Avatar 2: ಒಂದು ಎರಡಲ್ಲ ಗುರೂ, ಬರೋಬ್ಬರಿ 160 ಭಾಷೆಗಳಲ್ಲಿ ಬರ್ತಿದೆ ಅವತಾರ್ 2 ಸಿನಿಮಾ

Written by Soma Shekar

Published on:

---Join Our Channel---

ಹಾಲಿವುಡ್ ಸಿನಿಮಾಗಳ ನಿರ್ದೇಶಕ ಜೇಮ್ಸ್ ಕ್ಯಾಮರೂನ್ 2009 ರಲ್ಲಿ ತೆರೆಗೆ ತಂದ ಬ್ಲಾಕ್ ಬಸ್ಟರ್ ಸ ಸಿನಿಮಾ “ಅವತಾರ್” ವಿಶ್ವದಾದ್ಯಂತ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಅವತಾರ್ ಪ್ರೇಕ್ಷಕರ ಮುಂದೆ ಹೊಸ ಲೋಕವೊಂದರ ಆವಿಷ್ಕಾರ ಮಾಡಿತ್ತು. 2009ರಲ್ಲಿ ಭರ್ಜರಿ ವಿಜಯವನ್ನು ಪಡೆದ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಕೂಡಾ ಅಂದು ದಾಖಲೆಗಳನ್ನು ಬರೆದಿತ್ತು. 25 ಬಿಲಿಯನ್ ಗಿಂತಲೂ ಅಧಿಕ ಹಣವನ್ನು ಸಿನಿಮಾ ಗಳಿಸಿಕೊಂಡಿತ್ತು. ಜಗತ್ತಿನ ಸಿನಿಮಾರಂಗದಲ್ಲಿ ಹೊಸದೊಂದು ಇತಿಹಾಸವನ್ನು ಬರೆದಿತ್ತು ಅವತಾರ್.

ಅವತಾರ್ ಸಿನಿಮಾ ಸೀಕ್ವೆಲ್ ಕೂಡಾ ಇರುತ್ತದೆ ಎನ್ನುವ ಮಾತನ್ನು ಈ ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹೇಳಿದ್ದರು. ನಿರ್ದೇಶಕರು ಹಾಗೆ ಸಿನಿಮಾ ಸೀಕ್ವೆಲ್ ಬಗ್ಗೆ ಹೇಳಿದ ನಂತರ ವಿಶ್ವದಾದ್ಯಂತ ಇರುವ ಸಿನಿಪ್ರೇಮಿಗಳು ಅವತಾರ್ 2 ಸಿನಿಮಾ ಯಾವಾಗ ತೆರೆಗೆ ಬರುವುದು, ಎಂದು ಬಹಳ ಆಸಕ್ತಿಯಿಂದ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಅವತಾರ್ 2 ಸಿನಿಮಾವನ್ನು 2020ರಲ್ಲೇ ಬಿಡುಗಡೆ ಮಾಡಲು ಚಿತ್ರತಂಡವು ಪ್ಲಾನ್ ಮಾಡಿತ್ತು.

ಆದರೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೊನಾ ಅಬ್ಬರ ಜೋರಾಗಿ ಇದ್ದುದ್ದರಿಂದ ಸಿನಿಮಾದ ಷೂಟಿಂಗ್, ಬ್ಯಾಕ್ ಗ್ರೌಂಡ್ ಕೆಲಸಗಳು ಹಾಗೂ ಇನ್ನಿತರೆ ಕೆಲಸಗಳು ತಡವಾಗಿದ್ದವು. ಈ ಕಾರಣದಿಂದ ಸಿನಿಮಾ ಬಿಡುಗಡೆಯ ದಿನಾಂಕಗಳನ್ನು ಮುಂದೂಡುತ್ತಾ ಬರಲಾಗಿತ್ತು. ಈ ಎಲ್ಲವುಗಳ ನಂತರ ನಿರ್ಮಾಪಕರು ಅವತಾರ್ 2 ಸಿನಿಮಾವನ್ನು 2022 ರಲ್ಲಿ ಬಿಡುಗಡೆ ಮಾಡುವ ಘೋಷಣೆಯನ್ನು ಮಾಡಿದರು.

ಇನ್ನು ಇದೀಗ ಅವತಾರ್ 2 ಸಿನಿಮಾದ ತಂಡದಿಂದ ಹೊಸ ಸುದ್ದಿಯೊಂದು ಹೊರ ಬಂದಿದೆ. ಹೊಸ ಅಪ್ಡೇಟ್ ನ ಪ್ರಕಾರ ಅವತಾರ್ 2 ಸಿನಿಮಾ ಬರುವ ಡಿಸೆಂಬರ್ ನ 16ನೇ ತಾರೀಕು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮತ್ತೊಂದು ಆಸಕ್ತಿಕರ ವಿಷಯವನ್ನೂ ಸಹಾ ಈ ವೇಳೆ ತಿಳಿಸಲಾಗಿದ್ದು, ಈ ಸಿನಿಮಾ ಏಕಕಾಲದಲ್ಲಿ ಬರೋಬ್ಬರಿ 160 ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Leave a Comment