ATM ನಲ್ಲಿ ಬಂತು ಐದು ಪಟ್ಟು ಹೆಚ್ಚು ಹಣ: ವಿಷಯ ತಿಳಿದು ATM ಮುಂದೆ ಮುಗಿಬಿದ್ದ ಜನ!!

Entertainment Featured-Articles News

ಸುಲಭವಾಗಿ ಹಣ ಸಿಗುತ್ತೆ ಅಂದ್ರೆ ಯಾರು ತಾನೇ ಬೇಡ ಅಂತಾರೆ. ಅದೂ ಒಂದು ರೂಪಾಯಿಗೆ ಐದು ರೂಪಾಯಿ ಸಿಗುತ್ತೆ ಅಂದ್ರೆ ಅಂತ ಅವಕಾಶ ಬಿಡೋಕೆ ಯಾರು ತಾನೇ ಸಿದ್ಧ ಇರ್ತಾರೆ. ದುಡ್ಡು ಸದ್ದು ಮಾಡೋ ಈ ಕಾಲದಲ್ಲಿ ಅದೇ ದುಡ್ಡು ಶ್ರಮ ಇಲ್ಲದೇ ಸಿಗುತ್ತೆ ಅಂದಾಗ ಅಲ್ಲಿ ಜನ ಜಂಗುಳಿ ಖಂಡಿತ ಆಗುತ್ತೆ. ಹೌದು ಒಂದು ವೇಳೆ ನೀವು ಹಣವನ್ನು ಡ್ರಾ ಮಾಡಲು ಎಟಿಎಂ ಗೆ ಹೋದಾಗ, ಅಲ್ಲಿ ನೀವು ನಮೂದಿಸಿದ ಹಣದ ಜಾಗದಲ್ಲಿ ಅದರ ಐದರಷ್ಟು ಹಣ ಬಂತು ಅಂದ್ರೆ ಖಂಡಿತ ಆ ಖುಷಿ ಹೇಗಿರುತ್ತೆ ಅಂತ ಹೇಳೋಕೆ ಖಂಡಿತ ಸಾಧ್ಯ ಇಲ್ಲ. ಅಲ್ದೇ ಸಿಕ್ಕಿದ್ದೇ ಚಾನ್ಸ್ ಅಂತ ಇನ್ನಷ್ಟು ಹಣವನ್ನು ಡ್ರಾ ಮಾಡಿಕೊಂಡ್ರು ಅಚ್ಚರಿ ಇಲ್ಲ ಬಿಡಿ.

ಇಂತದ್ದೇ ಒಂದು ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಈ ವಿಷಯ ಈಗ ದೊಡ್ಡ ಸುದ್ದಿಯಾಗಿದೆ. ಮಹಾರಾಷ್ಟ್ರದ ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡ ಎನ್ನುವ ಪಟ್ಟಣದಲ್ಲಿ ಇಂತಹುದೊಂದು ವಿಚಿತ್ರ ಸನ್ನಿವೇಶ ಎದುರಾಗಿದೆ. ಇಲ್ಲಿನ ಒಂದು ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಈ ಅಚ್ಚರಿಯ ಘಟನೆಯು ನಡೆದಿದೆ. ಗ್ರಾಹಕರೊಬ್ಬರು ಎಟಿಎಂ ನಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳಲು ಹೋಗಿದ್ದಾರೆ. ಅವರು ತಮ್ಮ ಖಾತೆಯಿಂದ 500 ರೂ ಡ್ರಾ ಮಾಡಿದ್ದಾರೆ.

ಆದರೆ ಹಣ ಬಂದಾಗ ಆಶ್ಚರ್ಯ ಕಾದಿತ್ತು. ಏಕೆಂದರ ಅವರಿಗೆ ಐನೂರರ ಒಂದು ನೋಟಿನ ಜಾಗದಲ್ಲಿ 500 ರೂ.ಮುಖಬೆಲೆಯ ಒಂದಲ್ಲಾ ಎರಡಲ್ಲಾ ಬರೋಬ್ಬರಿ 5 ನೋಟುಗಳು ಹೊರ ಬಂದಿದೆ. ಈ ರೀತಿ 500 ರೂ,ಗಳ ಬದಲು 2,500 ರೂ ಸಿಕ್ಕ ವಿಷಯ ಬಹಳ ಬೇಗ ಬಿರುಗಾಳಿಯಂತೆ ಸುತ್ತ ಮುತ್ತಲ ಪ್ರದೇಶಗಳಿಗೂ ಹರಡಿದ್ದು, ಕೆಲವೇ ನಿಮಿಷಗಳ ಸಮಯದಲ್ಲೇ ಜನರು ಎಟಿಎಂ ಎದುರು ಹಣ ಡ್ರಾ ಮಾಡಲು ಕ್ಯೂ ಮಾಡಿದ್ದರು ಎನ್ನಲಾಗಿದೆ.

ಗ್ರಾಹಕರೊಬ್ಬರು ಈ ವಿಚಾರವನ್ನು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿದ್ದು, ಅಲ್ಲಿಗೆ ಆಗಮಿಸಿದ ಪೋಲಿಸರು ಜನರನ್ನು ಖಾಲಿ ಮಾಡಿಸಿ, ಎಟಿಎಂ ಕೇಂದ್ರವನ್ನು ಮುಚ್ಚಿ ಬ್ಯಾಂಕ್ ಗೆ ವಿಷಯ ತಿಳಿಸಿದ್ದಾರೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಎಟಿಎಂ ನಲ್ಲಿ ಎದುರಾದ ತಾಂತ್ರಿಕ ಸಮಸ್ಯೆ ಎನ್ನಲಾಗಿದ್ದು, 100 ರೂ. ಇಡುವ ಜಾಗದಲ್ಲಿ 500 ರೂ. ಇರಿಸಲಾಗಿತ್ತು ಅದರಿಂದಲೇ ಇಂತಹುದೊಂದು ಸಮಸ್ಯೆ ಎದುರಾಗಿತ್ತು ಎಂದು ತಿಳಿದು ಬಂದಿದೆ..

Leave a Reply

Your email address will not be published.