Malashree ನಟಿ ಮಾಲಾಶ್ರೀ ಮನೆಯಲ್ಲಿ ಸಂಭ್ರಮದ ಗೌರಿ ಗಣೇಶ ಹಬ್ಬ: ಇಲ್ಲಿದೆ ಸುಂದರವಾದ ಫೋಟೋಗಳು
Malashree : ಸ್ಯಾಂಡಲ್ವುಡ್ ನ (Sandalwood) ಕನಸಿನ ರಾಣಿ ಖ್ಯಾತಿಯ ಹಿರಿಯ ನಟ ಮಾಲಾಶ್ರೀ (Malashree) ಅವರು ಸಿನಿಮಾ ರಂಗದಲ್ಲಿ ನಂಬರ್ ಒನ್ ನಟಿಯಾಗಿ, ಬಹುಬೇಡಿಕೆಯ ನಟಿಯಾಗಿ ಮೆರೆದವರು. ಇಂದಿಗೂ ಸಹಾ ಮಾಲಾಶ್ರೀ ಅವರನ್ನು ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಏನೂ ಕಡಿಮೆಯಿಲ್ಲ ಎಂದು ಹೇಳಿದರೆ ಅದು ಖಂಡಿತ ಅತಿಶಯೋಕ್ತಿಯೇನಲ್ಲ.
ನಟಿ ಮಾಲಾಶ್ರೀ ಅವರು 2019 ರಲ್ಲಿ ತಮ್ಮ ಸೋಶಿಯಲ್ ಮೀಡಿಯಾಗೆ ಎಂಟ್ರಿ ನೀಡಿದ್ದು, ಸಾಕಷ್ಟು ಫಾಲೋಯರ್ಸ್ ಗಳನ್ನು ಪಡೆದುಕೊಂಡಿದ್ದಾರೆ.
ಆಗಾಗ ತಮ್ಮ ಕುಟುಂಬದ ಸುಂದರ ಕ್ಷಣಗಳ, ಹಬ್ಬ, ಹರಿದಿನಗಳ ವಿಶೇಷ ಫೋಟೋಗಳನ್ನು, ವೀಡಿಯೋಗಳನ್ನು ನಟಿ ಶೇರ್ ಮಾಡಿಕೊಳ್ಳುತ್ತಾರೆ.
ಇದೀಗ ಅವರು ತಮ್ಮ ಮನೆಯಲ್ಲಿ ಬಹಳ ಸಂಭ್ರಮದಿಂದ ಗಣೇಶ ಚತುರ್ಥಿ ಯನ್ನು ಆಚರಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಹಬ್ಬದ ವೇಳೆ ದೇವರಿಗೆ ಪೂಜೆ ಸಲ್ಲಿಸಿದ ಸುಂದರವಾದ ಫೋಟೋಗಳನ್ನು ಒಂದು ಸಣ್ಣ ವೀಡಿಯೋ ಮೂಲಕ ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಮಾಲಾಶ್ರೀ ಅವರು ತಮ್ಮ ಮಗಳು, ಮಗ ಹಾಗೂ ತಾಯಿಯ ಜೊತೆಗೆ ಶ್ರದ್ಧಾ ಭಕ್ತಿಯಿಂದ ದೇವರ ಆರಾಧನೆಯನ್ನು ಮಾಡಿದ್ದು, ಈ ವೀಡಿಯೋ ಈಗ ವೈರಲ್ ಆಗುತ್ತಿದೆ.
ಮಾಲಾಶ್ರೀ ಅವರು ಶೇರ್ ಮಾಡಿದ ವೀಡಿಯೋ ಗೆ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆ ನೀಡುತ್ತಾ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.