ಸ್ಟಾರ್ ನಟರಿಗಿಂತ ಹೆಚ್ಚು ಆಸ್ತಿಯ ಒಡೆಯ ನರೇಶ್? ಈ ನಟನ ಆಸ್ತಿ ಮೌಲ್ಯ 1000 ಕೋಟಿನಾ ಅದಕ್ಕಿಂತ ಹೆಚ್ಚಾ?

Written by Soma Shekar

Published on:

---Join Our Channel---

Naresh net worth : ಹಿರಿಯ ನಟ ನರೇಶ್ ತೆಲುಗು ಚಿತ್ರರಂಗದ (tollywood) ಅತ್ಯಂತ ಬ್ಯುಸಿ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ. ತೆಲುಗು ಸಿನಿಮಾ ಉದ್ಯಮದಲ್ಲಿ ಅವರು ಈ ವರ್ಷ ಬರೋಬ್ಬರಿ 50 ವರ್ಷಗಳನ್ನು ಪೂರೈಸುತ್ತಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಸಹ ನಟಿ ಮತ್ತು ಆತ್ಮೀಯ ಸ್ನೇಹಿತೆಯೂ ಆಗಿರುವ ಪವಿತ್ರಾ ಲೋಕೇಶ್ ಅವರೊಂದಿಗಿನ ಸಂಬಂಧದ ವಿಚಾರವಾಗಿ ಸುದ್ದಿಯಾಗಿದ್ದು, ಇವರಿಬ್ಬರು ಜೋಡಿಯಾಗಿ ನಟಿಸಿರುವ ಮತ್ತೆ ಮದುವೆ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾ ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳು ಸಹಾ ನಡೆಯುತ್ತಿದೆ.

ಮತ್ತೆ ಮದುವೆ (Matte Maduve) ಸಿನಿಮಾ ಕಥೆಯು ನರೇಶ್ ಮತ್ತು ಪವಿತ್ರ ಲೋಕೇಶ್ (Pavitra Lokesh) ಅವರ ವೈಯಕ್ತಿಕ ಜೀವನವನ್ನು ಆಧರಿಸಿದೆ, ಆದರೂ ಇದು ಸಿನಿಮೀಯ ಪ್ರಸ್ತುತಿ ಮಾತ್ರವೇ ಎಂದು ನರೇಶ್ ಹೇಳಿದ್ದಾರೆ. ಈ ಸಿನಿಮಾ ಮೇ 26 ರಂದು ತೆರೆಗೆ ಬರುತ್ತಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ತಮ್ಮ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನಟ ನರೇಶ್ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಅಡಿಯಿಟ್ಟವರು. ಅನಂತರ ಒಂದು ಸಣ್ಣ ಬ್ರೇಕ್ ನಂತರ ನಾಯನ ನಟನಾಗಿ ಹೆಸರನ್ನು ಮಾಡಿದರು.

ಈಗ ನಟ ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಪೋಷಕ ನಟನಾಗಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ನಟ ನರೇಶ್ ಅವರ ಒಟ್ಟು ಆಸ್ತಿಯ ಕುರಿತಾಗಿ ಒಂದು ಚರ್ಚೆ ನಡೆದಿದ್ದು, ನರೇಶ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 1000 ಕೋಟಿ ರೂಪಾಯಿಗಳು ಎನ್ನಲಾಗಿದೆ ಮತ್ತು ಅದೇ ವೇಳೆ ಇಲ್ಲ ಅದು ಒಂದು ಸಾವಿರಕ್ಕಿಂತಲೂ ಎರಡು-ಮೂರು ಪಟ್ಟು ಹೆಚ್ಚಾಗಿದೆ ಎಂದು ವದಂತಿಗಳು ಹರಡಿವೆ.

