ಬಾಲ್ಯದಲ್ಲಿ ನನ್ನ ತಂದೆಯೇ ನನ್ನನ್ನು… ಮೊದಲ ಬಾರಿಗೆ ಮನಸ್ಸಿನ ನೋವನ್ನು ಹಂಚಿಕೊಂಡ ಉರ್ಫಿ: ಭಾವುಕರಾದ ನೆಟ್ಟಿಗರು

Written by Soma Shekar

Published on:

---Join Our Channel---

Urfi Javed : ತನ್ನ ವಿಶಿಷ್ಟ, ಕೆಲವೊಮ್ಮೆ ವಿಚಿತ್ರ ಎನಿಸುವಂತಹ ಉಡುಗೆಗಳನ್ನು ತೊಟ್ಟು ಸಿಕ್ಕಾಪಟ್ಟೆ ಸುದ್ದಿ ಮಾಡುವ ಮೂಲಕವೇ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಉರ್ಫಿ ಜಾವೇದ್ (Urfi Javed). ಈ ನಟಿಯು ಹಾಕುವ ಡ್ರೆಸ್ ಗಳಿಂದಾಗಿ ಸಾಕಷ್ಟು ವಿ ವಾ ದಗಳಿಗೆ ಕಾರಣವಾಗಿದ್ದಾರೆ. ಅಲ್ಲದೇ ಒಂದಷ್ಟು ದೂರುಗಳು ಸಹಾ ಉರ್ಫಿ (Urfi) ಮೇಲೆ ದಾಖಲಾಗಿದೆ. ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ಸಹಾ ಉರ್ಫಿ ಬಗ್ಗೆ ಟೀಕೆಯ ಮಾತುಗಳನ್ನು ಆಡಿದರೆ, ಇನ್ನೂ ಕೆಲವರು ಉರ್ಫಿಯ ಬಿಂದಾಸ್ ಸ್ಟೈಲ್ ಗೆ ತಮ್ಮ ಮೆಚ್ಚುಗೆಯನ್ನು ಸಹಾ ನೀಡುತ್ತಾರೆ. ಉರ್ಫಿ ಮಾದ್ಯಮಗಳ ಮುಂದೆ ತಮ್ಮ ಖಾಸಗಿ ಜೀವನದ ಬಗ್ಗೆ ಇದುವರೆಗೂ ಅಷ್ಟಾಗಿ ಎಲ್ಲೂ ಕೂಡಾ ಮಾತನಾಡಿಲ್ಲ.

ಆದರೆ ಈಗ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಉರ್ಫಿ ಮನ ಬಿಚ್ಚಿ ಮಾತನಾಡಿದ್ದಾರೆ. ತಮ್ಮ ಬಾಲ್ಯ, ಯೌವ್ವನ, ತಾನು ಎದುರಿಸಿದ ಸಮಸ್ಯೆಗಳು ಹೀಗೆ ಸಾಕಷ್ಟು ವಿಷಯಗಳ ಕುರಿತಾಗಿ ಮಾತನಾಡಿದ್ದಾರೆ. ಉರ್ಫಿ ಮಾತನಾಡುತ್ತಾ, ನಾನು ಬೆಳೆದಿದ್ದು ಲಖ್ನೋದಲ್ಲಿ (Lucknow), ಅಲ್ಲಿ ಇದ್ದ ದಿನಗಳಲ್ಲಿ ನಾನು ಕೆಲವೊಂದು ಬಟ್ಟೆಗಳನ್ನು ಧರಿಸುವುದಕ್ಕೆ ನನಗೆ ಅಡ್ಡಿಪಡಿಸುತ್ತಿದ್ದರು. ಆದರೆ ಆಗ ನನಗೆ ಅದು ಏಕೆಂದು ತಿಳಿಯುತ್ತಿರಲಿಲ್ಲ. ಅಲ್ಲದೇ ಒಮ್ಮೆ ತನ್ನ ತಂದೆ ತನಗೆ ಹೇಗೆ ಹೊಡೆದಿದ್ದರು ಎಂದರೆ ನಾನು ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ್ದೆ. ಇದನ್ನೂ ಓದಿ: ಪಂಚೆ ಕಟ್ಟಿ ಕುಣಿದ ಸಲ್ಮಾನ್, ಎದುರಾಯ್ತು ಕಂಟಕ: ಈಗ ಸಿನಿಮಾ ಬ್ಯಾನ್ ಗೆ ಆಗ್ರಹ ಮಾಡ್ತಿರೋದು ಯಾಕೆ??

