Bollywood: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ? ಸಂಚಲನ ಸುದ್ದಿಗೆ ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Bollywood: ಬಾಲಿವುಡ್ ನ (Bollywood) ಸ್ಟಾರ್ ದಂಪತಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನದ ವಿಚಾರ ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ ಮತ್ತು ಚರ್ಚೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಐಶ್ವರ್ಯ ರೈ ಅವರು ಪತಿ ಅಭಿಷೇಕ್ ಬಚ್ಚನ್ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಅಲ್ಲದೇ ಅಮಿತಾಬ್ ಬಚ್ಚನ್ ಅವರ ಜನ್ಮ ದಿನದಂದು ಐಶ್ವರ್ಯ ರೈ ತಮ್ಮ ಮಕ್ಕಳನ್ನು ಕರೆದುಕೊಂಡು ವಿದೇಶಕ್ಕೆ ಹಾರಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಅಭಿಷೇಕ್ ಬಚ್ಚನ್ (Abhishek Bachchan) ತಮ್ಮ ವೆಡ್ಡಿಂಗ್ ರಿಂಗ್ ಧರಿಸದೇ ಕಾಣಿಸಿಕೊಂಡಿದ್ದರು. ಈ ವಿಚಾರ ಗಮನಕ್ಕೆ ಬಂದ ನಂತರವೇ ಐಶ್ವರ್ಯ ಮತ್ತು ಅಭಿಷೇಕ್ ವಿಚ್ಛೇದನದ ವದಂತಿ ಹಬ್ಬಲು ಪ್ರಾರಂಭವಾಗಿದೆ ಅಂತ ಹೇಳಲಾಗುತ್ತಿದೆ. ಅಭಿಷೇಕ್ ಮತ್ತು ಐಶ್ವರ್ಯ ರೈ ನಡುವೆ ಮನಸ್ತಾಪ ಉಂಟಾಗಿದ್ದು ಅದು ವಿಚ್ಛೇದನದ ವರೆಗೂ ತಲುಪಿದೆ ಎನ್ನುವುದು ಸುದ್ದಿಗಳಾಗಿದೆ.‌ ಇದನ್ನೂ ಓದಿ: Big Boss: ರಾಕ್ಷಸರಾದ ಸಂಗೀತಾ, ಕಾರ್ತಿಕ್, ಮುಂದಿದೆ ಮಾರಿ ಹಬ್ಬ ಅಂತ ಸೂಚನೆ ಕೊಟ್ಟ ವಿನಯ್

ಸಿನಿಮಾ ವಿಶ್ಲೇಷಕ ಉಮೈರ್ ಸಂದು ಅಭಿಷೇಕ್ ಮತ್ತು ಐಶ್ವರ್ಯ ಜೋಡಿಯ ವಿಚ್ಛೇದನದ ವಿಷಯವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲಿ ಅವರು ನಮ್ಮ ಟ್ವೀಟ್ ನಲ್ಲಿ ಈ ಜೋಡಿ ಅಧಿಕೃತವಾಗಿ ವಿಚ್ಛೇದನವನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ. ಉಮೈರ್ ಸಂದು ಆಗಾಗ ಇಂತಹ ಟ್ವೀಟ್ ಗಳನ್ನು ಮಾಡುತ್ತಲೇ ಇರುತ್ತಾರೆ ಆದರೆ ಬಹಳಷ್ಟು ಸಂದರ್ಭದಲ್ಲಿ ಅವು ಸುಳ್ಳಾಗಿರುತ್ತದೆ.

ಐಶ್ವರ್ಯ ರೈ (Aishwarya Rai) ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ವಿಚಾರವಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಜೋಡಿ 2007ರಲ್ಲಿ ಮದುವೆಯಾಗಿದ್ದರು, 2011ರಲ್ಲಿ ಐಶ್ವರ್ಯ ರೈ ಆರಾಧ್ಯಾಗ ಜನ್ಮ ನೀಡುವ ಮೂಲಕ ತಾಯಿಯಾದರು. ಈಗ ಹರಿದಾಡುತ್ತಿರುವ ಸುದ್ದಿಯನ್ನು ಕೇಳಿ ಅವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.

Leave a Comment