ನಟಿ ರಚಿತಾರಾಮ್ ಫ್ಯಾನ್ಸ್‌ಗೆ ಬೇಸರದ ಸಂಗತಿಯೊಂದನ್ನು ಹೇಳಿದ್ದಾರೆ.ಅಕ್ಟೋಬರ್ 3ರಂದು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರ ಜನುಮದಿನ. ಈ ಬಾರಿ ರಚಿತಾ ರಾಮ್ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
ʻʻಎಲ್ಲರಿಗೂ ನಮಸ್ಕಾರ, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿʼʼ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಕಾವೇರಿ ಜಲವಿವಾದ ಕಾವೇರುತ್ತಿದೆ. ಮಂಡ್ಯದಲ್ಲಿ ಪ್ರತಿಭಟನೆಯ ಜೋರಾಗಿದ್ದು, ನೀರಿಗಾಗಿ ರೈತರ ಕೂಗು ಮುಗಿಲುಮುಟ್ಟಿದೆ. ನಮ್ಮ ನಾಡಿನ ನೆಲ, ಜಲಕ್ಕಾಗಿ ಹೋರಾಟಗಳು ನಡೆಯುತ್ತಿದ್ದು, ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಅನ್ನದಾತನ ಬೆಂಬಲಕ್ಕೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಬರ್ತ್ ಡೇ ಆಚರಿಸಿಕೊಳ್ಳಲು ಮನಸ್ಸಿಲ್ಲ ಎಂದು ರಚಿತಾ ರಾಮ್ ತಿಳಿಸಿದ್ದಾರೆ.