ಬಹಳಷ್ಟು ಸಲ ನಾನು ನನ್ನ ಜೀವನವನ್ನು ಕೊನೆ ಮಾಡುವ ಪ್ರಯತ್ನವನ್ನು ಸಹಾ ಮಾಡಿದ್ದೆ. ನಾನು ಹದಿನೈದು ವರ್ಷ ವಯಸ್ಸಿನವಳಾಗಿದ್ದಾಗ ಯಾರೋ ಒಬ್ಬರು ನನ್ನ ಫೋಟೋವನ್ನು ಪೋ ರ್ನ್ ಸೈಟ್ ನಲ್ಲಿ ಹಾಕಿದ್ದರು. ಅದೊಂದು ಸಾಮಾನ್ಯ ಫೋಟೋ ಆಗಿತ್ತು. ಅದನ್ನು ನನ್ನ ಫೇಸ್ ಬುಕ್ ಪೇಜ್ ನಿಂದ ತೆಗೆದುಕೊಂಡಿದ್ದರು. ಈ ವಿಷಯ ಎಲ್ಲರಿಗೂ ತಿಳಿದು ನನ್ನನ್ನು ಪೋ ರ್ನ್ ಸ್ಟಾರ್ ಎಂದು ಕರೆಯುತ್ತಿದ್ದರು. ಸ್ವತಃ ನನ್ನ ತಂದೆಯೇ ನನ್ನನ್ನು ಹಾಗೆ ಕರೆಯುತ್ತಿದ್ದರು. ಅದರಲ್ಲಿ ನನ್ನ ತಪ್ಪೇನು ಇರಲಿಲ್ಲವೆಂದು ತಾನು ಹದಿಹರೆಯದಲ್ಲಿ ಅನುಭವಿಸಿದ ಸಂಕಟವನ್ನು ಉರ್ಫಿ ಶೇರ್ ಮಾಡಿಕೊಂಡಿದ್ದಾರೆ.

ನನ್ನ ತಂದೆ ನನಗೆ ನೀಡುತ್ತಿದ್ದ ಕಿರುಕುಳ ತಾಳಲಾರದೆ ನಾನು ಹದಿನೇಳನೇ ವಯಸ್ಸಿನಲ್ಲಿ ಮನೆ ಬಿಟ್ಟು ಲಖನೌದಿಂದ ದೆಹಲಿಗೆ (Delhi) ಓಡಿ ಬಂದೆ. ಅದಾದ ಸ್ವಲ್ಪ ದಿನಗಳಲ್ಲಿ ನನ್ನ ತಂದೆ ಮನೆ ಬಿಟ್ಟು ಹೋದರೆಂದು ತಿಳಿಯಿತು. ಆಗ ನಾನೇ ಮನೆಯ ಜವಾಬ್ದಾರಿ ವಹಿಸಿಕೊಳ್ಳುವ ನಿರ್ಧಾರವನ್ನು ಮಾಡಿದೆ. ಮುಂಬೈನಲ್ಲಿ (Mumbai) ಹಲವು ಆಡಿಷನ್ ಗಳನ್ನು ನೀಡುತ್ತಾ ನಾನು ಅದೃಷ್ಟ ಪರೀಕ್ಷೆಗೆ ಇಳಿದೆ. ಆದರೆ ಆ ದಿನಗಳಲ್ಲಿ ನನ್ನ ಬಳಿ ಒಂದು ರೂಪಾಯಿ ಕೂಡಾ ಇರಲಿಲ್ಲ ಎನ್ನವ ಮಾತನ್ನು ಉರ್ಫಿ ಹೇಳಿದ್ದಾರೆ.

ಫ್ಯಾಷನ್ ಕಡೆಗೆ ನನಗೆ ಹೆಚ್ಚಿನ ಆಸಕ್ತಿಯಿತ್ತು. ಆದ್ದರಿಂದಲೇ ನಾನು ಅದೇ ಕ್ಷೇತ್ರವನ್ನು ಆರಿಸಿಕೊಂಡೆ. ನನ್ನ ಬಗ್ಗೆ ಬೇರೆಯವರು ಏನು ಅಭಿಪ್ರಾಯ ನೀಡುತ್ತಾರೆ ಎನ್ನುವುದಕ್ಕೆ ನಾನು ಎಂದಿಗೂ ಬೆಲೆ ಕೊಡುವುದಿಲ್ಲ. ನಾನು ಧರಿಸುವ ಬಟ್ಟೆಗಳ ವಿಚಾರವಾಗಿ ಈಗಾಗಲೇ ನನ್ನನ್ನು ಸಾಕಷ್ಟು ಬಾರಿ ಟ್ರೋಲ್ (Urfi troll) ಮಾಡಲಾಗಿದೆ. ಆದರೆ ನಾನು ಅದರ ಬಗ್ಗೆ ಆಲೋಚನೆ ಮಾಡದೇ, ತಲೆ ಕೆಡಿಸಿಕೊಳ್ಳದೇ ಮುಂದೆ ಸಾಗುತ್ತಿದ್ದೇನೆ. ನಾನು ಮಾಡಿರುವ ಆಯ್ಕೆ ಬಗ್ಗೆ ನನಗೆ ಸದಾ ಹೆಮ್ಮೆ ಇದೆ ಎಂದು ಉರ್ಫಿ ಹೇಳಿದ್ದಾರೆ.

Leave a Comment