Amrutha Prem : ಸ್ಯಾಂಡಲ್ವುಡ್ ನ ಸ್ಟಾರ್ ನಟ ನೆನಪಿರಲಿ ಪ್ರೇಮ್ (Prem) ಅವರು ಕನ್ನಡ ಸಿನಿಮಾ ರಂಗದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರುವ ಯಶಸ್ವಿ ನಟನಾಗಿದ್ದಾರೆ. ಈಗ ಸ್ಯಾಂಡಲ್ವುಡ್ ಗೆ ಪ್ರೇಮ್ ಅವರ ಪುತ್ರಿ ಅಮೃತಾ (Amrutha Prem) ಅವರು ಸಹಾ ಎಂಟ್ರಿ ನೀಡಿದ್ದಾರೆ.

ಅಮೃತಾ ಅವರು ಕನ್ನಡ ಸಿನಿಮಾ ರಂಗಕ್ಕೆ ಟಗರು ಪಲ್ಯ ಸಿನಿಮಾದ ಮೂಲಕ ಎಂಟ್ರಿಯನ್ನು ನೀಡಿದ್ದು, ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ.

ಅಮೃತಾ ಪ್ರೇಮ್ ಅವರು ಮೊದಲ ಸಿನಿಮಾ ಮೂಲಕವೇ ತಾನೊಬ್ಬ ಭರವಸೆಯ ನಟಿಯಾಗಬಲ್ಲೆ ಎಂದು ಸಾಬೀತು ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅಮೃತಾ ಅವರು ಆಗಾಗ ತಮ್ಮ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚಿಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ತಾವು ಸೀರೆಯನ್ನುಟ್ಟು ಅಂದವಾಗಿ ಕ್ಯಾಮೆರಾ ಕಣ್ಣುಗಳಿಗೆ ಪೋಸ್ ನೀಡಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಅಮೃತಾ ಅವರು ಶೇರ್ ಮಾಡಿಕೊಂಡ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ. ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆಗಳನ್ನು ನೀಡಿದ್ದಾರೆ.

ಅಮೃತಾ ಅವರ ಟಗರು ಪಲ್ಯ ಯಶಸ್ಸನ್ನು ಕಂಡಿದೆ. ಅವರ ಮುಂದಿನ ಸಿನಿಮಾ ಯಾವುದು ಎನ್ನುವುದು ಈಗ ಎಲ್ಲರ ನಿರೀಕ್ಷೆಯಾಗಿದೆ.