Venu Swamy: ಅವರಿಬ್ಬರ ದಾಂಪತ್ಯ ಮುರಿದು ಬೀಳುತ್ತೆ; ಸ್ಟಾರ್ ಜೋಡಿಯ ಬಗ್ಗೆ ವೇಣುಸ್ವಾಮಿ ಸ್ಪೋಟಕ ಭವಿಷ್ಯ ವಾಣಿ

Written by Soma Shekar

Published on:

---Join Our Channel---

Venu Swamy : ಪ್ರಖ್ಯಾತ ಜ್ಯೋತಿಷಿ ವೇಣುಸ್ವಾಮಿ (Venu Swamy) ಸೆಲೆಬ್ರಿಟಿಗಳ ಜೀವನ ಹಾಗೂ ಅವರ ಭವಿಷ್ಯದ ಕುರಿತಾಗಿ ಸಂಚಲನ ಸೃಷ್ಟಿಸುವಂತಹ ಭವಿಷ್ಯವಾಣಿಗಳನ್ನು ನುಡಿಯುವ ಮೂಲಕವೇ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡುತ್ತಾರೆ. ಈ ಹಿಂದೆ ನಟಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಬ್ರೇಕಪ್ ವಿಚಾರವಾಗಿಯೂ ತಾನು ನುಡಿದಂತೆ ನಡೆದಿದೆ ಎನ್ನುವ ಮಾತುಗಳನ್ನು ಹೇಳಿ ಸಖತ್ ಸುದ್ದಿಯಾಗಿದ್ದರು.

ಈಗ ವೇಣು ಸ್ವಾಮಿ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿರುವ ನೂತನ ಜೋಡಿ ತೆಲುಗು ಸ್ಟಾರ್ ನಟ ವರುಣ್ ತೇಜ್ (Varun Tej) ಮತ್ತು ನಟಿ ಲಾವಣ್ಯ ತ್ರಿಪಾಠಿ (Lavanya Tripathi) ಅವರ ದಾಂಪತ್ಯದ ಕುರಿತಾಗಿ ಸ್ಪೋ ಟ ಕ ಭವಿಷ್ಯವಾಣಿಯನ್ನು ನುಡಿದಿದ್ದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ವೇಣು ಸ್ವಾಮಿ ಅವರು ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಜಾತಕಗಳಲ್ಲಿ ಸಾಕಷ್ಟು ದೋಷಗಳಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Big Boss: ರಕ್ಕಸರ ಆರ್ಭಟಕ್ಕೆ ಬಾಲ ಮುದುರಿದ ಸಂಗೀತಾ ಟೀಂ; ಸೋತು ಸುಣ್ಣವಾಗಿ ಕಣ್ಣೀರಿಟ್ಟ ಸಂಗೀತಾ

ಈ ಜೋಡಿ ಭವಿಷ್ಯತ್ತಿನಲ್ಲಿ ಜೊತೆಯಾಗಿರುವುದು ನಡೆದರೆ ಅದೊಂದು ಪವಾಡವೇ ಆಗಿರುತ್ತದೆ ಅಥವಾ ಅದೊಂದು ಚಿದಂಬರ ರಹಸ್ಯವಾಗಿರುತ್ತದೆ ಎಂದು ಹೇಳಿದ್ದಾರೆ, ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಜಾತಕದಲ್ಲಿ ಗುರು ಮತ್ತು ಶುಕ್ರನು ನೀಚ ಸ್ಥಾನದಲ್ಲಿದ್ದು, ಅವರು ಭವಿಷ್ಯದಲ್ಲಿ ಜೊತೆಯಾಗಿರುವುದಕ್ಕೆ ಅವಕಾಶಗಳಿಲ್ಲ.

ಲಾವಣ್ಯ ತ್ರಿಪಾಠಿಗೆ ಕುಜ ದೋಷವಿದೆ. ವರುಣ್ ತೇಜ್ ಗೆ ನಾಗ ದೋಷವಿದೆ. ಇವರಿಬ್ಬರ ಕುಟುಂಬಗಳಲ್ಲಿ ಒಬ್ಬ ಮುಖ್ಯವಾದ ಸ್ತ್ರೀ ಕಾರಣವಾಗಿ ಇವರು ಬೇರೆಯಾಗುವ ಅವಕಾಶವಿದೆ. ಈ ಹಿಂದೆ ನಾಗಚೈತನ್ಯ ಮತ್ತು ಸಮಂತ ದೂರಾಗುತ್ತಾರೆ ಎಂದು ವೇಣು ಸ್ವಾಮಿ ನುಡಿದಿದ್ದ ಭವಿಷ್ಯ ಸತ್ಯವಾಗಿತ್ತು. ಆದ್ದರಿಂದಲೇ ಈಗ ವರುಣ್ ತೇಜ್ ಮತ್ತು ಲಾವಣ್ಯ ವಿಷಯದಲ್ಲೂ ಇವರ ಮಾತು ನಿಜವಾಗುತ್ತಾ ಅನ್ನೋದು ಅನೇಕರ ಪ್ರಶ್ನೆಯಾಗಿದೆ.

Leave a Comment