Megha Shetty: ಬ್ಲಾಕ್ ಡ್ರೆಸ್, ಬೋಲ್ಡ್ ಲುಕ್; ಮೇಘಾ ಶೆಟ್ಟಿ ಅಂದ ಹೊತ್ತಿಸಿದ ಕಿಚ್ಚಿಗೆ ಉರಿದ ಫ್ಯಾನ್ಸ್ ಹೃದಯ

Written by Soma Shekar

Published on:

---Join Our Channel---

Megha Shetty: ನಟಿ ಮೇಘಾ ಶೆಟ್ಟಿ (Megha Shetty) ಹೆಸರು ಕನ್ನಡ ಕಿರುತೆರೆಯಲ್ಲಿ ಮತ್ತು ಸ್ಯಾಂಡಲ್ವುಡ್ ನಲ್ಲೂ ಸಹಾ ಸಾಕಷ್ಟು ಹೆಸರನ್ನು ಮಾಡುತ್ತಿರುವ ಹೆಸರಾಗಿದೆ‌. ನಟಿಸಿದ್ದು ಒಂದೇ ಸೀರಿಯಲ್ ಆದರೂ ಸಹಾ ನಟಿ ಮೇಘಾ ಶೆಟ್ಟಿ ಅವರು ಪಡೆದ ಹೆಸರು ಮರ್ತು ಜನಪ್ರಿಯತೆ ಮಾತ್ರ ಅಪಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಸೀರಿಯಲ್ ನಲ್ಲಿ ನಟಿಸುವಾಗಲೇ ಸಿನಿಮಾ ನಟಿಯಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದವರು ಮೇಘಾ ಶೆಟ್ಟಿ.

ಪಕ್ಕದ ಮನೆ ಹುಡುಗಿಯಂತ ಸರಳವಾದ ಅನು ಸಿರಿಮನೆ ಪಾತ್ರದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆ ಮನೆ ಮಾತಾದವರು ನಟಿ ಮೇಘಾ ಶೆಟ್ಟಿ.

ಸೀರಿಯಲ್ ನಲ್ಲಿ ನಟಿಸುವಾಗಲೇ ಮೇಘಾ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡಿದರು.

ಪ್ರಸ್ತುತ ನಟಿಯು ಧನ್ವೀರ್ ಅವರ ಜೊತೆ ನಟಿಸಿರುವ ಕೈವ ಸಿನಿಮಾದ ಬಿಡುಗಡೆ ನಿರೀಕ್ಷೆಯಲ್ಲಿದ್ದು, ಈ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.

ಇದಲ್ಲದೇ ಆಪರೇಷನ್ ಲಂಡನ್ ಕೆಫೆ ಸಿನಿಮಾ ಸಹಾ ಇನ್ನೂ ಬಿಡುಗಡೆ ಆಗಬೇಕಾಗಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಸಹಾ ಆಗಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ‌ ಹಾಟ್ ಹಾಟ್ ಫೋಟೋಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಲಗ್ಗೆ ಇಡುತ್ತಾರೆ.

ಈಗ ಕಪ್ಪು ಬಣ್ಣದ ಮಾಡ್ರನ್ ಡ್ರೆಸ್ ನಲ್ಲಿ ಹೊಸ ಫೋಟೋ ಶೂಟ್ ನ‌ ಅಂದವಾದ ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

ಮೇಘಾ ಅವರು ಬ್ಲಾಕ್ ಡ್ರೆಸ್ ನಲ್ಲಿ ಮಿಂಚಿದ್ದು, ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಮೆಚ್ಚುಗೆಗಳನ್ನು ನೀಡುತ್ತಾ ಸಾಗಿದ್ದಾರೆ.

Leave a Comment