Big Boss Kannada 10 : ಬಿಗ್ ಬಾಸ್ (Big Boss Kannada 10) ಮನೆಯಲ್ಲಿ ಈ ಹಿಂದೆ ವಿನಯ್ (Vinay) ಅವರ ವಿಚಾರ ಸಾಕಷ್ಟು ಸುದ್ದಿಯಾಗಿತ್ತು, ವಿನಯ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಅವರು ಆಡಿದಂತಹ ಮಾತುಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಅಸಮಾಧಾನದ ಮಾತುಗಳು ಸಹಾ ಕೇಳಿ ಬಂದಿತ್ತು. ಪ್ರತಾಪ್ ನ ಬೈದ ವಿಚಾರ, ಕೆಟ್ಟ ಪದಗಳ ಬಳಕೆ, ಬಳೆಗಳ ವಿಚಾರ ಸಾಕಷ್ಟು ಸುದ್ದಿಯಾಗಿತ್ತು.
ಇದೆಲ್ಲಾ ಆದ್ಮೇಲೆ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರು ವಿನಯ್ ಗೆ ಖಡಕ್ ಆಗಿಯೇ ಕ್ಲಾಸ್ ತಗೊಂಡಿದ್ರು. ಅದಾದ ನಂತರ ವಿನಯ್ ಅವರ ಮಾತುಗಳು ಕಡಿಮೆಯಾಗಿತ್ತು. ಆದರೆ ಈಗ ಪ್ರೇಕ್ಷಕರು ಅವರ ಮಾತು ಮತ್ತೆ ಶುರುವಾಯ್ತಾ ಅಂತ ಪ್ರಶ್ನೆಯೊಂದನ್ನ ಮಾಡೋಕೆ ಶುರು ಮಾಡಿದ್ದು, ಪ್ರೇಕ್ಷಕರು ಹೀಗೆ ಹೇಳ್ತಿರೋದ್ಯಾಕೆ ಅಂತ ತಿಳಿಯೋಣ ಬನ್ನಿ.

ವೀಕೆಂಡ್ ಎಪಿಸೋಡ್ ನಲ್ಲಿ ಫೇಕ್ ಯಾರು ಅನ್ನೋ ವಿಚಾರದಲ್ಲಿ ಕಾರ್ತಿಕ್ (Karthik) ವಿನಯ್ ಗೆ ಫೇಕ್ ಅನ್ನೋ ಟ್ಯಾಗ್ ಅನ್ನ ನೀಡಿ ತನ್ನ ಕಾರಣವನ್ನು ಕೊಟ್ಟರು. ಆದರೆ ಈ ವಿಚಾರ ವಿನಯ್ ಅವರಿಗೆ ಸಿಟ್ಟನ್ನು ತರಿಸಿದ್ದು, ನಂತರ ಅವರು ಕಾರ್ತಿಕ್ ಬಗ್ಗೆ ಮಾತನಾಡಿ ತಮ್ಮ ಸಿಟ್ಟನ್ನು ಹೊರ ಹಾಕುವಾಗ, ಒಂದಷ್ಟು ಮಾತನ್ನಾಡಿದ್ದಾರೆ.
ಇನ್ಮೇಲಿದೆ ಕ್ಯಾಪ್ಟನ್ ಗೆ (ಕಾರ್ತಿಕ್) ಹಬ್ಬ, ಅವನಿಗೆ ಹೋಗಿ ಹೇಳಿಬಿಟ್ನಂತೆ ನಾನು. ಕಿತ್ತೋದ್ ನನ್ಮಗ! ಅವನಿಗೆ ಕೊಡೋಷ್ಟು ಮರ್ಯಾದೆ ಕೊಟ್ಟೆ. ಆ ಮರ್ಯಾದೆಗೆ ಯೋಗ್ಯನೇನೇ ಇಲ್ಲ ಅವನಿಗೆ. ಬರೀ ಕೀಟಲೆ, ಬರೀ ಇದೇ ತರಹ ಕಿತ್ತೋಗಿರೋ ಮಾತುಗಳನ್ನ ಆಡಿಕೊಂಡು.

ನಾನು ಹೋಗಿ ಇನ್ ಫ್ಲುಯೆನ್ಸ್ ಮಾಡಿದ್ನಂತೆ. ತುಕಾಲಿ ಸಂತು ಬಗ್ಗೆ ಹೇಳಿ, ಬೇರೆ ಏನೂ ಕೊಡೋಕೆ ಇಲ್ಲ ಅಂದ್ರೆ ಬೈದು ಬಿಡ್ತಾರಾ ಅಂತ ಹೇಳಿದ್ದಾರೆ. ಎರಡು ವಾರದಿಂದ ಸೈಲೆಂಟ್ ಆಗಿದ್ದ ವಿನಯ್ ಮತ್ತೆ ವೈಲೆಂಟ್ ಆದ್ರಾ? ಅವರ ಬಾಯಿಂದ ಮತ್ತೆ ಇಂತಹ ಮಾತುಗಳು ಶುರುವಾಯ್ತಾ? ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ ವೀಕ್ಷಕರು.