೆ ಚಪ್ಪರ್ ತರ ಇದ್ದೀರಾ ಅಂದಿದ್ದನಂತೆ. ನವಾಜ್ ಹೀಗೆ ಯಾವುದೇ ಫಿಲ್ಟರ್ ಇಲ್ಲದೇ ಮಾತಾಡುತ್ತಾ ತನ್ನನ್ನು ಚಪ್ಪರ್ ಅಂದ ವಿಚಾರವನ್ನು ರಾಕೇಶ್ ಹಂಚಿಕೊಂಡಿದ್ದಾರೆ. ರಾಕೇಶ್ ಹೇಳಿದ ಮಾತನ್ನು ಕೇಳಿ ಅಲ್ಲಿದ್ದವರು ನಕ್ಕಿದ್ದಾರೆ.

ಇನ್ನು ರಾಕೇಶ್ ನವಾಜ್ ಬಳಿ ಚಪ್ಪರ್ ಅಂದ್ರೆ ಅರ್ಥ ಏನೋ ಎಂದು ಕೇಳಿದರಂತೆ. ನವಾಜ್ ಆಗ ಅದಕ್ಕೆ ನಾನು ನೇರವಾಗಿ ಮಾತಾಡಲ್ಲ, ಹೀಗೆ ಮಾತಾಡ್ತೀನಿ ಅಂತಾನೇ ಎಂದು ಹೇಳಿದ್ರಂತೆ. ರಾಕೇಶ್ ಹೇಳಿದ ಮಾತು ಒಂದು ಕ್ಷಣ ಎಲ್ಲರಿಗೂ ಶಾ ಕ್ ಎನಿಸಿದೆ. ಆದರೆ ನವಾಜ್ ಅವರನ್ನು ಚಪ್ಪರ್ ಅಂದಿದ್ದಾನೆ ಎನ್ನುವ ವಿಚಾರ ಮಾತ್ರ ಎಲ್ಲರ ನಗುವಿಗೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಯಾವುದೇ ಸೀರಿಯಸ್ ಚರ್ಚೆಗಳು, ಗಲಾಟೆಗಳು ನಡೆದಿಲ್ಲ. ಆದರೆ ಮುಂದೆ ಮನೆಯ ವಾತಾವರಣ ಹೀಗೆ ಇರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ.

Leave a Reply

Your email address will not be published.