ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟ ಮಾಡುವ ನಟಿನಿಗೆ ಈ ಶೋಕಿ ಬೇಕಾ? ಅಕ್ಷಯ ಕುಮಾರ್ ಬ್ಯಾಗ್ ಬೆಲೆ ಕೇಳಿ ಸಿಟ್ಟಾದ ನೆಟ್ಟಿಗರು

Written by Soma Shekar

Published on:

---Join Our Channel---

Akshay Kumar : ಸಿನಿಮಾ ಸೆಲೆಬ್ರಿಟಿಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ (Bollywood) ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಯಾವ ವಿಷಯಕ್ಕೆ, ಯಾವಾಗ ಟ್ರೋಲ್ ಆಗುತ್ತಾರೆ ಎನ್ನುವುದನ್ನು ಊಹೆ ಮಾಡುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಈ ಸೆಲೆಬ್ರಿಟಿಗಳು ತಾವು ಆಡುವ ಮಾತಿನಿಂದ ಹಿಡಿದು, ಧರಿಸುವ ಡ್ರೆಸ್ ವರೆಗೂ ಸಹಾ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನುವುದು ಮಾತ್ರ ಸತ್ಯ. ಇನ್ನು ಕಳೆದ ಕೆಲವು ದಿನಗಳಿಂದಲೂ ನಟ ಅಕ್ಷಯ್ ಕುಮಾರ್ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ ಆಗುತ್ತಲೇ ಇದ್ದಾರೆ.

ಈಗ ಮತ್ತೊಮ್ಮೆ ನಟ ಅಕ್ಷಯ್ ಕುಮಾರ್ (Akshay Kumar Trolled) ಅವರು ಭರ್ಜರಿಯಾಗಿ ಟ್ರೋಲ್ ಅಗುತ್ತಿದ್ದಾರೆ. ಇತ್ತೀಚಿಗೆ ನಟ ಅಕ್ಷಯ್ ಕುಮಾರ್ ಅವರು ಒಂದು ದುಬಾರಿ ಬೆಲೆಯ ವಿಶೇಷವಾದ ಬ್ಯಾಗ್ ಅನ್ನು ಧರಿಸಿದ್ದರು. ಈ ವಿಶೇಷವಾದ ಬ್ಯಾಗ್ ಗೆ ಐರನ್ ಮ್ಯಾನ್ ಮುಖವಿದ್ದು, ಅದರಲ್ಲಿ ಎಲ್ ಇ ಡಿ ಲೈಟ್ ಅನ್ನು ಸಹಾ ಅಳವಡಿಸಲಾಗಿದೆ. ನಟ ವಿಮಾನ ನಿಲ್ದಾಣಕ್ಕೆ ಈ ಬ್ಯಾಗ್ ಧರಿಸಿ ಬಂದಿದ್ದು, ಎಲ್ಲರ ಗಮನವನ್ನು ಸೆಳೆದಿದ್ದರು.

ಬ್ಯಾಗ್ ನೋಡಿದ ಮೇಲೆ ಅನೇಕರು ಇದರ ಬೆಲೆಯನ್ನು ತಿಳಿಯುವುದಕ್ಕಾಗಿ, ಗೂಗಲ್ ನಲ್ಲಿ ಅದರ ಮಾಹಿತಿಯನ್ನು ಸರ್ಚ್ ಮಾಡಿದ್ದರೆ. ಅಲ್ಲಿ ಬ್ಯಾಗ್ ನ ಬೆಲೆ ನೋಡಿ ಅನೇಕರು ಶಾ ಕ್ ಆಗಿದ್ದಾರೆ. ಏಕೆಂದರೆ ಅಕ್ಷಯ್ ಕುಮಾರ್ ತಮ್ಮ ಜೊತೆ ತಂದಿದ್ದ ಆ ಬ್ಯಾಗ್ ನ ಬೆಲೆ ಬರೋಬ್ಬರಿ 30 ಸಾವಿರ ರೂಪಾಯಿಗಳಾಗಿದೆ. ಬ್ಯಾಗ್ ನ ಬೆಲೆ ಹೊರ ಬಂದ ಮೇಲೆ ನಟನನ್ನು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದನ್ನೂ ಓದಿ : ಬಾಲಿವುಡ್ ಸಿನಿಮಾಗಳ ಸೋಲಿಗೆ ಇದೇ ಕಾರಣ: ಹೊಸ ಬಾಂಬ್ ಸಿಡಿಸಿದ ಬಾಲಿವುಡ್ ನ ಸ್ಟಾರ್ ನಟ

ನೆಟ್ಟಿಗರು ಇದು ದುಂದು ವೆಚ್ಚ, ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟ ಉಂಟು ಮಾಡುವ ನಟ ಅಕ್ಷಯ್ ಕುಮಾರ್ ಗೆ ಇಂತಹ ಶೋಕಿ ಏಕೆ? ಎಂದು ಟೀಕೆ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಹೆಚ್ಚು ತೆರಿಗೆ ಪಾವತಿಸುವ ನಟ ಅಕ್ಷಯ್ ಕುಮಾರ್ ಅವರು ನಡೆಸೋದು ಐಶಾರಾಮೀ ಜೀವನ, ಅಂತದ್ರಲ್ಲಿ ಇಂತಹ ದುಂದು ವೆಚ್ಚ ಮಾಡೋದ್ರಲ್ಲಿ ವಿಶೇಷ ಏನಿಲ್ಲ ಬಿಡಿ ಎಂದಿದ್ದಾರೆ.

ಇದೇ ವೇಳೆ ನಟನ ಕಟ್ಟಾ ಅಭಿಮಾನಿಗಳು ಮಾತ್ರ ನಟನ ಪರವಾಗಿ ಬ್ಯಾಟಿಂಗ್ ಮಾಡಲು ಇಳಿದಿದ್ದು, ಟ್ರೋಲ್ ಮಾಡುವವರಿಗೆ ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡುವ ಮೂಲಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಮತ್ತು ನಟನ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ 2022 ರಲ್ಲಿ ನಟನ ಸಿ‌ನಿಮಾಗಳು ಸಾಲು ಸಾಲಾಗಿ ಸೋಲಿನ ಹಾದಿಯನ್ನು ಹಿಡಿದಿವೆ.

ಪ್ರಸ್ತುತ ಅವರ ಅನನ್ಯ ಪಾಂಡೆ (Ananya Pandey) ಜೊತೆಗೆ ಶಂಕರ (Shankar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಆದರೆ ಇದೇ ವೇಳೆ ಸಿ‌ನಿಮಾದ ಯಾವುದೇ ಮಾಹಿತಿಯು ಹೊರಗೆ ಬಾರದಂತೆ ಚಿತ್ರತಂಡ ಸಾಕಷ್ಟು ಎಚ್ಚರ ವಹಿಸಿದೆ. ಪ್ರಸ್ತುತ ನಟನ ಕೈಯ್ಯಲ್ಲಿ ಆರು ಸಿನಿಮಾಗಳು ಕೈಯ್ಯಲ್ಲಿದ್ದು, 2023 ರಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳಿವೆ.

Leave a Comment