BBK 10: ಬಿಗ್ ಬಾಸ್ ಮಾತಿಗೂ ಬೆಲೆ ಇಲ್ಲ, ವೀಕೆಂಡ್ ನಲ್ಲಿ ಉಗಿದ್ರೂ ಬದಲಾಗಿಲ್ಲ; ಸ್ನೇಹಿತ್ ಮೇಲೆ ಪ್ರೇಕ್ಷಕರ ಸಿಟ್ಟು

Written by Soma Shekar

Published on:

---Join Our Channel---

BBK 10 : ಬಿಗ್ ಬಾಸ್ ಮನೆಯಲ್ಲಿ (BBK 10) ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ಆರಂಭವಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಎಲ್ಲೆಲ್ಲೂ ಈ ಟಾಸ್ಕ್ ನ ತಂಡಗಳ ಆಯ್ಕೆ ಕುರಿತಾಗಿ, ಸ್ನೇಹಿತ್ ಕ್ಯಾಪ್ಟನ್ ಆಗಿ ತೆಗೆದುಕೊಂಡ ನಿರ್ಧಾರಗಳ ಕುರಿತಾಗಿ ಸಾಕಷ್ಟು ಅಸಮಾಧಾನಗಳು ಹರಿದಾಡುತ್ತಿದ್ದು, ನೆಟ್ಟಿಗರು ಆಟದ ತಂಡಗಳ ಬಗ್ಗೆಯೇ ತೀವ್ರ ಅಸಮಾಧಾನಗೊಂಡಿದ್ದಾರೆ.

ಈ ವಾರ ಸ್ನೇಹಿತ್ ಗೆ (Snehith) ಕ್ಯಾಪ್ಟನ್ ಆಗಿ ವಿಶೇಷ ಅಧಿಕಾರ ಸಿಕ್ಕಿದೆ. ಆಟಕ್ಕಾಗಿ ಎರಡು ತಂಡಗಳನ್ನು ಅದರಲ್ಲಿನ ಸ್ಪರ್ಧಿಗಳನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಅವರಿಗಿತ್ತು. ಅಲ್ಲದೇ ಬಿಗ್ ಬಾಸ್ ಎರಡೂ ತಂಡಗಳಲ್ಲಿ ದೈಹಿಕವಾಗಿ ಮತ್ತು ಮಾನಸಿಕ ಸಾಮರ್ಥ್ಯದ ವಿಚಾರದಲ್ಲಿ ಸಮ ಬಲ ಇರುವಂತೆ ತಂಡ ರಚನೆ ಮಾಡಲು ಬಹಳ ಸ್ಪಷ್ಟವಾಗಿ ತಿಳಿಸಿದ್ದರು. ಇದನ್ನೂ ಓದಿ :Actor Nani: ಲಿಪ್ ಲಾಕ್ ತಪ್ಪಲ್ಲ, ನನ್ನ ಮಗನೆದುರೇ ಹೆಂಡತಿಗೆ ಕಿಸ್ ಮಾಡ್ತೀನಿ; ನಟ ನಾನಿ ಶಾಕಿಂಗ್ ಮಾತು

ಆದರೆ ಬಿಗ್ ಬಾಸ್ (Big Boss) ಮಾತನ್ನ ಪರಿಗಣನೆಗೆ ತೆಗೆದುಕೊಳ್ಳದ ಸ್ನೇಹಿತ್ ನಮ್ರತಾ ಹೇಳಿದ್ದನ್ನ ಮಾತ್ರ ಆಲಿಸಿ, ವರ್ತೂರು ಸಂತೋಷ್ ಅವರ ತಂಡವನ್ನು ವಿನಯ್ ಮತ್ತು ನಮ್ರತಾಗೆ ಅನುಕೂಲವಾಗುವಂತೆ ಮಾಡಿಕೊಟ್ಟಿದ್ದಾರೆ. ಎದುರಾಳಿ ತಂಡದಲ್ಲಿ ತನೀಷಾಗೆ ಕಾಲು ಪೆಟ್ಟಾಗಿರುವ ಕಾರಣ ಸಂಗೀತಾ (Sangeetha) ಮೈಕಲ್ ನ ತಮ್ಮ ತಂಡಕ್ಕೆ ಕಳುಹಿಸುವಂತೆ ಸ್ನೇಹಿತ್ ನ ಕೇಳಿದ್ದರು.

