ವೈಟ್ ಅಂಡ್ ವೈಟ್ ನಲ್ಲಿ ಮೇಘಾ ಶೆಟ್ಟಿ: ವೈರಲ್ ಲುಕ್ ನೋಡಿ ನಟಿಯ ಫ್ಯಾನ್ಸ್ ಫಿದಾ!
Megha Shetty: ಕನ್ನಡ ಕಿರುತೆರೆಯ ಮೂಲಕ ನಟನೆಗೆ ಎಂಟ್ರಿ ಕೊಟ್ಟು ಅನಂತರ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರಾಗಿ ಮಿಂಚಿದ ನಟಿಯರು ಕನ್ನಡ ಸಿನಿಮಾ ರಂಗದಲ್ಲಿ ಇದ್ದಾರೆ. ಆ ಸಾಲಿನಲ್ಲಿ ಈಗ ಸಾಗುತ್ತಿರುವ ನಟ ಮೇಘಾ ಶೆಟ್ಟಿ. ಹೌದು, ಕಿರುತೆರೆಯ ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿ (Jothe Jotheyali) ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಮೇಘಾ ಶೆಟ್ಟಿ ಅವರು ಪ್ರಸ್ತುತ ಸ್ಯಾಂಡಲ್ವುಡ್ ನಲ್ಲಿ ನಟಿಯಾಗಿ ಬೆಳೆಯುವ ಹಾದಿಯಲ್ಲಿ ಸಾಗುತ್ತಿದ್ದಾರೆ.
ನಟಿ ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ನಟಿಯಾಗಿದ್ದಾರೆ. ಈ ಸೀರಿಯಲ್ ನ ಅನು ಸಿರಿಮನೆ ಪಾತ್ರ ನಟಿಗೆ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡರು.
ಅನು ಸಿರಿಮನೆ ಪಾತ್ರದ ಮೂಲಕ ಮನೆ ಮನೆ ಮಾತಾದ ಮೇಘಾ ಶೆಟ್ಟಿ ಅವರಿಗೆ ಜೊತೆ ಜೊತೆಯಲಿ ಸೀರಿಯಲ್ ಅವರ ವೃತ್ತಿ ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಲು ಕಾರಣವಾಯಿತು.
ಸೀರಿಯಲ್ (Serial) ಮೂಲಕ ಪಡೆದ ಜನಪ್ರಿಯತೆ ಅವರನ್ನು ಸಿನಿಮಾ ಕಡೆ ನಡೆಸಿತು. ಈಗಾಗಲೇ ಮೇಘಾ ಶೆಟ್ಟಿ ಅವರು ನಟಿಸಿದ್ದ ಎರಡು ಸಿನಿಮಾಗಳು ತೆರೆ ಕಂಡಾಗಿದೆ. ಇನ್ನೆರಡು ಹೊಸ ಸಿನಿಮಾಗಳು ಬಿಡುಗಡೆ ಆಗ ಬೇಕಾಗಿದೆ.
ಇವೆಲ್ಲವುಗಳ ನಡುವೆ ಇತ್ತೀಚಿಗೆ ನಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಜೊತೆ ಜೊತೆಯಲಿ ಸೀರಿಯಲ್ ಕೂಡಾ ಮುಕ್ತಾಯವಾಗಿದ್ದು, ನಟಿ ಈಗ ಹೆಚ್ಚು ಸಿನಿಮಾ ರಂಗದ ಕಡೆ ಗಮನ ನೀಡಲು ತಯಾರಿ ನಡೆಸಿದ್ದಾರೆ.
ಮೇಘಾ ಶೆಟ್ಟಿ ಅವರು ಸಹಾ ಸದ್ಯಕ್ಕೆ ಸಿನಿಮಾಗಳ ಕಡೆ ಹೆಚ್ಚು ಗಮನವನ್ನು ನೀಡುವುದರಿಂದ ಹೊಸ ಧಾರಾವಾಹಿಗಳಲ್ಲಿ ನಟಿಸುವ ಬಗ್ಗೆ ಆಲೋಚನೆ ಇಲ್ಲ ಎನ್ನುವ ಮಾತನ್ನು ಅವರು ಹೇಳಿದ್ದರು.
ಮೇಘಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು , ಇವರನ್ನು ಒಂದು ಮಿಲಿಯನ್ ಗಿಂತಲೂ ಅಧಿಕ ಸಂಖ್ಯೆಯಲ್ಲಿ ಹಿಂಬಾಲಿಸುವ ಅಭಿಮಾನಿಗಳು ಇದ್ದಾರೆ ಎಂದರೆ ಅಚ್ಚರಿಯಾಗಬಹುದು.
ಮೇಘಾ ಶೆಟ್ಟಿ ತಮ್ಮ ಹೊಸ ಹೊಸ ಫೋಟೋ ಶೂಟ್ ಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ.
ಈಗಲೂ ನಟಿಯು ವೈಟ್ ಅಂಡ್ ವೈಟ್ ನಲ್ಲಿ ಮಾಡಿಸಿರುವ ಫೋಟೋ ಶೂಟ್ ನ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಮೆಚ್ಚುಗೆಗಳನ್ನು ಹರಿಸುತ್ತಿದ್ದಾರೆ.