ರಶ್ಮಿಕಾ ಆಗ್ತಿದ್ದಾಳೆ, ಅಂತಹ ಫೋಟೋ ಹಾಕಿ! ವೈಟ್ ಅಂಡ್ ವೈಟ್ ನಲ್ಲಿ ಮಿಂಚಿದ ಮೇಘಾ ಶೆಟ್ಟಿಗೆ ನೆಟ್ಟಿಗರ ಕ್ಲಾಸ್

Written by Soma Shekar

Published on:

---Join Our Channel---

Megha Shetty: ಕಿರುತೆರೆಯ ಮೂಲಕ ಜನಪ್ರಿಯತೆ ಪಡೆದು ಈಗ ಸದ್ಯಕ್ಕೆ ಸಿನಿಮಾದ ಕಡೆಗೆ ಹೆಚ್ಚು ಒಲವನ್ನು ತೋರಿರುವ ನಟಿ ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾಗಳಲ್ಲೂ ಸಖತ್ ಸಕ್ರಿಯವಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಮೇಘಾ ಶೆಟ್ಟಿ ಅವರು ನಾಯಕಿಯಾಗಿದ್ದ ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿ ಮುಗಿದಿದೆ. ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಪ್ರಸಾರ ಕಂಡಿದ್ದ ಸೀರಿಯಲ್ ಇತ್ತೀಚಿಗೆ ತನ್ನ ಜನಪ್ರಿಯತೆ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿತ್ತು.

ಈಗಾಗಲೇ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ ಅವರು ಇನ್ನೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಹೊಸ ಹೊಸ ಕಥೆಗಳನ್ನು ಸಹಾ ಕೇಳುತ್ತಿದ್ದಾರೆ. ಸಿನಿಮಾಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಲು ನಟಿಯು ಸಜ್ಜಾಗಿದ್ದಾರೆ.

ಮೇಘಾ ಶೆಟ್ಟಿ (Megha Shetty) ಅನು ಸಿರಿಮನೆ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದವರು. ಇನ್ನು ಸೋಶಿಯಲ್ ಮೀಡಿಯಾಗಳಲ್ಲೂ ಸಕ್ರಿಯವಾಗಿರುವ ಮೇಘಾ ಶೆಟ್ಟಿ ತಮ್ಮ ಹೊಸ ಹೊಸ ಫೋಟೋ ಶೂಟ್ ಗಳ ಬಹಳ ಅಂದದ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ನಟಿಯು ತಮ್ಮ ವರ್ಕೌಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳಿಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬಂದಿದ್ದವು. ಅವರ ಅಭಿಮಾನಿಗಳಂತೂ ನಟಿಯನ್ನು ಹಾಡಿ ಹೊಗಳುತ್ತಾ ಕಾಮೆಂಟ್ ಗಳನ್ನು ಮಾಡಿದ್ದರು.

ಅದರ ಬೆನ್ನಲ್ಲೇ ನಟಿಯು ಬಿಳಿ ಬಣ್ಣದ ಸುಂದರ ಉಡುಗೆಯನ್ನು ತೊಟ್ಟು, ನೀರಿನ ಮೇಲೆ ಬೆಡ್ ಇರಿಸಿ, ಅದರ ಮೇಲೆ ವಿವಿಧ ಶೈಲಿಯಲ್ಲಿ ಪೋಸ್ ಗಳನ್ನು ನೀಡುತ್ತಾ ಮಾಡಿಸಿದ್ದ ಫೋಟೋ ಶೂಟ್ ನ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಟಿ ಶೇರ್ ಮಾಡಿದ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಶ್ವೇತಾಂಬರಿ ನೀವು, ಬಹಳ ಸೆ ಕ್ಸಿ ಫೋಟೋಗಳು, ಬಣ್ಣಿಸಲಾಗದ ಅಂದ, ಹಾಟ್ ಪೋಸ್ಟ್, ಬ್ಯೂಟಿ ಫುಲ್ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿ ಹೊಗಳದ್ದಾರೆ.

ಆದರೆ ಇದೇ ವೇಳೆ ಕೆಲವರು ಈ ಫೋಟೋಗಳನ್ನು ನೋಡಿದ ಮೇಲೆ, ಬರ್ತಾ ಬರ್ತಾ ರಶ್ಮಿಕಾ ಮಂದಣ್ಣ (Rashmika) ಆಗ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರಶ್ಮಿಕಾ ಮಂದಣ್ಣ‌ ಅವರ ತಂಗಿ ಇರಬಹುದು ಎಂದಿದ್ದಾರೆ. ಇನ್ನೂ ಕೆಲವರು ಬಿಕಿನಿ ಪೋಸ್ಟ್ ಗಳನ್ನು ಸಹಾ ಹಾಕಿ ಎಂದು ಕಾಲೆಳೆದಿದ್ದಾರೆ.‌

ಮತ್ತೆ ಕೆಲವರು ರಾಯರ ಕುದುರೆ ಕತ್ತೆ ಆಗ್ತಿದ ಎಂದಿದ್ದಾರೆ. ಸಿನಿಮಾ, ಸೀರಿಯಲ್ ಸೆಲೆಬ್ರಿಟಿಗಳು ಎಂದ ಮೇಲೆ ಇದೆಲ್ಲವೂ ಇತ್ತೀಚಿಗೆ ಸಾಮಾನ್ಯ ಎನ್ನುವಂತೆ ಹಾಗಿದೆ. ಅವರ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದು ಬಂದರೆ, ಇನ್ನೂ ಕೆಲವರಿಗೆ ಅದು ಇಷ್ಟವಾಗದೇ ನೆಗೆಟಿವ್ ಕಾಮೆಂಟ್ ಗಳನ್ನು ಮಾಡುವುದು ಸಹಾ ಸಹಜವಾಗಿದೆ.

Leave a Comment