ಅಕ್ಕಿಯಲ್ಲಿ ಹುಳುಗಳು ಆಗದಂತೆ , ಕೆಡದಂತೆ ವರ್ಷಾನುಗಟ್ಟಲೆ ಇಡಲು 4 ಟಿಪ್ಸ್!

Featured-Articles
57 Views

ಅಕ್ಕಿಯಲ್ಲಿ ಹುಳ ಬೀಳದ ಹಾಗೆ ಮಾಡಲು ಹಾಗೂ ಅಕ್ಕಿಯಲ್ಲಿ ಬಿದ್ದ ಹುಳವನ್ನು ಹೋಗಲಾಡಿಸಲು
ಹಾಗೂ ತುಂಬಾ ದಿನಗಳವರೆಗೆ ಅಕ್ಕಿಯನ್ನು ಇಟ್ಟರೆ ಬೂಸ್ಟ್ ಹಿಡಿಯದಿರಲು ಕೆಲವು ಟಿಪ್ಸ್ಗಳನ್ನು ಇಲ್ಲಿ ತಿಳಿಸಲಾಗಿದೆ ..

ಅಂಗಡಿಯಿಂದ ಅಕ್ಕಿಯ ಚೀಲವನ್ನು ಮನೆಗೆ ತರುತ್ತೇವೆ ಹೀಗೆ ತಂದ ಅಕ್ಕಿ ಚೀಲವನ್ನು
ಒಂದು ಬಾಕ್ಸ್ ಒಳಗೆ ಬಳಸುವಷ್ಟು ಹಾಕಿ ನಂತರ ಉಳಿದ ಅಕ್ಕಿಯನ್ನು ಹಾಗೆ ಚೀಲದಲ್ಲಿ ಕಟ್ಟಿ ಇಡುತ್ತೇವೆ.
ಇಂತಹ ಸಮಯದಲ್ಲಿ ಕೆಲವು ಬಾರಿ ಅಕ್ಕಿಯಲ್ಲಿ ಹುಳ ಬೀಳುತ್ತವೆ , ಜಾಡು ಕಟ್ಟಿರುತ್ತದೆ ಹೀಗೆ ಹಾಗದಿರಲು ಕೆಲವು ಟಿಪ್ಸ್ ಗಳನ್ನು ಇಲ್ಲಿ ತಿಳಿಸಲಾಗಿದೆ.

1 )ಬಾಕ್ಸ್ ಒಳಗೆ ಅಕ್ಕಿಯಲ್ಲಿ ಹುಳ ಬೀಳದಿರಲು ಅಕ್ಕಿಯ ಪ್ರಮಾಣ ಎಷ್ಟಿದೆಯೋ ಅಷ್ಟು ಒಣ ಮೆಣಸಿನಕಾಯಿಯನ್ನು ಬಾಕ್ಸ್ ಒಳಗೆ ಹಾಕಿ ಮುಚ್ಚಿಡಿ ಇದರಿಂದ ಅಕ್ಕಿಯಲ್ಲಿ ಹುಳ ಬೀಳುವುದಿಲ್ಲ.
ಉದಾಹರಣೆಗೆ 10 ಕೆಜಿ ಹಿಡಿಯುವ ಬಾಕ್ಸ್ನೊಳಗೆ 8 ರಿಂದ 10 ಒಣಮೆಣಸಿನಕಾಯಿಯನ್ನು ಹಾಕಿ ಮುಚ್ಚಿಡಿ.

2 )ಹಸಿ ಅಥವಾ ಒಣಗಿದ ಕಹಿ ಬೇವಿನ ಎಲೆಯನ್ನು ತಂದು ಬಾಕ್ಸ್ ನಲ್ಲಿರುವ ಅಕ್ಕಿ ಯೊಳಗಡೆ ಮುಳುಗಿಸಿ ಇಟ್ಟರೂ ಸಹ ಅಕ್ಕಿಯಲ್ಲಿ ಹುಳ ಬೀಳುವುದಿಲ್ಲ.

3 )ಅಕ್ಕಿಯ ಬಾಕ್ಸ್ ಒಳಗೆ ಒಂದು ಬೆಳ್ಳುಳ್ಳಿಯನ್ನು ಇಟ್ಟು ಹೂತಿಟ್ಟರು ಅಕ್ಕಿಯಲ್ಲಿ ಹುಳ ಬೀಳುವುದಿಲ್ಲ.

4 )ಇನ್ನೊಂದು ಪರಿಣಾಮಕಾರಿ ಟಿಪ್ ಎಂದರೆ ಯಾರು ಅಗತ್ಯಕ್ಕಿಂತ ಹೆಚ್ಚು ಅಕ್ಕಿ ಇರುತ್ತದೆಯೋ ಅಂತವರು ಈ ಟಿಪ್ ಅನ್ನು ಬಳಸುವುದು ಉತ್ತಮ.

ಬೇಕಾಗುವ ಸಾಮಾಗ್ರಿಗಳು :10 ರಿಂದ 15 ಕಾಳುಮೆಣಸು , 7 ರಿಂದ 8 ಲವಂಗ ,5 ರಿಂದ 6 ಬೆಳ್ಳುಳ್ಳಿ ಎಸುಳು ಮತ್ತುಒಂದು ಮುಷ್ಟಿ ಆಗುವಷ್ಟು ಕಹಿ ಬೇವಿನ ಎಲೆ .

ಮಾಡುವ ವಿಧಾನ :ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಒಂದು ಕುಟಾಣಿಗೆಹಾಕಿ ಸ್ವಲ್ಪ ಪ್ರಮಾಣದ ನೀರು ಬೆರೆಸಿ ಚೆನ್ನಾಗಿ ಜಜ್ಜಿ ಕೊಳ್ಳಬೇಕು.ಇದನ್ನು ಸಂಡಿಗೆ ರೀತಿ ಚಿಕ್ಕ ಚಿಕ್ಕದಾಗಿ ಮಾಡಿಕೊಂಡು ಒಂದು ಪ್ಲೇಟ್ ನಲ್ಲಿ ಇಟ್ಟು ಬಿಸಿಲಿನಲ್ಲಿ ಒಣಗಿಸಬೇಕು ಅಥವಾ ಒಂದೆರಡು ದಿನ ಹಾಗೆ ಬಿಟ್ಟರೆ ಒಣಗುತ್ತದೆ.ಈ ಮಿಶ್ರಣ ಒಣಗಿದ ನಂತರ ಈಗಾಗಲೇ ಅಕ್ಕಿಯಲ್ಲಿ ಹುಳ ಬಿದ್ದಿದ್ದರೆ ಒಣಗಿಸಿ ತಯಾರಿಸಿದ ಒಂದು ಪೀಸನ್ನು ಅದರೊಳಗೆ ಇಟ್ಟು ಸ್ವಲ್ಪ ಗಾಳಿ ಹೋಗುವ ರೀತಿ ಮುಚ್ಚಿಡಿ ,ಇದರಿಂದ ಹುಳಗಳು ಆಚೆ ಬರುತ್ತವೆ.ಇನ್ನು ಅಕ್ಕಿಯ ಚೆನ್ನಾಗಿದ್ದರೆ ಕಹಿ ಬೇವಿನ ಉಂಡೆಯನ್ನು ಹಾಕಿ ಮುಚ್ಚಿಡಿ.

ಧನ್ಯವಾದಗಳು.

Leave a Reply

Your email address will not be published. Required fields are marked *