ಹನುಮನ ಮೇಲಿನ ಭಕ್ತಿಯಿಂದ ಮಹತ್ವದ ನಿರ್ಧಾರ ಮಾಡಿದ ಆದಿಪುರುಷ್ ಚಿತ್ರತಂಡ
Adipurush: ನಟ ಪ್ರಭಾಸ್ ನಾಯಕನಾಗಿ, ಬಾಲಿವುಡ್ ಬೆಡಗಿ ಕೃತಿ ಸೆನೊನ್ (Kriti Sanon) ನಾಯಕಿಯಾಗಿರುವ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಬಿಡುಗಡೆಗೆ ಸಜ್ಜಾಗಿದೆ. ರಾಮನಾಗಿ ಪ್ರಭಾಸ್ ನಟಿಸಿದ್ದು ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾದಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯಗಳು ಸಹಾ ಬಹಳ ಜೋರಾಗಿ ನಡೆಯುತ್ತಿದೆ.
ಬಾಹುಬಲಿ (Bahubali) ನಂತರ ಬಿಡುಗಡೆ ಆದ ಎರಡು ಸಿನಿಮಾಗಳಿಂದಲೂ ನಟ ಪ್ರಭಾಸ್ ಗೆ (Prabhas) ನಿರೀಕ್ಷಿತ ಗೆಲುವು ಸಿಕ್ಕಿಲ್ಲ. ಆದ್ದರಿಂದಲೇ ಈಗ ಆದಿಪುರುಷ್ ಮೇಲೆ ಎಲ್ಲರೂ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ಪ್ರಚಾರ ಕಾರ್ಯದ ವೇಳೆಯಲ್ಲೇ ಈ ಸಿನಿಮಾದ ನಿರ್ಮಾಪಕರು ಮಾಡಿರುವ ಒಂದು ಘೋಷಣೆ ಅಥವಾ ನಿರ್ಧಾರ ಈಗ ದೊಡ್ಡ ಸುದ್ದಿಯಾಗಿದೆ ಹಾಗೂ ಮೆಚ್ಚುಗೆಗಳು ಹರಿದು ಬರುತ್ತಿದೆ. ಇದನ್ನೂ ಓದಿ : ಮುಗೀತಿದೆ ವೀಕೆಂಡ್ ವಿತ್ ರಮೇಶ್ 5 ? ಹೊಸ ಅಪ್ಡೇಟ್ ಕೇಳಿ ಅಚ್ಚರಿ ಪಟ್ಟ ಪ್ರೇಕ್ಚಕರು
ಸಿನಿಮಾ ಬಿಡುಗಡೆಗೆ ಮೊದಲೇ ಈ ಸಿನಿಮಾದ ನಿರ್ಮಾಪಕರು, ಜನರ ನಂಬಿಕೆಗಳನ್ನು ಗೌರವಿಸುವ ಸಲುವಾಗಿ ಪ್ರತಿ ಚಿತ್ರಮಂದಿರದಲ್ಲಿ ಒಂದು ಸೀಟನ್ನು ಆಂಜನೇಯನಿಗಾಗಿ (Lord Hanuman) ಅರ್ಪಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿ ಸ್ಕ್ರೀನಿಂಗ್ ವೇಳೆಯಲ್ಲಿ ಅದೊಂದು ಸೀಟು ಮಾರಾಟವಾಗದೇ ಹಾಗೆಯೇ ಉಳಿಯುತ್ತದೆ ಎಂದು ಸಹಾ ಹೇಳಿದ್ದಾರೆ. ಆ ಸೀಟು ವಾಯುಪುತ್ರ ಹನುಮಂತನಿಗೆ ಮೀಸಲಿಡಲಾಗುವುದು ಎಂದಿದ್ದಾರೆ.
ನಂಬಿಕೆಗಳ ಪ್ರಕಾರ ಎಲ್ಲೇ ರಾಮಾಯಣದ (Ramayana) ಪಠಣೆ ನಡೆದರೂ ಅಲ್ಲಿ ಹನುಮನ ಆಗಮನ ಇರುತ್ತದೆ ಎನ್ನುವ ನಂಬಿಕೆಯಿಂದ ರಾಮಾಯಣ ಪಠಿಸುವಾಗ ಒಂದು ಆಸನವನ್ನು ಖಾಲಿ ಇಡುವ ಸಂಪ್ರದಾಯವನ್ನು ಅನೇಕ ಕಡೆಗಳಲ್ಲಿ ಪಾಲಿಸುತ್ತಾರೆ. ಅದೇ ನಂಬಿಕೆಗೆ ಗೌರವ ನೀಡುತ್ತಾ ಈಗ ಚಿತ್ರ ನಿರ್ಮಾಪಕರು ಇಂತಹುದೊಂದು ನಿರ್ಧಾರವನ್ನು ಮಾಡಿದ್ದಾರೆ.