ಆದರೆ ಸ್ನೇಹಿತ್ ಅದನ್ನು ಪರಿಗಣಿಸದೇ ವರ್ತೂರು ಸಂತೋಷ್ ತಂಡಕ್ಕೆ ಮೈಕಲ್, ವಿನಯ್, ನಮ್ರತಾ, ತುಕಾಲಿ ಸಂತೋಷ್, ಮತ್ತು ಪವಿ ಅವರನ್ನು ಸೇರ್ಪಡೆ ಮಾಡಿದರೆ, ಸಂಗೀತಾ ಅವರ ತಂಡಕ್ಕೆ ಸಿರಿ, ತನೀಷಾ, ಪ್ರತಾಪ್, ಕಾರ್ತಿಕ್, ಅವಿನಾಶ್ ಮತ್ತು ಪವಿ ಅವರನ್ನು ನೀಡಿದ್ದಾರೆ.

ಯಾರು ಎಷ್ಟೇ ವಾದಿಸಿದರೂ ಸ್ನೇಹಿತ್ ತಮ್ಮ ನಿರ್ಧಾರಕ್ಕೆ ಕಾರಣಗಳನ್ನು ಕೊಟ್ಟರು. ಕೊನೆಗೆ ಬಿಗ್ ಬಾಸ್ ಕೂಡಾ ಸ್ನೇಹಿತ್ ಅವರನ್ನ ನಿಮ್ಮ ಆಯ್ಕೆ ಸೂಕ್ತವಾಗಿದೆಯಾ ಅಂತ ಪ್ರಶ್ನೆ ಮಾಡಿದಾಗಲೂ ಸ್ನೇಹಿತ್ ಹೌದು ಎಂದೇ ಹೇಳಿದಾಗ, ಬಿಗ್ ಬಾಸ್ ಒಳ್ಳೆಯದು ಎಂದು ಹೇಳಿ ಮೌನಕ್ಕೆ ಜಾರಿದರು.

ಇಲ್ಲಿ ಮೈಕಲ್ (Michael) ತಾನು ಸಂಗೀತಾ ತಂಡದಲ್ಲಿ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು, ಡ್ರೋನ್ ಪ್ರತಾಪ್ ತಾನು ವರ್ತೂರು ಸಂತೋಷ್ ಅವರ ಟೀಮ್ ಗೆ ಹೋಗಲು ಬಯಸಿದ್ದರು. ಆದರೆ ನಡೆದ ಚರ್ಚೆಗಳು, ಅದಕ್ಕೆ ಕೊಟ್ಟ ಕಾರಣಗಳು, ಕ್ಯಾಪ್ಟನ್ ವಿಶೇಷ ಅಧಿಕಾರ ಎಲ್ಲದರಿಂದ ಕ್ಯಾಪ್ಟನ್ ನಿರ್ಣಯ ಫೈನಲ್ ಆಯಿತು.

ಆದರೆ ಇದನ್ನೆಲ್ಲಾ ನೋಡುತ್ತಿರುವ ಪ್ರೇಕ್ಷಕರು ಮತ್ತು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಸ್ನೇಹಿತ್ ಆಟದಲ್ಲಿ ಪಕ್ಷಪಾತ ಸ್ಪಷ್ಟವಾಗಿ ಕಾಣ್ತಿದೆ. ಅವರು ತಮ್ಮ ಅಧಿಕಾರವನ್ನು ತಮ್ಮವರಿಗಾಗಿ ಮಿಸ್ ಯೂಸ್ ಮಾಡ್ತಿದ್ದಾರೆ, ಮನೆಗೆ ಹೋಗಬೇಕಾದವರನ್ನು ಉಳಿಸಿ ಇಷ್ಟೆಲ್ಲಾ ಅಧಿಕಾರ ಕೊಟ್ಟಿದ್ದು ತಪ್ಪು ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಈ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ (Kichaha Sudeep) ಅವರು ಇದರ ಬಗ್ಗೆ ಮಾತನಾಡಲೇಬೇಕು ಅಂತ ಅನೇಕರು ತಮ್ಮ ಅನಿಸಿಕೆಗಳನ್ನು ಶೇರ್ ಮಾಡುತ್ತಿದ್ದಾರೆ. ಕೆಲವರು ಈಗಾಗಲೇ ಸುದೀಪ್ ಅವರು ಬುದ್ಧಿ ಹೇಳಿದ್ರು ಸ್ನೇಹಿತ್ ಬದಲಾಗಿಲ್ಲ ಅಂದ್ರೆ, ಇನ್ನೂ ಕೆಲವರು ಸ್ನೇಹಿತ್ ನ ಉಳಿಸಲು ವೈಲ್ಡ್ ಕಾರ್ಡ್ ಗಳನ್ನು ನೇರ ನಾಮಿನೇಟ್ ಮಾಡಲಾಗಿದೆ ಎಂದೂ ಸಹಾ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈಗ ಎಲ್ಲರ ಗಮನ ವೀಕೆಂಡ್ ಕಡೆಗೆ ಇದೆ.

Leave a Comment