ಹೆಣ್ಣು ಮಕ್ಕಳು ಹಾಳಾಗ್ತಿದ್ದಾರೆ: ಕಾಸ್ಟಿಂಗ್ ಕೌಚ್ ಬಗ್ಗೆ ಡಿಸ್ಕೋ ಶಾಂತಿ ಹೇಳಿದ್ದೇನು?

Written by Soma Shekar

Published on:

---Join Our Channel---

Disco Shanti: ದಕ್ಷಿಣ ಸಿನಿಮಾ ರಂಗದಲ್ಲಿ ನಟಿ ಡಿಸ್ಕೋ ಶಾಂತಿ ಅವರ ಹೆಸರಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ಇಲ್ಲಿನ ಎಲ್ಲಾ ಸ್ಟಾರ್ ನಟರ ಜೊತೆಗೆ ವಿಶೇಷ ಹಾಡುಗಳಲ್ಲಿ ಹೆಜ್ಜೆ ಹಾಕಿರುವ ಡಿಸ್ಕೋ ಶಾಂತಿ ಅವರಿಗೆ ದಕ್ಷಿಣ ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನ ಮತ್ತು ಗೌರವವಿದೆ. ಶಾಂತಕುಮಾರಿ (Shanta Kumari) ಎನ್ನುವ ಇವರು ತಮ್ಮ ಡ್ಯಾನ್ಸ್ ಗಳಿಂದಾಗಿ ಎಷ್ಟು ಜನಪ್ರಿಯತೆ ಪಡೆದಿದ್ದಾರೆ ಎಂದರೆ ಅವರ ಹೆಸರು ಡಿಸ್ಕೋ ಶಾಂತಿಯಾಗಿಯೇ ಬದಲಾಗಿ ಹೋಗಿದೆ.

ಬಹು ದಿನಗಳ ನಂತರ ಯೂಟ್ಯೂಬ್ ಚಾನೆಲ್ ಒಂದಕ್ಕೆ ಡಿಸ್ಕೋ ಶಾಂತಿ ಅವರು ಸಂದರ್ಶನವನ್ನು ನೀಡಿದ್ದು, ಈ ವೇಳೆ ಅವರು ಸಿನಿಮಾ ರಂಗದ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಡಿಸ್ಕೋಶಾಂತಿ ಅವರು ಸಿನಿಮಾ ರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುಚರ್ಚಿತ ವಿಷಯವಾಗಿರುವ ಕಾಸ್ಟಿಂಗ್ ಕೌಚ್ ನ (Casting Couch) ಬಗ್ಗೆ ಮಾತನಾಡುವ ಮೂಲಕ ಈಗ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ನಟಿಯು ಮಾತನಾಡುತ್ತಾ ಸಿನಿಮಾ ರಂಗದಲ್ಲಿ ನಟ, ನಿರ್ಮಾಪಕ ಮತ್ತು ನಿರ್ದೇಶಕರಿಗೆ ಸಹಕಾರ ನೀಡಿದರೆ ಮಾತ್ರವೇ ಅವಕಾಶ ಸಿಗುತ್ತದೆ ಎನ್ನುವುದು ನಿಜವಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

ಚಿತ್ರರಂಗದಲ್ಲಿನ ಇಂತಹ ಘಟನೆಗಳ ಬಗ್ಗೆ ಈಗಾಗಲೇ ಅನೇಕರು ಮಾತನಾಡಿದ್ದಾರೆ. ಆದರೆ ಇಂತಹವುಗಳನ್ನು ನಾನಂತೂ ಎಂದೂ ಸಹಾ ನೋಡಿಲ್ಲ ಎನ್ನುವ ಮಾತನ್ನು ನಟಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಹೇಳಲಾಗ್ತಿದೆ. ಆದ್ರೆ ಎಲ್ಲಾ ನಾಯಕಿಯರು ತಪ್ಪು ಮಾಡ್ತಾ ಬಂದಿದ್ದಾರೆ. ಎಲ್ಲಾ ನಟ, ನಿರ್ಮಾಪಕ ಮತ್ತು ನಿರ್ದೇಶಕರು ಹಾಗೆ ಮಾಡ್ತಾರೆ ಅನ್ನೋದು ತಪ್ಪು.

