Amruthadhaare: ಆಗರ್ಭ ಶ್ರೀಮಂತ ಗೌತಮ್ ದಿವಾನ್ ಮನೇಲಿ ಒಂದು ಯುಪಿಎಸ್ ಗೂ ಕಾಸಿಲ್ವಾ? ನೆಟ್ಟಿಗರ ಪ್ರಶ್ನೆ

Written by Soma Shekar

Published on:

---Join Our Channel---

Amruthadhaare: ಕನ್ನಡದ ಜನಪ್ರಿಯ ಸೀರಿಯಲ್ ಅಮೃತಧಾರೆ (Amruthadhaare) ಪ್ರೇಕ್ಷಕರ ವಿಶೇಷ ಮೆಚ್ಚುಗೆಯನ್ನು ಪಡೆದುಕೊಂಡಿರುವ ಸೀರಿಯಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.‌ ಇದರಲ್ಲಿ ನಾಯಕ ಗೌತಮ್ ದೀವಾನ್ ಗೆ (Gowtham Deewan) ಕತ್ತಲು ಅಂದ್ರೆ ಭಯ. ಅದರಲ್ಲೂ ಈಗ ಹೆಂಡತಿ ಭೂಮಿಕಾ (Bhumika) ಆಶಾಡ ಮಾಸ ಅಂತ ತವರು ಮನೆಗೆ ಹೋಗಿದ್ದಾಳೆ. ಈ ವೇಳೆ ಒಂಟಿಯಾಗಿರೋ ಗೌತಮ್ ಗೆ ಕತ್ತಲಿನ ಭಯ ಕಾಡ್ತಾ ಇದೆ.

ಆದರೆ ಈಗ ಈ ಕರೆಂಟ್ ಸಮಸ್ಯೆ ಕುರಿತಾಗಿಯೇ ನೆಟ್ಟಿಗರು ಮತ್ತು ಪ್ರಶ್ನೆಗಳನ್ನ ಮಾಡೋಕೆ ಶುರುವಿಟ್ಟುಕೊಂಡಿದ್ದಾರೆ. ಕಥೆಯಲ್ಲಿ ಗೌತಮ್ ದೀವಾನ್ ಅವರದ್ದು ಆಗರ್ಭ ಶ್ರೀಮಂತ ಮನೆತನ. ರಾಯಲ್ ಫ್ಯಾಮಿಲಿ ಸ್ಟೇಟಸ್ ಅನ್ನೋದ್ರಲ್ಲಿ ಅನುಮಾನ ಇಲ್ಲ. ಕೋಟೆಗಳು ಅನ್ನೋದಂತೂ ಇವರಿಗೆ ಲೆಕ್ಕಕ್ಕೇ ಇಲ್ಲ.

ಅಂತಹ ಆಗರ್ಭ ಶ್ರೀಮಂತನ ಮನೆಯಲ್ಲಿ ಈಗಾಗಲೇ ಪವರ್ ಕಟ್ ಸೀನ್ ಗಳು ಎರಡು ಸಲ ಬಂದಿದೆ. ಕತ್ತಲು ಕಂಡ್ರೆ ಭಯ ಪಡೋ ಗೌತಮ್ ದೀವಾನ್ ಕರೆಂಟ್ ಹೋದಾಗ ಹೆಂಡತಿ ಭೂಮಿಕಾ ಕೈ ಹಿಡ್ಕೊಂಡು ಸಮಾಧಾನ ಆಗಿದ್ದ. ಅಲ್ಲದೇ ಭೂಮಿಕಾ ಕೂಡಾ ಗೌತಮ್ ಗೆ ಧೈರ್ಯವನ್ನು ತುಂಬುವ ಕೆಲಸವನ್ನು ಸಹಾ ಮಾಡಿದ್ದಳು.

ಆದರೆ ಈಗ ಮನೆಯಲ್ಲಿ ಭೂಮಿಕಾ ಇಲ್ಲ. ಆಷಾಡ ಅಂತ ಭೂಮಿಕಾ ತವರು ಮನೆಯಲ್ಲಿ ತವರು ಮನೆಯಲ್ಲಿ ಇದ್ದಾಳೆ.‌ ಏಕಾಂಗಿಯಾಗಿ ರೂಮ್ ನಲ್ಲಿ ಗೌತಮ್ ಇರೋವಾಗ ಕರೆಂಟ್ ಹೋಗಿದೆ. ಕರೆಂಟ್ ಹೋದ ಕೂಡಲೇ ಗೌತಮ್ ಬೆಚ್ಚಿ ಬಿದ್ದಿದ್ದಾನೆ. ಇದನ್ನು ನೋಡಿದ ಪ್ರೇಕ್ಷಕರಿಗೆ ಅಚ್ಚರಿಯ ಜೊತೆಗೆ ಹೊಸ ಅನುಮಾನ ಮೂಡಿದೆ.

ಇವತ್ತಿನ ದಿನಗಳಲ್ಲಿ ಹಳ್ಳಿಗಳ ಕಡೆ ಕೂಡಾ ಕರೆಂಟ್ ತಾಪತ್ರಯ ಇದ್ದಿದ್ದೇ ಅಂತ ಅದರಿಂದ ಪರಿಹಾರಕ್ಕಾಗಿ ಯುಪಿಎಸ್ ಗಳನ್ನು ಬಳಸೋದು ಎಲ್ಲರಿಗೂ ಗೊತ್ತಿದೆ. ಆದರೆ ಆಗರ್ಭ ಶ್ರೀಮಂತ ಆಗಿರೋ ಗೌತಮ್ ದೀವಾನ್ ಮನೆಯಲ್ಲಿ ಒಂದು ಯುಪಿಎಸ್ ಕೂಡಾ ಇಲ್ವಾ? ಅಥವಾ ಯುಎಪಿಎಸ್ ಕೆಟ್ಟಿದ್ರೆ ಅದನ್ನ ರಿಪೇರಿ ಕೂಡಾ ಮಾಡಿಸೋಕೆ ದಿವಾನ್ ಫ್ಯಾಮಿಲಿಗೆ ಆಗಲ್ವಾ ಅಂತ ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ.

Leave a Comment