ಇನ್ನು ಸಂದರ್ಶನವೊಂದರಲ್ಲಿ ಇದೇ ವಿಚಾರವಾಗಿ ನಟ ನರೇಶ್ ಅವರನ್ನು ಪ್ರಶ್ನೆ ಮಾಡಲಾಯಿತು. ಇದಕ್ಕೆ ನರೇಶ್ ಬಹಳ ಬುದ್ಧಿವಂತಿಕೆಯಿಂದ ಉತ್ತರವನ್ನು ನೀಡಿದ್ದಾರೆ. ತಾನು ತನ್ನ ಆಸ್ತಿಯನ್ನು ತಮ್ಮ ತಾಯಿಯಿಂದ ಸ್ವಲ್ಪ ಆನುವಂಶಿಕವಾಗಿ ಪಡೆದಿದ್ದೇನೆ ಮತ್ತು ಸ್ವಲ್ಪ ಆಸ್ತಿಯು ತಮ್ಮದೇ ಸ್ವಂತ ಸಂಪಾದನೆ ಎನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ. ಅಲ್ಲದೇ ತಾವು ಹಣವನ್ನು ಕೆಲವು ಮಾನವೀಯ ಕಾರ್ಯಗಳಿಗೆ ಬಳಸುತ್ತಿದ್ದೇನೆ, ಒಬ್ಬ ವ್ಯಕ್ತಿ ಹಣದ ವಿಚಾರದಲ್ಲಿ ಚೆನ್ನಾಗಿದ್ದರೆ ಮಾತ್ರವೇ ಇದೆಲ್ಲಾ ಮಾಡಲು ಸಾಧ್ಯ ಎನ್ನುವ ಮಾತನ್ನು ಅವರು ಹೇಳಿದ್ದಾರೆ.‌

ಇನ್ನು ನರೇಶ್ ಅವರು ತಮ್ಮ ಪ್ರತಿ ಕಾಲ್‌ ಶೀಟ್‌ ಗೆ ಸುಮಾರು 2 ರಿಂದ 3 ಲಕ್ಷ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ. ನರೇಶ್ ಪ್ರಸ್ತುತ ತೆಲುಗಿನಲ್ಲಿ ಅತ್ಯಂತ ಬ್ಯುಸಿ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ. ವಿಶೇಷ ಏನೆಂದರೆ ಈ ನಟ ತಮ್ಮದೇ ಆದ ಸ್ವಂತ ಕ್ಯಾರವಾನ್ ಅನ್ನು ಹೊಂದಿದ್ದಾರೆ. ಪೋಷಕ ನಟರಲ್ಲಿ ಸ್ವಂತ ಕ್ಯಾರಾವಾನ್ ಹೊಂದಿದ ಮೊದಲ ನಟ ಕೂಡಾ ಇವರೇ ಆಗಿದ್ದಾರೆ.

ನಟ ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿ ದಿವಂಗತ ವಿಜಯ ನಿರ್ಮಲಾ (Vijaya Nirmala) ಅವರು ತಮ್ಮ ಕಾಲದಲ್ಲೇ ಬಹಳ ಬುದ್ಧಿವಂತಿಕೆಯಿಂದ ರಿಯಲ್ ಎಸ್ಟೇಟ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು ಮತ್ತು ಅದು ಸಾಕಷ್ಟು ಲಾಭವನ್ನು ತಂದು ಕೊಟ್ಟಿದೆ. ನಟ ನರೇಶ್ ಅವರು ಬೆಂಗಳೂರು ಮತ್ತು ಹೈದರಾಬಾದ್‌ ನಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ಆಸಕ್ತಿಕರ ವಿಚಾರ ಏನೆಂದರೆ ನಟ ನರೇಶ್ ಅವರ ಬಳಿ ಸ್ಪೋರ್ಟ್ಸ್ ಕಾರ್ ಮತ್ತು ಸ್ಪೋರ್ಟ್ಸ್ ಬೈಕ್ ಗಳು ಇವೆ. ಇದು ಹೆಚ್ಚು ಜನರಿಗೆ ತಿಳಿದಿಲ್ಲ. ಇನ್ನು ನರೇಶ್ ಅವರು ಬೆಂಗಳೂರಿನಲ್ಲಿ (Bengaluru) ದೊಡ್ಡ ಫಾರ್ಮ್‌ಹೌಸ್ ಅನ್ನು ಹೊಂದಿದ್ದಾರೆ ಎಂಬ ವರದಿಗಳಿವೆ. ನರೇಶ್ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ಸಹಾ ಸಂತೋಷವನ್ನು ಅನುಭವಿಸುತ್ತಿದ್ದು, ಇದು ಅನೇಕರಿಗೆ ಅಸೂಯೆ ಉಂಟು ಮಾಡಿದೆ ಎಂದು ಸಹಾ ಹೇಳಲಾಗುತ್ತದೆ.

Leave a Comment