Venu Swamy ಶ್ರೀಲೀಲಾ ಬದುಕು ಆ ಸ್ಟಾರ್ ನಟಿ ಬದುಕಿನಂತೆ ಆಗುತ್ತೆ: ಶಾಕಿಂಗ್ ಭವಿಷ್ಯ ನುಡಿದ ವೇಣು ಸ್ವಾಮಿ

0 1,108

Venu Swamy : ಪೆಳ್ಳಿ ಸಂದಡಿ (Pelli Sandadi) ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ ಕನ್ನಡದ ಕಿಸ್ ಸಿನಿಮಾದ ಬೆಡಗಿ ಶ್ರೀ ಲೀಲಾ (Sreeleela) ಸದ್ಯಕ್ಕೆ ತೆಲುಗಿನಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದು, ನಟಿಯ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ತೆಲುಗು ಚಿತ್ರರಂಗಕ್ಕೆ ಅಡಿ ಇಟ್ಟ ಸ್ವಲ್ಪ ಸಮಯದಲ್ಲೇ ಸ್ಟಾರ್ ನಟಿಯಾಗಿ ಶ್ರೀಲೀಲಾ ಮಿಂಚಲು ಸಜ್ಜಾಗಿದ್ದಾರೆ.

ಈಗ ನಟಿ ಶ್ರೀ ಲೀಲಾ (Sreeleela) ಕುರಿತಾಗಿ ಟಾಲಿವುಡ್ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಹೆಸರನ್ನು ಪಡೆದುಕೊಂಡಿರುವ ವೇಣು ಸ್ವಾಮಿ (Venu Swami) ಭವಿಷ್ಯವಾಣಿ ನುಡಿದಿದ್ದಾರೆ. ವೇಣು ಸ್ವಾಮಿ ಈಗಾಗಲೇ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ, ರಶ್ಮಿಕಾ ಅವರ ಜೀವನದ ಕುರಿತಾದ ವಿಷಯಗಳ ಬಗ್ಗೆ ಹಾಗೂ ತೆಲುಗಿನ ಸ್ಟಾರ್ ನಟರ ಬಗ್ಗೆ ಭವಿಷ್ಯ ನುಡಿಯುವ ಮೂಲಕ ಸಾಕಷ್ಟು ಸದ್ದನ್ನು ಮಾಡಿರುವ ಜ್ಯೋತಿಷಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ಅವರು ನಟಿ ಶ್ರೀ ಲೀಲಾ ಬಗ್ಗೆ ನುಡಿದಿರುವ ಭವಿಷ್ಯದ ವಿಚಾರವು ದೊಡ್ಡ ಸುದ್ದಿಯಾಗಿದೆ. ಶ್ರೀಲೀಲಾ ಜಾತಕದ ಬಗ್ಗೆ ಆಸಕ್ತಿಕರವಾದ ಹೇಳಿಕೆಗಳನ್ನು ನೀಡಿರುವ ಅವರು, ಬಹಳ ಕಡಿಮೆ ಜನರಿಗೆ ಮಾತ್ರವೇ ಶ್ರೀಲೀಲಾ ರೀತಿಯ ಜಾತಕ ಇರುತ್ತದೆ. 2028ನೇ ವರ್ಷದಲ್ಲಿ ಶ್ರೀಲೀಲಾ ದಕ್ಷಿಣ ಸಿನಿಮಾರಂಗದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಾರೆ.

ಶ್ರೀಲೀಲಾ ಗೆ ರಾಜಯೋಗ ಇದೆ. ನಯನತಾರಾ (Nayanthara) ಜಾತಕ ಮತ್ತು ಶ್ರೀಲೀಲಾ ಜಾತಕಗಳಲ್ಲಿ ಬಹಳಷ್ಟು ಸಾಮ್ಯತೆಗಳಿದೆ. ಶ್ರೀಲೀಲಾ ಕೂಡಾ ಲೇಡಿ ಸೂಪರ್ ಸ್ಟಾರ್ ಆಗುತ್ತಾರೆ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಶ್ರೀ ಲೀಲಾ ಜಾತಕದ ಬಗ್ಗೆ ಅವರು ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave A Reply

Your email address will not be published.