Chetan Ahimsa: ತಿರುಪತಿ ಮೂಲತಃ ಬೌದ್ಧ ಮಂದಿರ: ವಿವರಣೆ ಕೊಟ್ಟ ನಟ, ನೆಟ್ಟಿಗರ ಆಕ್ರೋಶ! ಚೇತನ್ ಅವರ ವಿವರಣೆಯಲ್ಲೇನಿದೆ?

Written by Soma Shekar

Published on:

---Join Our Channel---

Chetan Ahimsa: ಕನ್ನಡ ಸಿನಿಮಾ ನಟ, ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಹೋರಾಟಗಾರನಾಗಿಯೇ ಹೆಚ್ಚಾಗಿ ಗುರ್ತಿಸಿಕೊಂಡಿರುವ, ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಅವರು ಚೇತನ್ ಅಹಿಂಸಾ ಎಂದೇ ಈಗ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಚೇತನ್ (Chetan) ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅವರು ಆಗಾಗ ಒಂದಷ್ಟು ಸೂಕ್ಷ್ಮ ವಿಚಾರಗಳ ಬಗ್ಗೆ ತಮ್ಮ‌ ನೇರ ಮತ್ತು ದಿಟ್ಟ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಗಳನ್ನು ಹುಟ್ಟು ಹಾಕುತ್ತಾರೆ. ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂಚಲನವನ್ನು ಸೃಷ್ಟಿಸುವುದು ಸಹಾ ಎಲ್ಲರಿಗೂ ತಿಳಿದೇ ಇದೆ. ರಾಜಕೀಯದಿಂದ ಹಿಡಿದು, ಸಾಮಾಜಿಕ, ಧಾರ್ಮಿಕ ಎಲ್ಲಾ ವಿಚಾರಗಳ ಬಗ್ಗೆ ಅವರು ಮಾತನಾಡುತ್ತಾರೆ.

ಕೆಲವೇ ದಿನಗಳ ಹಿಂದೆ ಚೇತನ್ ಅವರು ಮಾಡಿದ್ದ ಒಂದಷ್ಟು ಪೋಸ್ಟ್ ಗಳಲ್ಲಿ ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡಿದ್ದಾರೆಂದು ಅವರ ಮೇಲೆ ದೂರು ದಾಖಲಾದ ಹಿನ್ನೆಲೆಯಲ್ಲಿ ಚೇತನ್ ಅವರನ್ನು ಬಂ ಧಿ ಸ ಲಾಗಿತ್ತು. ಅನಂತರ ನಟ ಜಾಮೀನಿನ ಮೇಲೆ ಹೊರ ಬಂದಿದ್ದರು. ಹೊರ ಬಂದ ಮೇಲೆ ಎಂದಿನಂತೆ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಅವರು ಸಕ್ರಿಯವಾಗಿದ್ದು, ಸಾಕಷ್ಟು ವಿಚಾರಗಳ ಬಗ್ಗೆ ಪೋಸ್ಟ್ ಗಳನ್ನು ಶೇರ್ ಮಾಡುತ್ತಲಿದ್ದಾರೆ.

ಈಗ ಅವರು ಶೇರ್ ಮಾಡಿರುವ ಹೊಸ ಪೋಸ್ಟ್ ಒಂದು ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಹೌದು, ಚೇತನ್ ತಮ್ಮ ಪೋಸ್ಟ್ ನಲ್ಲಿ, ಇತ್ತೀಚಿನ ಸಂದರ್ಶನವೊಂದರಲ್ಲಿ, ತಿರುಪತಿ (Tirupati) ಮೂಲತಃ ಬೌದ್ಧ ಮಂದಿರ (Buddhist Temple) ಎಂದು ನಾನು ಹೇಳಿದ್ದೇನೆ. ಕೆ ಜಮನದಾಸ್ ಅವರು ‘ತಿರುಪತಿ ಬಾಲಾಜಿ ಮೂಲತಃ ಬೌದ್ಧ ಮಂದಿರ’ (ಏಪ್ರಿಲ್ 14, 2001) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ. ಇತಿಹಾಸಕಾರರ ಪ್ರಕಾರ, ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರಲಿಲ್ಲ – ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ/ಆ ಕ್ರ ಮ ಣ ಮಾಡಲಾಗಿದೆ ಎಂದು ಬರೆದಿದ್ದಾರೆ.

ನಟ ಚೇತನ್ ಅವರ ಈ ಪೋಸ್ಟ್ ಗೆ‌ ಎಂದಿನಂತೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಕೆಲವರು ನಟನ ಮಾತಿಗೆ ಬೆಂಬಲವನ್ನು ನೀಡುತ್ತಿದ್ದರೆ, ಇನ್ನೂ ಕೆಲವರು ಅವರ ಮಾತನ್ನು ವಿರೋಧಿಸಿದ್ದಾರೆ. ದೇವಾಲಯಗಳನ್ನು ಕೆಡವಿ ಅವುಗಳ ಮೇಲೆ ನಿರ್ಮಾಣ ಮಾಡಲಾಗಿರುವ ಮಸೀದಿ ಮತ್ತು ಚರ್ಚ್ ಗಳ ಬಗ್ಗೆ ನೀವು ಏನು ಹೇಳುವಿರಿ ಎಂದು ನೆಟ್ಟಿಗರೊಬ್ಬರು ಪ್ರಶ್ನೆಯನ್ನು ಸಹಾ‌ ಮಾಡಿದ್ದಾರೆ. ಇನ್ನೂ ಕೆಲವರು ಎಲ್ಲಾ ಮಂದಿರಗಳು ಬುದ್ಧನದೇ ಎಂದು ವ್ಯಂಗ್ಯ ಮಾಡಿದ್ದಾರೆ. ಸದ್ಯಕ್ಕೆ ಚೇತನ್ ಅವರ ಪೋಸ್ಟ್ ವೈರಲ್ ಆಗ್ತಿದೆ.

Leave a Comment