ಯಾರೋ ಒಂದಿಬ್ಬರು ಹಾಗೆ ಮಾಡಿರಬಹುದು. ಅಲ್ಲದೇ ಜನರಿಗೆ ಮದುವೆ ಮೇಲೆ ನಂಬಿಕೆ ಕಡಿಮೆಯಾಗಿದ್ದು, ಅದಕ್ಕೆ ಇಂತಹ ಟ್ರೆಂಡ್ ಶುರುವಾಗಿದೆ ಎಂದು ಸಹಾ ಡಿಸ್ಕೋ ಶಾಂತಿ ಅವರು ಈ ವೇಳೆ ಹೇಳಿದ್ದಾರೆ. ಮದುವೆ ಮೇಲೆ ನಂಬಿಕೆ ಕಳ್ಕೊಂಡು ಎಲ್ಲಾ ಲಿವಿಂಗ್ ಟು ಗೆದರ್ ಹೆಚ್ಚಾಗಿದ್ದಾರೆ.

ಜನ ತುಂಬಾ ಬದಲಾಗಿದ್ದಾರೆ. ಮೊದಲೆಲ್ಲಾ ಹೈ ಕ್ಲಾಸ್ ಜನ ಮಾತ್ರ ಲಿವಿಂಗ್ ಟು ಗೆದರ್ ಅಂತಿದ್ರು. ಈಗ ಸಾಮಾನ್ಯ ಜನರು ಕೂಡಾ ಇಂತಹ ಸಂಸ್ಕೃತಿಯನ್ನು ಅನುಸರಿಸ್ತಾ ಇದ್ದಾರೆ ಅನ್ನೋದು ನಿಜ.

ಹಳ್ಳಿ ಕಡೆಯಿಂದ ನಗರಗಳಿಗೆ ಬಂದು ಹೆಣ್ಣು ಮಕ್ಕಳು ಹಾಳಾಗ್ತಾ ಇದ್ದಾರೆ. ಗಂಡು ಹೆಣ್ಣು ಸೇರಿ ಒಂದೇ ಮನೆಯಲ್ಲಿ ವಾಸಿಸೋ ತರ ಆಗಿದೆ. ನಾವು ನಮಗೆ ಗೆರೆ ಎಳ್ಕೊಂಡ್ರೆ ಯಾರೂ ನಮ್ಮನ್ನು ಏನೂ ಮಾಡೋಕಾಗಲ್ಲ. ನಾವು ರಾಣಿಯಂತೆ‌ ಬದುಕಿರ್ತೀವಿ ಎಂದಿದ್ದಾರೆ.

ಒಂದು ಕಾಲದಲ್ಲಿ ಸಿನಿ‌ಮಾ ರಂಗದಲ್ಲಿ ಬಹಳ ಆ್ಯಕ್ಟೀವ್ ಆಗಿದ್ದ ನಟಿ ಡಿಸ್ಕೋ ಶಾಂತಿ ನಟ ಶ್ರೀ ಹರಿ ಅವರನ್ನು ವಿವಾಹವಾದ ಮೇಲೆ ಸಿನಿಮಾ ರಂಗದಿಂದ ದೂರ ಉಳಿದರು. 2013 ರಲ್ಲಿ ನಟ ಶ್ರೀಹರಿ ಅವರು ಅನಾರೋಗ್ಯದಿಂದ ನಿಧನರಾದರು.

ಡಿಸ್ಮೋ ಶಾಂತಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಗಲಿದ ಹೆಣ್ಣು ಮಗುವಿನ ನೆನಪಿನಲ್ಲಿ ಅಕ್ಷರ ಫೌಂಡೇಶನ್ ಸ್ಥಾಪಿಸಿದ್ದು, ಅದರ ಮೂಲಕ ಬಹಳಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.

Leave a Comment